IPL 2025: ಟೇಬಲ್ ಟಾಪರ್ ಆರ್‌ಸಿಬಿ: ಪ್ಲೇಆಫ್‌ ತಲುಪಲು 7 ತಂಡಗಳಿಂದ ತೀವ್ರ ಸ್ಪರ್ಧೆ

ಐಪಿಎಲ್ 2025ರ ಆವೃತ್ತಿಯಲ್ಲಿ ಸೋಮವಾರದ ಪಂದ್ಯದ ಬಳಿಕ 47 ಪಂದ್ಯಗಳು ಮುಕ್ತಾಯವಾಗಿದೆ. ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬರುತ್ತಿದ್ದು ಅಗ್ರ ನಾಲ್ಕು ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು ಉಳಿದ 4 ಪಂದ್ಯಗಳಲ್ಲಿ ಒಂದು ಅಥವಾ ಎರಡು ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.

ಪ್ಲೇಆಫ್ ತಲುಪಲು ಈಗ 7 ತಂಡಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರತಿ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಉತ್ಸಾಹದಲ್ಲಿವೆ. ಮುಂಬೈ ಇಂಡಿಯನ್ಸ್ 10 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ipl 2025 playoff scenarios rcb can finish table topper

ಗುಜರಾತ್ ಟೈಟಾನ್ಸ್ 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೂ ಎಲ್ಲಾ ತಂಡಗಳಿಗೂ ಇನ್ನೂ ಪ್ಲೇಆಫ್ ಅವಕಾಶ ಜೀವಂತವಾಗಿದೆ. 7 ತಂಡಗಳು ಪ್ಲೇಆಫ್‌ ತಲುಪಲು ಉತ್ತಮ ಅವಕಾಶ ಹೊಂದಿವೆ. ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮಾತ್ರ ಅರ್ಹತೆ ಪಡೆಯಲು ಇತರ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರದ ಅಗತ್ಯವಿದೆ.

ಯಾವ ತಂಡಗಳಿಗೆ ಅವಕಾಶ ಹೆಚ್ಚು?

ಯಾವುದೇ ತಂಡ ಉತ್ತಮ ರನ್‌ರೇಟ್‌ನೊಂದಿಗೆ 16 ಅಂಕಗಳನ್ನು ಹೊಂದಿದ್ದರೆ ಪ್ಲೇಆಫ್‌ ತಲುಪುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಈ ಬಾರಿ ಸ್ಪರ್ಧೆ ನೋಡಿದರೆ 18 ಅಂಕಗಳನ್ನು ಪಡೆಯಲು ಎಲ್ಲಾ ತಂಡಗಳು ಲೆಕ್ಕಾಚಾರ ಹಾಕಿಕೊಂಡಿವೆ. ಆರ್‌ಸಿಬಿ, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಇದರಲ್ಲಿ 2 ತಂಡಗಳು ಅಗ್ರ 2 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ ಸಿಎಸ್‌ಕೆ, ಎಲ್‌ಎಸ್‌ಜಿ, ಎಸ್‌ಆರ್‌ಹೆಚ್ ಮತ್ತು ಕೆಕೆಆರ್ ವಿರುದ್ಧ ಆಡಲಿದೆ. ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯಗಳಲ್ಲಿ ಎಸ್‌ಆರ್‌ಹೆಚ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಿಎಸ್‌ಕೆ ವಿರುದ್ಧ ಆಡಲಿದೆ. ಮುಂಬೈ ಇಂಡಿಯನ್ಸ್ ಉಳಿದ 4 ಪಂದ್ಯಗಳಲ್ಲಿ 2 ಪಂದ್ಯ ಗೆದ್ದರೆ ಪ್ಲೇಆಫ್‌ ಅವಕಾಶವಿರುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ಕೂಡ 12 ಅಂಕಗಳನ್ನು ಹೊಂದಿದ್ದು ಇನ್ನೂ 5 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯ ಗೆಲ್ಲಬೇಕಿದೆ. ಪಂಜಾಬ್ ಕಿಂಗ್ಸ್ 11 ಅಂಕಗಳನ್ನು ಹೊಂದಿದ್ದು ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ. 10 ಅಂಕಗಳನ್ನು ಹೊಂದಿರುವ ಎಲ್‌ಎಸ್‌ಜಿ ಪ್ಲೇಆಫ್ ಹಾದಿ ಕಠಿಣವಾಗಿದ್ದು ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕಿದ್ದು ರನ್‌ ರೇಟ್ ಕೂಡ ಉತ್ತಮಪಡಿಸಿಕೊಳ್ಳಬೇಕಿದೆ.

ಉಳಿದಂತೆ ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದ್ದು ಮಾಡು ಇಲ್ಲವೇ ಮಡಿ ಪರಿಸ್ಥಿತಿ ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+