RCB Vs PBKS Toss: ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ಬೌಲಿಂಗ್ ಆಯ್ಕೆ

RCB Vs PBKS Toss: ಐಪಿಎಲ್‌ 2025 ಹೈ ವೋಲ್ಟೇಜ್‌ ಫೈನಲ್‌ ಪಂದ್ಯ ಪಂಜಾಬ್‌ ಕಿಂಗ್ಸ್‌-ಆರ್‌ಸಿಬಿ ನಡುವೆ ನಡೆಯಲಿದೆ. ಇನ್ನು ಟಾಸ್‌ ಗೆದ್ದ ಪಂಜಾಬ್‌ ಪಡೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಅದರಂತೆಯೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್‌ ಬೀಸಲು ಸಜ್ಜಾಗಿದೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ಫೈನಲ್‌ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರಿಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಟಾಸ್‌ ಟಾಸದ್‌ ಗೆದ್ದ ಅಯ್ಯರ್ ಬಳಗ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಅದರಂತೆಯೇ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಲಿದೆ.

IPL 2025 Final Match PBKS Choose to Bowl After Winning Toss Against RCB

ಈ ಹೈ ವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡ ಮೊದಲ ಬಾರಿ ಐಪಿಎಲ್‌ ಟ್ರೋಫಿ ಎತ್ತಲಿದೆ. ಕಳೆದ 17 ವರ್ಷಗಳಿಂದ ಈ ಎರಡೂ ಉಭಯ ತಂಡಗಳು ಒಂದೇ ಒಂದು ಟ್ರೋಫಿಯನ್ನು ಸಹ ಗೆದ್ದಿಲ್ಲ. ಆದ್ದರಿಂದ ಇಂದಿನ ಪಂದ್ಯ ಹೈವೋಲ್ಟೇಜ್‌ ಆಗಿರಲಿದೆ. ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಟ್ರಫಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟು ನಿಂತಿದೆ. ಒಂದು ವೇಳೆ ಈ ಬಾರಿ ಕಪ್‌ ಗೆದ್ದರೆ, ಇತಿಹಾಸವೇ ನಿರ್ಮಾಣವಾಗಲಿದೆ.

ಮತ್ತೊಂದೆಡೆ ಆರ್‌ಸಿಬಿ ಅಭಿಮಾನಿಗಳು ಪ್ರತಿ ಬಾರಿಯೂ ಈ ಸಲ ಕಪ್ ನಮ್ದೆ ಎಂದು ಘೋಷಣೆ ಕೂಗುತ್ತ ಬಂದಿದ್ದರು ಆದರೂ ಇದು ಸಾಧ್ಯವಾಗಿರಲಿಲ್ಲ. ಆದರೆ, 18ನೇ ಸೀಸನ್‌ನಲ್ಲಿ ಈ ಘೋಷವಾಕ್ಯ ನಿಜವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಯಾಕಂದ್ರೆ ಆರ್‌ಸಿಬಿ ಈ ಸೀಸನ್‌ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿ ಫೈನಲ್‌ಗೇರಿದೆ.

ಸಂಖ್ಯಾಶಾಸ್ತ್ರದ ಲಾಜಿಕ್‌ ಪ್ರಕಾರವು ಈ ಬಾರಿ ಆರ್‌ಸಿಬಿ ಟ್ರೋಫಿ ಎತ್ತಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ ಫೈನಲ್‌ ಪಂದ್ಯ ಆಡುವ ಮುಂಚೆಯೇ ಈ ಸಂಖ್ಯೆಗಳು ಭಾರೀ ವೈರಲ್‌ ಆಗುತ್ತಿವೆ. ಇವುಗಳು ಒಂದಕ್ಕೊಂದು ಸಹ ಒಂದಾಣಿಕೆಯೂ ಆಗುತ್ತಿವೆ.

ವಿರಾಟ್‌ ಕೊಹ್ಲಿ ಜಿರ್ಸಿ ನಂಬರ್, ಸೀಸನ್‌ 18ಗೆ 3-6-2025 ದಿನಂಕವು ಹೋಲಿಕೆ ಆಗುತ್ತಿದೆ. ಇದರ ಅರ್ಥ 3+6+2+2+5=18 ಆಗಿದೆ. ಆದ್ದರಿಂದ 18ರ ನಂಟು ಆರ್‌ಸಿಬಿಗೆ ಇದ್ದು, ಈ ಬಾರಿ ಟ್ರೋಫಿ ಎತ್ತುವುದೇ ಆರ್‌ಸಿಬಿ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+