ಹಾರ್ದಿಕ್ ಪಾಂಡ್ಯ ಮಾತು ಕೇಳುವವರಿಲ್ಲ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಿರುಗಾಳಿ?

ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯದಲ್ಲೇ ಸೋತು ಸುಣ್ಣವಾಗಿದೆ. ಇದು ಒಂದ್ಕಡೆ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಗೆ ತಲೆನೋವು ತಂದಿದ್ದರೆ, ಇನ್ನೊಂದು ಕಡೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಮಾತನ್ನು ಕೇಳುವವರೇ ಇಲ್ಲವಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಇದೀಗ ಒಡೆದ ಮನೆಯಾಗಿ ಹೋಗಿದೆ. ಹಾಗಾದರೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಮುಸುಕಿನ ಗುದ್ದಾಟ ಶುರುವಾಯ್ತಾ..? ಬನ್ನಿ ಆ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿಯೋಣ.

ಮುಂಬೈ ಇಂಡಿಯನ್ಸ್ ಬರೋಬ್ಬರಿ 5 ಬಾರಿ ಐಪಿಎಲ್ ಕಪ್ ಗೆದ್ದು ಬೀಗಿದೆ. 2013, 2015, 2017, 2019, 2020 ರಲ್ಲಿ ಕಪ್ ಗೆದ್ದು ಮುಂಬೈ ಇಂಡಿಯನ್ಸ್ ಇತಿಹಾಸ ನಿರ್ಮಾಣ ಮಾಡಿದೆ. ಹೀಗಿದ್ದಾಗ ದಿಢೀರ್ ಅಂತಾ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕಿತ್ತಾಕಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಇದೀಗ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಹಾಗೇ ತಂಡದ ಒಳಗೆ ತಿಕ್ಕಾಟ ಕೂಡ ಜೋರಾಗಿದೆ. ಈ ಮಧ್ಯೆ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮಾತನ್ನು ಆಟಗಾರರೇ ಕೇಳುತ್ತಿಲ್ಲವಂತೆ!

IPL 2024 What Is Happening In Mumbai Indians Team Under The Captaincy Of Hardik Pandya

ರೋಹಿತ್ ಶರ್ಮಾ ರೀ ಎಂಟ್ರಿ?

ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡದ ಒಳಗೆ ಭರ್ಜರಿ ತಿಕ್ಕಾಟ ನಡೆದಿದೆ. ಹೀಗಾಗಿ ಈ ವಿಚಾರವನ್ನು ಮುಂಬೈ ಇಂಡಿಯನ್ಸ್ ಟೀಂ ಆಡಳಿತ ಮಂಡಳಿ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬೇಡ, ನಮಗೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬೇಕು ಅಂತಾ ಫ್ಯಾನ್ಸ್ ಕೂಡ ಒತ್ತಾಯ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕತ್ವದ ಸ್ಥಾನಕ್ಕೆ ಮರಳಿ ಬರ್ತಾರಾ? ಅನ್ನೋ ಅನುಮಾನ ಮೂಡಿದೆ. ಮತ್ತೊಂದು ಕಡೆ ಹಾರ್ದಿಕ್ ವಿರುದ್ಧ ಈಗ ಟ್ರೋಲ್ ಹಾವಳಿ ಕೂಡ ಶುರುವಾಗಿದೆ.

ಆಟಗಾರರು ಹಾರ್ದಿಕ್ ಮಾತು ಕೇಳುತ್ತಿಲ್ವಾ?

ದಿಢೀರ್ ಕ್ಯಾಪ್ಟನ್ಸಿ ಬದಲಾದ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಅವರ ಮಾತನ್ನು, ಮುಂಬೈ ತಂಡದ ಸಹ ಆಟಗಾರರು ಕೇಳುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಅದ್ರಲ್ಲೂ ಈ ಕಿರಿಕ್ ಬೌಲಿಂಗ್ ಮಾಡುವಾಗ ಸಿಕ್ಕಾಪಟ್ಟೆ ಜೋರಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ದೊಡ್ಡ ತಿಕ್ಕಾಟಕ್ಕೆ ದಾರಿ ಮಾಡಿಕೊಡುತ್ತಾ? ಎಂಬ ಅನುಮಾನ ಉದ್ಭವಿಸಿ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಬಲು ಜೋರಾಗಿದೆ. ಹಾಗೇ ಹಾರ್ದಿಕ್ ಪಾಂಡ್ಯ ಈ ಸವಾಲುಗಳನ್ನು ಎದುರಿಸಲು ಪರದಾಡುತ್ತಿದ್ದಾರೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಂಬೈಗೆ ಈ ಬಾರಿಯ ಐಪಿಎಲ್ ಟೂರ್ನಿ ದೊಡ್ಡ ಸವಾಲು ತಂದಿದೆ. ಹೀಗಾಗಿ ಆಡಳಿತ ಮಂಡಳಿ ಯಾವ ರೀತಿಯ ಕ್ರಮಗಳನ್ನ ಕೈಗೊಳ್ಳಿದೆ? ಇದರಿಂದ ತಂಡದಲ್ಲಿ ಮುಂದೆ ಬದಲಾವಣೆಯ ಬಿರುಗಾಳಿ ಸೃಷ್ಟಿಯಾಗುತ್ತಾ? ಹಾಗೇ ಐಪಿಎಲ್ ಅಖಾಡದಲ್ಲಿ ಮತ್ತೊಮ್ಮೆ ಮುಂಬೈ ತಂಡ ಕಂಬ್ಯಾಕ್ ಮಾಡುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+