IPL 2025: ಐಪಿಎಲ್ 2025 ಸ್ಥಗಿತದ ಬೆನ್ನಲ್ಲೇ ಬಿಸಿಸಿಐಗೆ ಬಿಗ್ ಆಫರ್
IPL 2025: ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಬಿಸಿಸಿಐ ಐಪಿಎಲ್ 2025ರ ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿದೆ. ಆಟಗಾರರ ಹಿತ ದೃಷ್ಟಿಯಿಂದ ಪ್ರಾಂಚೈಸಿ ಮನವಿ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಇದರ ಬೆನ್ನಲ್ಲೇ ಭಾರತೋಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಗೆ ಬಿಗ್ ಆಫ್‌ರ್‌ವೊಂದು ಸಿಕ್ಕಿದೆ.
ಆಟಗಾರರು, ಅಭಿಮಾನಿಗಳು, ಪ್ರಾಂಚೈಸಿಗಳ ಭದ್ರತೆ ದೃಷ್ಟಿಯಿಂದ ಐಪಿಎಲ್ 2025ರ ಆವೃತ್ತಿಯನ್ನು ಒಂದು ವಾರದ ಮಟ್ಟಿಗೆ ಬಿಸಿಸಿಐ ಸ್ಥಗಿತಗೊಳಿದ್ದು, ಶೀಘ್ರದಲ್ಲೇ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದೆ. ಐಪಿಎಲ್‌ನಲ್ಲಿ ಬರೀ ದೇಶಿಯ ಆಟಗಾರರು ಅಷ್ಟೇ ಅಲ್ಲ, ವಿದೇಶಿ ಆಟಗಾರರು ಸಹ ಪಾಲ್ಗೊಂಡಿದ್ದಾರೆ. ಆದ್ದರಿಂದ, ಅವರ ರಕ್ಷಣೆ ನಮ್ಮ ದೇಶದ ಮೇಲಿದ್ದು, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೊರೊನಾ ಸಮಯದಲ್ಲಿ ಐಪಿಎಲ್ ಟೂರ್ನಿಯನ್ನು ವಿದೇಶದಲ್ಲಿ ಆಡಿಸಲಾಗಿತ್ತು. ಹಾಗೆಯೇ ಇದೀಗ ಪರಿಸ್ಥಿತಿ ಇನ್ನೂ ಹದಗೆಟ್ಟರೆ, ಬಿಸಿಸಿಐ ಮತ್ತ ಇದನ್ನೇ ಮುಂದುವರೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐಗೆ ಬಿಗ್ ಆಫರ್‌ವೊಂದು ಸಿಕ್ಕಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಉಳಿದ ಐಪಿಎಲ್ 2025ರ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಿ ಎಂದು ಹೇಳಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಭದ್ರತಾ ಕಾರಣಗಳಿಂದ ಅರ್ಧಕ್ಕೆ ರದ್ದುಗೊಳಿಸಲಾಗಿತ್ತು. ಈ ವೇಳೆ ಅಲ್ಲಿದ್ದ ಆಟಗಾರರು, ಅಭಿಮಾನಿಗಳನ್ನು ಸ್ಥಳಾಂತರ ಮಾಡುವ ಕೆಲಸ ನಡೆಯಿತು. ವಿಮಾನ ನಿಲ್ದಾಣಗಳನ್ನು ರದ್ದುಪಡಿಸಿದ ಹಿನ್ನೆಲೆ ಆಟಗಾರರನ್ನು ವಿಶೇಷ ರೈಲಿನಲ್ಲಿ ದೆಹಲಿ ತಲುಪಿಸುವ ಪ್ರಯತ್ನ ಕೂಡ ನಡೆದಿದೆ.
ಇದಾದ ಮರುದಿನವೇ ಅಂದರೆ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವೆ ನಗದಿಯಾದ್ದ ಪಂದ್ಯದ ದಿನವೇ ಆಟಗಾರರ ಭದ್ರತೆ ದೃಷ್ಟಿಯಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಗೊಳಿಸಿ ಒಂದು ವಾರ ಮುಂದೂಡಿಕೆ ಮಾಡಿತು. ಇದೀಗ ಪ್ಲೇ ಆಫ್ ಸೇರಿದಂತೆ ಇನ್ನೂ 16 ಪಂದ್ಯಗಳು ನಡೆಯಬೇಕಿದೆ. ಈ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸುವಂತೆ ಆಫರ್ ಬಂದಿದೆ.
ಇಸಿಬಿ ಪ್ರಸ್ತಾಪ ಏನು?: ಈ ವಿಚಾರ ತಿಳಿಸದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ ಗೌಲ್ಡ್ ಬಿಸಿಸಿಐ ಅನ್ನು ಸಂಪರ್ಕಿಸಿದ್ದಾರೆ. ಐಪಿಎಲ್ 2025ನೇ ಆವೃತ್ತಿಯ ಅರ್ಧಕ್ಕೆ ಸ್ಥಗೊತಗೊಳಿಸಿರುವ ಉಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಿ ಎಂದು ಇಸಿಬಿ ಪ್ರಸ್ತಾಪ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರೆದರೆ, ಬಿಸಿಸಿಐ ಐಪಿಎಲ್ ಉಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಒಟ್ಟಿನಲ್ಲಿ ಇದೀಗ ಭಾರತಕ್ಕೆ ವಿದೇಶಿ ಆಟಗಾರರ ಭದ್ರತೆಯ ಹೊಣೆ ಇದ್ದು, ಬಿಸಿಸಿಐ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications