IPL 2025 Qualifier: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 ಹೇಗಿದೆ ಗೊತ್ತಾ?
IPL 2025 Qualifier match: ಐಪಿಎಲ್ 2025 ಆವೃತ್ತಿ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇಂದು (ಮೇ 29) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಪಂದ್ಯ ಆಡಲಿವೆ. ಹಾಗಾದ್ರೆ, ಈ ಪಂದ್ಯದಲ್ಲೇ ಗೆದ್ದು ಫೈನಲ್‌ಗೇರುವ ಭರಸೆಯಲ್ಲಿರುವ ಆರ್‌ಸಿಬಿಯ ಪ್ಲೇಯಿಂಗ್ 11 ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಸೀಸನ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದಶರ್ನ ತೋರಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡು ಕ್ವಾಲಿಫೈಯರ್ ಪ್ರವೇಶ ಮಾಡಿದೆ. ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದ್ದು, ಇದರಲ್ಲಿ ಗೆಲುವು ಸಾಧಿಸಿ ಫೈನಲ್‌ಗೇರುವ ಹಠ ತೊಟ್ಟಿದೆ.

ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಸಹ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನ ಪಡೆದು ಇಂದು ಆರ್‌ಸಿಬಿ ವಿರುದ್ಧ ಮೊದಲ ಸೆಣಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಇಂದಿನ ಈ ಹೈವೊಲ್ಟೇಜ್ ಪಂದ್ಯ ಚಂಡೀಗಢದ ಮುಲ್ಲಾನ್ಪೂರದ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಆರಂಭವಾಲಿದೆ. ಇದಕ್ಕೂ ಮುನ್ನ 7 ಗಂಟೆಗೆ ಟಾಸ್ ಆಗಲಿದೆ.
ನೇರಪ್ರಸಾರ ವೀಕ್ಷಣೆ ವಿವರ: ಈ ಹೈವೋಲ್ಟೇಜ್ ಪಂದ್ಯ ವೀಕ್ಷಣೆ ಮಾಡಲು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಯಾಕಂದ್ರೆ ಇಂದು ಗೆಲ್ಲುವ ತಂಡವು ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ. ಸೋತ ತಂಡ ಎಲಿಮಿನೇಟರ್‌ನ ವಿಜೇತ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್ ಆಡಲಿದೆ. ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟವರ್ಕ್ ಮತ್ತು ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಣೆ ಮಾಡಬಹುದು.
ಮುಲ್ಲಾನ್ಪೂರ್ ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಮೊತ್ತದ ಸ್ಕೋರ್‌ಗಳನ್ನು ಕಲೆಹಾಕುವುದು ಸುಲಭದ ಮಾತಲ್ಲ. ಇಲ್ಲಿ ಚೇಸಿಂಗ್‌ಗಿಂತ ಮೊದಲು ಬ್ಯಾಟ್ ಮಾಡಿ ತಂಡಗಳೇ ಹೆಚ್ಚು ಗೆದ್ದಿವೆ. ಆದ್ದರಿಂದ ಇಂದಿನ ಪಂದ್ಯ ಟಾಸ್ ಮೇಲೆಯೂ ನಿರ್ಧಾರ ಆಗಲಿದೆ ಎಂದರೆ ತಪ್ಪಾಗಲಾರದು.
ಆರ್‌ಸಿಬೆ ಪ್ಲಸ್: ಕಳೆದ ಮೂರು ಪಂದ್ಯಗಳಿಂದ ಆರ್‌ಸಿಬಿ ಮಾರಕ ಬೌಲರ್ ಜೋಶ್ ಹೇಜಲ್‌ವುಡ್ ಭುಜದ ನೋವು ಹಿನ್ನೆಲೆ ತಂಡದಿಂದ ಹೊರಗುಳಿದಿದ್ದರು. ಆದರೆ, ಇಂದು ನಡೆಯುವ ಪಂಜಾಬ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಇದರಿಂದ ಆರ್‌ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದು, ಮತ್ತೊಂದೆಡೆ ಅಭಿಮಾನಿಗಳಲ್ಲಿ 'ಜೋಶ್' ಬಂದತಾಗಿದೆ.
ಆರ್‌ಸಿಬಿ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಉಮರ್ಝಾಯಿ, ಹರ್‌ಪ್ರೀತ್ ಬ್ರಾರ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್.












Click it and Unblock the Notifications