IPL 2025 Qualifier: ಆರ್‌ಸಿಬಿ ಸೇರಿ ಐಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದ 4 ತಂಡಗಳು ಹಾಗೂ ಕ್ವಾಲಿಫೈಯರ್ ಭವಿಷ್ಯ

IPL 2025 Qualifier 1-2 Prediction: ಐಪಿಎಲ್‌ 2025ನೇ ಆವೃತ್ತಿ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್‌ ಪ್ರವೇಶ ಮಾಡಿವೆ. ಹಾಗಾದ್ರೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿ ಉಳಿದ ಮೂರು ತಂಡಗಳ ಕ್ವಾಲಿಫೈಯರ್ ಎಂಟ್ರಿ ಭವಿಷ್ಯ ಹೇಗಿದ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ-ಪಾಕಿಸ್ತಾನದ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಐಪಿಎಲ್‌ 2025 ಟೂರ್ನಿಯನ್ನು ಬಿಸಿಸಿಐ ಅರ್ಧಕ್ಕೆ ರದ್ದುಗೊಳಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಬಳಿಕ ಎರಡು ದೇಶಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಟೂರ್ನಿಯನ್ನು ಹೊಸ ವೇಳಾಪಟ್ಟಿಯಂತೆ ಮೇ 17ರಿಂದ ಆರಂಭಿಸಲಾಯಿತು.

IPL 2025 Qualifier Prediction Know details

ಇದೀಗ ಐಪಿಎಲ್‌ ಟೂರ್ನಿ ಮುಕ್ತಾಯದ ಹಂತದಲ್ಲಿದ್ದು, ಪ್ಲೇ ಆಫ್‌ಗೆ ಗುಜರಾತ್ ಟೈಟಾನ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌ ತಂಡಗಳು ಎಂಟ್ರಿ ಕೊಟ್ಟಿದ್ದು, ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿ ಸಜ್ಜಾಗಿವೆ. ಆದರೆ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ಆಡುವ ತಂಡಗಳು ಯಾವುವು ಎಂಬುದು ಇನ್ನೂ ನಿರ್ಧಾರ ಆಗಬೇಕಿದೆ ಅಷ್ಟೇ.

ಪ್ಲೇ ಆಫ್‌ ಪ್ರವೇಶ ಪಡೆದ ತಂಡಗಳು

* ಗುಜರಾತ್ ಟೈಟಾನ್ಸ್‌
* ರಾಯಲ್‌ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಕಿಂಗ್ಸ್‌
* ಮುಂಬೈ ಇಂಡಿಯನ್ಸ್

* ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಇದುವರೆಗೂ ಆಡಿದ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, 3 ಸೋಲು ಕಂಡಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ, ಪ್ಲೇ ಆಫ್‌ ಕೂಡ ಪ್ರವೇಶ ಮಾಡಿದೆ. ಮತ್ತೊಂದೆಡೆ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ 22 ಅಂಕಗಳನ್ನು ಪಡೆದು ಅಗ್ರಸ್ಥಾನದೊಂದಿದೆ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಬಹುದಾಗಿದೆ.

* ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ 12 ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ 3 ಸೋಲು, 8 ಗೆಲುವು, ಒಂದು ರದ್ದಿನೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ, 21 ಅಂಕಗಳೊಂದಿಗೆ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಇದೆ. ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ.

* ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ತಂಡವು ಇದುವರೆಗೆ 12 ಪಂದ್ಯಗಳನ್ನಾಡಿದೆ. ಇವುಗಳಲ್ಲಿ 8 ಗೆಲುವು, ಮೂರು ಸೋಲು ಕಂಡಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉಳಿದ 2 ಪಂದ್ಯಗಳಲ್ಲಿ ಗೆದ್ದರೆ, 21 ಅಂಕಗಳನ್ನು ಪಡೆಯಬಹುದು. ಅಲ್ಲದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅವಕಾಶ ಇರಲಿದೆ.

