Get Updates
Get notified of breaking news, exclusive insights, and must-see stories!

IPL 2025: ಐಪಿಎಲ್ ಮೆಗಾ ಹರಾಜಿಗೆ 1,574 ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 24-25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಾರಿ ಮೆಗಾ ಹರಾಜಿನಲ್ಲಿ ದಾಖಲೆ ಸಂಖ್ಯೆಯ ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ 1,574 ಜನ ಈ ಬಾರಿ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ನೋಂದಾಯಿಸಿಕೊಂಡ ಆಟಗಾರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ 1,166 ಆಟಗಾರರು ನೋಂದಾಯಿಸಿಕೊಂಡಿದ್ದರೆ, ಈ ಬಾರಿ ಆ ಸಂಖ್ಯೆ 1,574ಕ್ಕೆ ಏರಿಕೆಯಾಗಿದೆ.

Ipl 2025 mega auction 1574 players registered

1,165 ಭಾರತೀಯ ಆಟಗಾರರು

1,574 ಆಟಗಾರರಲ್ಲಿ 1,165 ಆಟಗಾರರು ಭಾರತೀಯರಾಗಿದ್ದರೆ, 409 ಆಟಗಾರರು ವಿದೇಶಿ ಕ್ರಿಕೆಟಿಗರಾಗಿದ್ದಾರೆ. ವಿಶ್ವದಾದ್ಯಂತ ಕ್ರಿಕೆಟ್ ಆಡುವ ದೇಶಗಳ ಆಟಗಾರರು ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. 320 ಕ್ಯಾಪ್ಡ್‌ ಆಟಗಾರರಾಗಿದ್ದು, 1224 ಅನ್ ಕ್ಯಾಪ್ಡ್ ಆಟಗಾರರು ಮತ್ತು 30 ಅಸೋಸಿಯೇಟ್ ದೇಶಗಳ ಆಟಗಾರರು ಇದ್ದಾರೆ.

ಪ್ರತಿ ಪ್ರಾಂಚೈಸಿಗಳು ಗರಿಷ್ಠ 25 ಆಟಗಾರರ ತಂಡವನ್ನು ಹೊಂದಲು ಅವಕಾಶವಿದೆ. ಒಟ್ಟಾರೆ ಗರಿಷ್ಠ 250 ಆಟಗಾರರು 10 ತಂಡಗಳಲ್ಲಿ ಇರಲು ಅವಕಾಶವಿದ್ದು ಈಗಾಗಲೇ ಎಲ್ಲಾ ತಂಡಗಳಿಂದ 46 ಆಟಗಾರರನ್ನು ರಿಟೈನ್ ಮಾಡಲಾಗಿದೆ. ಇನ್ನು 204 ಆಟಗಾರರಿಗೆ ಮಾತ್ರ ತಂಡಗಳನ್ನು ಸೇರಲು ಅವಕಾಶವಿದೆ.

ಕಳೆದ ವರ್ಷ 1166 ಆಟಗಾರರ ನೊಂದಾಯಿಸಿಕೊಂಡಿದ್ದರು 333 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಈ ಬಾರಿ ಅಂತಿಮವಾಗಿ ಎಷ್ಟು ಆಟಗಾರರು ಹರಾಜಿನಲ್ಲಿ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಚ್ಚರಿ ಎನ್ನುವಂತೆ ಇಟಲಿಯ ಓರ್ವ ಕ್ರಿಕೆಟಿಗ ಕೂಡ ಈ ಬಾರಿ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಪರ ಆಡಿದ್ದ ಜೋ ಬರ್ನ್ಸ್ ಎಂದು ಹಲವರು ಭಾವಿಸಿದ್ದರೆ ಆದರೆ ಅವರನ್ನು ಥಾಮಸ್ ಡ್ರಾಕಾ ಎಂದು ಗುರುತಿಸಲಾಗಿದೆ. ಐಎಲ್‌ಟಿ20 ಲೀಗ್‌ನಲ್ಲಿ ಇವರು ಎಂಐ ಎಮಿರೇಟ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ಒಂದು ದಿನಕ್ಕೆ ಸೀಮಿತವಾಗಿತ್ತು. ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಸೇರುವ ಮೂಲಕ ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಪ್ಯಾಟ್ ಕಮ್ಮಿನ್ಸ್ 20.50 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್‌ ಪಾಲಾಗಿದ್ದರು.

ಅನುಭವಿ ಹ್ಯೂ ಎಡ್ಮೀಡ್ಸ್ ಬದಲಾಗಿ ಮಲ್ಲಿಕಾ ಸಾಗರ್ ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿಯಾಗಿದ್ದರು. ಈ ಬಾರಿ ಕೂಡ ಅವರೇ ಹರಾಜುಗಾರ್ತಿಯಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಐಪಿಎಲ್ ಹರಾಜಿನಲ್ಲಿ ವಿವಿಧ ದೇಶದ ಆಟಗಾರರ ಸಂಖ್ಯೆ

ಭಾರತೀಯರು 1,165, ದಕ್ಷಿಣ ಆಫ್ರಿಕಾ 91, ಆಸ್ಟ್ರೇಲಿಯಾ 76, ಇಂಗ್ಲೆಂಡ್ 52, ನ್ಯೂಜಿಲೆಂಡ್ 39, ವೆಸ್ಟ್ ಇಂಡೀಸ್ 33, ಶ್ರೀಲಂಕಾ 29, ಅಫ್ಘಾನಿಸ್ತಾನ 29, ಬಾಂಗ್ಲಾದೇಶ 13, ನೆದರ್ಲ್ಯಾಂಡ್ಸ್ 12, ಯುಎಸ್‌ಎ 10, ಐರ್ಲೆಂಡ್ 9, ಜಿಂಬಾಬ್ವೆ 8, ಕೆನಡಾ 4, ಸ್ಕಾಟ್ಲೆಂಡ್ 2, ಯುಎಇ 1, ಇಟಲಿ 1.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+