Mayank Agarwal: ಎಲ್‌ಎಸ್‌ಜಿ ವಿರುದ್ಧ ಆರ್‌ಸಿಬಿ ಗೆಲುವಿಗೆ ಕನ್ನಡಿಗನ ವಿಶೇಷ ಕೊಡುಗೆ

Mayank Agarwal: ಐಪಿಎಲ್‌ 2025ನೇ ಆವೃತ್ತಿಯಲ್ಲಿ ಆರ್‌ಸಿಬಿ ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಕೊನೇ ಲೀಗ್‌ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗುವ ಮೂಲಕ ಕ್ವಾಲಿಫೈಯರ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದು, ಈ ಗೆಲುವಿನಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರದ್ದೂ ಕೂಡ ಪ್ರಮುಖ ಪಾತ್ರವಿದೆ. ಅದೇನು ಅಂತೀರಾ? ಇಲ್ಲಿದ ನೋಡಿ ಮಾಹಿತಿ.

ಹೌದು.. ಮಂಗಳವಾರ (ಮೇ 27) ಕೊನೇ 70ನೇ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿಯು ಲಕ್ನೋ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದ್ದಲ್ಲದೆ, ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟಿತು. ಈ ಪಂದ್ಯ ಗೆಲುವಿಗೆ ಪ್ರಮುಖ ಕಾರಣದವರಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರದ್ದು ವಿಶೇಷ ಪಾತ್ರವಿದೆ.

IPL 2025 Kannadiga Mayank Agarwal Special Contribution to RCB Win Against LSG

ಸಾಮಾನ್ಯವಾಗಿ ಒಂದು ಕ್ರಿಕೆಟ್‌ ತಂಡ ಟಿ-20 ಪಂದ್ಯಗಳಲ್ಲಿ ಗೆಲ್ಲಬೇಕೆಂದ್ರೆ, ಬರೀ ಹೊಡಿಬಡಿ ಆಟಗಾರರು ಇದ್ದರೆ ಸಾಲದು. ಜವಾಬ್ದಾರಿಯುತವಾಗಿ ಸಿಂಗಲ್‌ ರನ್‌ ಆಡುವವರು ಒಬ್ಬರು ಇರಲೇಬೇಕಾಗುತ್ತದೆ. ಆ ಜವಾಬ್ದಾರಿಯನ್ನು ಪ್ರಮುಖ ಪಂದ್ಯದಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಆರ್‌ಸಿಬಿ ಪರ ಆಡಿ ನಿಭಾಯಿಸಿದ್ದಾರೆ. ಈ ಸೀಸನ್‌ ಐಪಿಎಲ್‌ನಲ್ಲಿ ಆರಂಭದಿಂದಲೂ ವಿರಾಟ್‌ ಕೊಹ್ಲಿ ಅವರು ನಿಂತು ನಿಧಾನವಾಗಿ ಆಡುತ್ತಾ ಜೊತೆಯಾಟಗಾರನಿಗೆ ಸಾಥ್‌ ನೀಡುತ್ತಿದ್ದರು.

ಆದರೆ, ನಿನ್ನೆಯ ಪ್ರಮುಖ ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ, ಸಾಲ್ಟ್‌ ಸ್ಪೋಟಕ ಬ್ಯಾಟಿಂಗ್‌ ಆಡುವ ಮೂಲಕ ಉತ್ತಮ ರನ್‌ ಕಲೆಹಾಕಿ ಔಟ್‌ ಆಗಿ ಪೆವಿಲಿಯನ್‌ನತ್ತ ತೆರಳಿದರು. ಬಳಿಕ ರಜತ್ ಪಾಟಿದಾರ್ ಬೇಗನೇ ವಿಕೆಟ್‌ ಒಪ್ಪಿಸಿದರು. ಬಳಿಕ ಲಿವಿಂಗ್ ಸ್ಟೋನ್‌ ಒಂದು ರನ್‌ ಗಳಿಸದೇ ಡಕ್‌ ಔಟ್‌ ಆದರು.