* ಮುಂಬೈ ಇಂಡಿಯನ್ಸ್: ಮುಂಬೈ ಇಂಡಿಯನ್ಸ್ ಈವರೆಗೂ 13 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ 5ರಲ್ಲಿ ಸೋಲು, 8ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯದಲ್ಲಿ ಗೆದ್ದರೆ, 18 ಅಂಕಗಳನ್ನು ಪಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲು ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಸೋಲಿಗೆ ಕಾಯಬೇಕಿದೆ. ಇಲ್ಲದಿದ್ದರೆ, ಮೊದಲೆರಡು ಸ್ಥಾನ ಕಷ್ಟ ಎಂದೇ ಹೇಳಲಾಗುತ್ತಿದೆ.

ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೆ ಒಟ್ಟು ಅಂಕಗಳ ಸಂಖ್ಯೆ 20 ಆಗಲಿದೆ. ಮತ್ತೊಂದೆಡೆ ಆರ್ಸಿಬಿ ಗೆದ್ದರೆ 19 ಅಂಕ ಪಡೆಯಲಿದೆ. ಆಗ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಗೆದ್ದರೂ ಸಹ 18 ಅಂಕಗಳನ್ನು ಮಾತ್ರ ಪಡೆದುಕೊಳ್ಳಲಿದ್ದು, ಎಲಿಮಿನೇಟರ್ ಪಂದ್ಯ ಆಡುವುದು ಖಚಿತ ಆದಂತಾಗಲಿದೆ.

ಇದೀಗ ಕ್ವಾಲಿಫೈಯರ್ ಪಂದ್ಯ ಆಡಲು ಹೆಚ್ಚು ಅವಕಾಶ ಇರುವುದು ಜಿಟಿ ಮತ್ತು ಆರ್‌ಸಿಬಿಗೆ ಎಂದೇ ಹೇಳಲಾಗುತ್ತದೆ. ಯಾಕೆಂದ್ರೆ ಈ ಎರಡು ತಂಡಗಳು ಉಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಬಹುತೇಕ ಮೊದಲೆರಡು ಸ್ಥಾನದಲ್ಲಿರಲಿವೆ. ಆಗ ಇನ್ನುಳಿದ ಎರಡು ತಂಡಗಳು ಎಲಿಮಿನೇಟರ್ ಪಂದ್ಯ ಆಡಬೇಕಾಗುತ್ತದೆ.

ಯಾವ ಪಂದ್ಯ ಯಾವಾಗ ನಡೆಯಲಿದೆ?

* ಮೊದಲ ಕ್ವಾಲಿಫೈಯರ್ ಪಂದ್ಯ ಮೇ 29ರಂದು ಚಂಡೀಗಢದಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಎಲಿಮಿನೇಟರ್ ಪಂದ್ಯ ಮೇ 30ರಂದು ಚಂಡೀಗಢದಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಎರಡನೇ ಎಲಿಮಿನೇಟರ್ ಪಂದ್ಯ ಜೂನ್‌ 1ರಂದು ಅಹಮದಬಾದ್‌ನಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.
* ಫೈನಲ್‌ ಪಂದ್ಯ ಜೂನ್‌ 3ರಂದು ಅಹಮದಬಾದ್‌ನಲ್ಲಿ ಸಂಜೆ 7:30ಕ್ಕೆ ನಡೆಯಲಿದೆ.

ಟೂರ್ನಿಯಿಂದ ಹೊರಬಿದ್ದ ತಂಡಗಳು

* ಡೆಲ್ಲಿ ಕ್ಯಾಪಿಟಲ್ಸ್
* ಕೊಲ್ಕತ್ತಾ ನೈಟ್‌ ರೈಡರ್ಸ್
* ಲಕ್ನೋ ಸೂಪರ್ ಜೈಂಟ್ಸ್‌
* ಸನ್‌ ರೈಸರ್ಸ್‌ ಹೈದರಾಬಾದ್
* ರಾಜಸ್ತಾನ್‌ ರಾಯಲ್ಸ್
* ಚೆನ್ನೈ ಸೂಪರ್ ಕಿಂಗ್ಸ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+