RCB: ಆರ್‌ಸಿಬಿ ಕಪ್ ಗೆಲ್ಲುವ ನೆಚ್ಚಿನ ತಂಡವೆಂದ ಅಂಬಾಟಿ ರಾಯುಡು

ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಂಬೈ ಇಂಡಿಯನ್ಸ್ ವಿರುದ್ದ 12 ರನ್‌ಗಳ ಗೆಲುವು ಸಾಧಿಸಿದೆ. 10 ವರ್ಷಗಳ ಬಳಿಕ ಮುಂಬೈನ ವಾಂಖೆಡೆಯಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಗೆದ್ದ ಸಾಧನೆ ಮಾಡಿದೆ. ಆರ್ ಸಿಬಿ ತಂಡದ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರ್ ಸಿಬಿ ವಿರುದ್ಧ ವ್ಯಂಗ್ಯವಾಡುವ ಸಿಎಸ್‌ಕೆ, ಎಂಎಸ್ ಧೋನಿ ಮಾತ್ರ ಗ್ರೇಟ್ ಎನ್ನುವ ಅಂಬಾಟಿ ರಾಯುಡು ಮೊದಲ ಬಾರಿಗೆ ರಜತ್ ಪಟಿದಾರ್ ಅವರ ನಾಯಕತ್ವದ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಐಪಿಎಲ್ 2025ರ ಆವೃತ್ತಿಯಲ್ಲಿ ಆರ್ ಸಿಬಿ ಬಲಿಷ್ಠ ತಂಡವಾಗಿ ಕಾಣಿಸುತ್ತಿದ್ದು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ipl 2025 e sala cup rcb de ambati rayudu backs patidar captaincy

ಆರ್ ಸಿಬಿ ತನ್ನ ಸಾಮರ್ಥ್ಯಕ್ಕೆ ಆಡಿದರೆ 18 ವರ್ಷಗಳ ಸುರ್ದೀಘ ಕಾಯುವಿಕೆಯನ್ನು ಅಂತ್ಯಗೊಳಿಸಬಹುದು. ಈ ಬಾರಿ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಈ ವರ್ಷ ತಂಡವು ಬಲಿಷ್ಠವಾಗಿದೆ

"ನೀವು ಆರ್ ಸಿಬಿ ತಂಡವನ್ನು ನೋಡಿದರೆ, ಅವರು ಸಾಕಷ್ಟು ಉತ್ತಮ ಸಂಯೋಜನೆಯನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ ತಂಡಗಳನ್ನು ನೀವು ನೋಡಿದರೆ, ಅವರು ಇನ್ನೂ ತಮ್ಮ ಪ್ಲೇಯಿಂಗ್‌ 11 ಸರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡದ ಪ್ಲೇಯಿಂಗ್ ಇಲೆವೆನ್‌ ಅನ್ನು ಸರಿಯಾಗಿ ಹೊಂದಿಸಿದ್ದಾರೆ ಎಂದರು.

"ನಾನು ಯಾವಾಗಲೂ ಆರ್ ಸಿಬಿ ಕ್ರಿಕೆಟ್ ಅನ್ನು ಆನಂದಿಸಿದ್ದೇನೆ. ಯಾರೂ ಡಿಸಿ ಅಥವಾ ಪಂಜಾಬ್ ಬಗ್ಗೆ ಮಾತನಾಡುವುದಿಲ್ಲ. ಆರ್‌ಸಿಬಿ ಯಾವಾಗಲೂ ಐಪಿಎಲ್ ಗೆಲ್ಲಬಲ್ಲ ತಂಡವನ್ನು ಹೊಂದಿರುವುದರಿಂದ ಮಾತ್ರ ಮಾತನಾಡುತ್ತೇವೆ. ಆದರೆ ಹೇಗೋ, ಅವರು ತಮ್ಮದೇ ಆದ ನ್ಯೂನತೆಗಳಿಂದಾಗಿ ವಿಫಲರಾಗುತ್ತಾರೆ. ಬೇರೆ ಯಾರೂ ಅವರನ್ನು ಸೋಲಿಸುವುದಿಲ್ಲ, ಅದು ಅವರೇ ಆಗಿದ್ದಾರೆ, ಆದರೆ ಈ ವರ್ಷ, ರಜತ್ ಪಾಟಿದಾರ್ ನಾಯಕನಾಗಿ ಈ ವರ್ಷ ಆರ್‌ಸಿಬಿ ಕಪ್ ಗೆಲ್ಲುವ ಸಾಧ್ಯತೆ ಇದೆ" ಎಂದರು.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್‌ ಮೊದಲ ಎರಡು ಸ್ಥಾನದಲ್ಲಿವೆ. ಆರ್ ಸಿಬಿ ಹೊರಗೆ ಆಡಿದ ಮೂರು ಪಂದ್ಯಗಳನ್ನು ಗೆದ್ದಿದ್ದು ತವರಿನಲ್ಲಿ ಆಡಿದ ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ.

ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಒಂದು ಹಂತದಲ್ಲಿ ಆರ್ ಸಿಬಿ ಸೋಲಿನ ಒತ್ತಡಕ್ಕೆ ಸಿಲುಕಿತ್ತು. ಅಂತಹ ಸಂದರ್ಭದಲ್ಲೂ ಪಾಟಿದಾರ್ ಅವರ ದೃಢ ನಿರ್ಧಾರಗಳ ಬಗ್ಗೆ ಅಂಬಾಟಿ ರಾಯುಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರನ್ನು 18ನೇ ಓವರ್ ನಲ್ಲಿ ಬೌಲಿಂಗ್ ಮಾಡಿಸಿದ್ದು ಅದ್ಭುತ ನಡೆ ಎಂದು ರಾಯುಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+