IPL 2025 Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ KL ರಾಹುಲ್, RCB ಫ್ಯಾನ್ಸ್‌ಗೆ ನಿರಾಸೆ

IPL 2025 Auction: ಪ್ರಸಕ್ತ 2025 ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಹರಾಜು ಪ್ರಕ್ರಿಯೆ ಸೌದಿ ಅರೆಬಿಯಾ ಜೆಡ್ಡಾದಲ್ಲಿ ನಡೆದಿದೆ. ಇದರಲ್ಲಿ 'ರಾಯಲ್ ಚಾಲಿಂಜ್ ಬೆಂಗಳೂರು (RCB)' ಟೀಂ ನಿಂದಲೇ ಕನ್ನಡಿಗರಿಗೆ ನಿರಾಸೆಯಾಗಿದೆ. ಕನ್ನಡಿಗರು ಸೇರಿದಂತೆ ಅಪಾರ ಅಭಿಮಾನಿಗಳ ಬೆಂಬಲ ಹೊಂದಿರುವ ಆರ್‌ಸಿಬಿ ಟೀಮ್ ಕನ್ನಡಿಗರನ್ನು ಹರಾಜಿನಲ್ಲಿ ಕೊಳ್ಳದೇ ಕಡೆಗಣಿಸಿದೆ. ಇದರಿಂದ ಆರ್‌ಸಿಬಿ ಫ್ಯಾನ್ಸ್‌ಗೆ ನಿರಾಸೆಯಾಗಿದೆ.

ಹೌದು ಕನ್ನಡಿಗೆ ಕೆ.ಎಲ್‌.ರಾಹುಲ್ ಅವರನ್ನು ಭಾನುವಾರ ಹರಾಜಿನಲ್ಲಿ ಖರೀದಿಸದೇ ಕೈ ಚೆಲ್ಲಿದ 'ರಾಯಲ್ ಚಾಲಿಂಜ್ ಬೆಂಗಳೂರು (RCB)'ಯಿಂದಾಗಿ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ಮೊದಲಿನಿಂದಲೂ ಟೀಂ ಇಂಡಿಯಾದ ಉತ್ತಮ ಆಟಗಾರ ಕೆಎಲ್ ರಾಹುಲ್ ಅವರನ್ನು ಟೀಂ ಗೆ ಕರೆತರಬೇಕು. ಇದರಿಂದ ಆರ್‌ಸಿಬಿ ಟೀಂ ಬಲ ಹೆಚ್ಚಲಿದೆ ಎಂದೆಲ್ಲ ಫ್ಯಾನ್ಸ್ ಭಾವಿಸಿದ್ದರು.

IPL 2025 Auction Delhi Capitals buy KL Rahul RCB Ignores Kannadigas RCB Fans Disappointed

ಉತ್ತಮ ಆಟಗಾರ ಕೆಎಲ್ ರಾಹುಲ್ ಶಕ್ತಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ಅವರನ್ನು ಖರೀದಿಸುವಲ್ಲಿ ಆರ್‌ಬಿಸಿ ತೋರಿದ ನಿರಾಸಕ್ತಿಯಿಂದಾಗಿ ಇಂದು ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ ಟೀಂ ಪಾಲಾಗಿದ್ದಾರೆ. ಇದು ಕನ್ನಡಿಗರಿಗೆ ಬೇಸರ ತರಿಸಿದೆ. ನಾವು ಬೆಂಬಲಿಸುವ ಆರ್‌ಸಿಬಿ ನಮ್ಮನ್ನೆ ಕಡೆಗಣಿಸುತ್ತಿದೆಯೇ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮೂಡುವಂತಾಗಿದೆ.

ಸದ್ಯ ಕೆಎಲ್ ರಾಹುಲ್ ಅವರನ್ನು ₹14 ಕೋಟಿ ಕೊಟ್ಟು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಬಿಡ್ಡಿಂಗ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪೈಪೋಟಿ ನಡೆದಿತ್ತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಟೀಂ ಅವರನ್ನೂ ಖರೀದಿಸಿತು. ಕೆಎಲ್ ರಾಹುಲ್ ಡೆಲ್ಲಿ ಜೊತೆಗಿನ ಐಪಿಎಲ್ ಒಪ್ಪಂದಕ್ಕೆ ಸಹಿ ಮಾಡಿದರು.

ಈ ಹಿಂದಿನ ಮೂರು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಚತುರ ಆಟಗಾರ 32 ವರ್ಷ ವಯಸ್ಸಿನ ಕೆ.ಎಲ್ ರಾಹುಲ್ ಅವರು ಕಳೆದ ಐಪಿಎಲ್ ವೇಳೆ ಲಕ್ನೋ ಸೂಪರ್ ಜೆಂಟ್ಸ್ ಪರ ಆಟವಾಡಿದ್ದರು. ಉತ್ತಮ ಪ್ರದರ್ಶನ ನೀಡಿದ್ದರು. ಅದಷ್ಟೇ ಅಲ್ಲದೇ ಅವರು ಈವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಟೀಂ ಅನ್ನು ಸಹ ಪ್ರತಿನಿಧಿಸಿದ್ದರು.

ಈ ಬಾರಿ ಅವರನ್ನು ಆರ್‌ಸಿಬಿ ಖರೀದಿಸಲಿದೆ. ಇದು ಕಪ್ ಗೆಲ್ಲಲು ಸಹಾಯವಾಗಲಿದೆ ಎಂದೆಲ್ಲ ಆಸೆ ಇಟ್ಟುಕೊಂಡಿದ್ದ ಕನ್ನಡಿಗರಿಗೆ ಸದ್ಯ ನಿರಾಸೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+