ಆಗ ಆರ್‌ಸಿಬಿ ಅಭಿಮಾನಿಗಳಲ್ಲಿ ಇದ್ದಿದ್ದು, ಒಂದೇ ಚಿಂತೆ ಹೊಡಿಬಡಿ ಆಟಗಾರರೇನೋ ಇದ್ದಾರೆ, ಆದರೆ ಕೊನೆವರ್ಗೂ ವಿಕೆಟ್‌ ಕಾಪಾಡಿಕೊಂಡು ಸಿಂಗಲ್‌ ಆಡುವವರು ಯಾರು ಅಂತಾ? ಈ ಜವಾಬ್ದಾರಿಯನ್ನು ಮಯಾಂಕ್‌ ಅಗರ್ವಾಲ್‌ ನಿಭಾಯಿಸಿ ತಂಡದ ಮರ್ಯಾದೆಯನ್ನು ಕಾಪಾಡುವಲ್ಲಿ ಯಶಸ್ವಿ ಆಗಿದ್ದಾರೆ. ಜಿತೇಶ್‌ ಶರ್ಮಾಗೆ ಕೊನೆವರ್ಗೂ ಸಾಥ್‌ ನೀಡಿ ಯಾವುದೇ ಟೆನ್ಷನ್‌ ಇಲ್ಲದೆ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ತಂಡವನ್ನು ಗೆಲ್ಲಿಸುವ ಜವಾಬ್ದಾರಿ ನಾಯಕ ಜಿತೇಶ್ ಶರ್ಮಾ ಅವರ ಮೇಲಿತ್ತು. ಆಗ ಅವರು ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸಿ ಲಕ್ನೋ ಸೂಪರ್ ಜೈಂಟ್ಸ್‌ ಬೌಲರ್‌ಗಳನ್ನು ಚೆಂಡಾಡಿ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಇದಕ್ಕೆ ಸೂತ್ರದಾರಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌. ಬೌಂಡರಿ, ಸಿಂಗ್‌ಲ್‌ ಹೊಡೆದುಕೊಡುತ್ತಾ ಕೊನೇವರ್ಗೂ ಉತ್ತಮ ಸಾಥ್‌ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಇಬ್ಬರು ನಾಟ್‌ ಔಟ್‌ ಆಗಿ ಉಳಿದು ಮಿಂಚಿದರು.

ಹೀಗೆ ಲಿವಿಂಗ್ಸ್ಟೋನ್‌ ಡಕ್‌ ಔಟ್‌ ಆಗುತ್ತಿದ್ದಂತೆ ಕಣಕ್ಕಿಳಿದ ಅಗರ್ವಾಲ್‌ ಬೌಂಡಿರಿಗಳ ಸುರಿಮಳೆಯನ್ನೇ ಸುರಿಸುವುದಲ್ಲದೇ ಜಿತೇಶ್‌ಗೆ ಸಿಂಗಲ್‌ ಹಾಕುತ್ತಾ ಜವಾಬ್ದಾರಿಯುತ ಆಟವನ್ನು ಆಡಿದರು. ಜಿತೇಶ್‌ ಶರ್ಮಾ ಕೇವಲ 33 ಬಾಲ್‌ಗಳಿಗೆ 8 ಬೌಂಡರಿ 6 ಸಿಕ್ಸರ್‌ನೊಂದಿಗೆ ಬರೋಬ್ಬರಿ 85 ರನ್‌ಗಳನ್ನು ಕಲೆಹಾಕಿದರೆ, ಮಯಾಂಕ್‌ ಅಗರ್ವಾಲ್‌ 22 ಬಾಲ್‌ಗಳಲ್ಲಿ 5 ಬೌಂಡರಿಗಳ ಸಹಿತ 41 ರನ್‌ ಚಚ್ಚಿ ಎಲ್‌ಎಸ್‌ಜಿ ಬೌಲರ್‌ಗಳಿಗೆ ಬೆರವಳಿಸಿದರು. ಮತ್ತೊಂದೆಡೆ ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದವರಿಗೂ ಮುಟ್ಟಿ ನೋಡಿಕೊಳ್ಳುವ ಹಾಗೆ ಬ್ಯಾಟ್‌ ಮೂಲಕ ಉತ್ತರ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+