ಕೊಹ್ಲಿ ಶತಕ ವೇಸ್ಟ್, ಬಟ್ಲರ್ ಆಟ ಬೆಸ್ಟ್ ಆಯ್ತು!

ಬೆಂಗಳೂರು ಐಪಿಎಲ್ ಕ್ರಿಕೆಟ್ ತಂಡ ಆರ್‌ಸಿಬಿ ಮತ್ತೊಂದು ರೋಚಕ ಸೋಲು ಕಂಡು ಹ್ಯಾಟ್ರಿಕ್ ಸೋಲಿನ ದಾಖಲೆ ಬರೆದಿದೆ. ಆದರೆ ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ & ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾರೆ. ಸತತ ಸೋಲಿನ ಮೂಲಕ ಆರ್‌ಸಿಬಿ 2024ರ ಐಪಿಎಲ್ ಟೂರ್ನಿಯಲ್ಲೂ ಹೀನಾಯ ಪ್ರದರ್ಶನ ಮುಂದುವರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಮತ್ತು ಹುಡುಗರು, ಚೆನ್ನಾಗೇ ಬ್ಯಾಟ್ ಬೀಸಿದ್ದರು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಭರ್ಜರಿ 183 ರನ್ ಗಳಿಸಿತ್ತು ಆರ್‌ಸಿಬಿ ತಂಡ. ಅದರಲ್ಲೂ ಆರ್‌ಸಿಬಿ ತಂಡದ ಸ್ಟಾರ್ ಆಟಗಾರನಾದ ವಿರಾಟ್ ಕೊಹ್ಲಿ ಅವರು 72 ಬಾಲ್ ಆಡಿ, ಭರ್ಜರಿ 113 ರನ್ ಗಳಿಸಿದ್ದರೂ ಆರ್‌ಸಿಬಿ ತಂಡ ಗೆಲ್ಲಿಸೋದಕ್ಕೆ ಆಗಲೇ ಇಲ್ಲ. ಕೊಹ್ಲಿ ಬಾರಿಸಿದ 12 ಬೌಂಡರಿ ಮತ್ತು 4 ಸಿಕ್ಸರ್ ಈ ಮೂಲಕ ವ್ಯರ್ಥವಾಗಿ ಹೋದವು.

IPL 2024 This Is How Virat Kohli Century Not Helped The RCB

ಆರ್‌ಸಿಬಿಗೆ ಸೋಲು.. ಸೋಲು.. ಸೋಲು..

ಕಳೆದ ಪಂದ್ಯದಲ್ಲೂ ಸೋಲು ಕಂಡು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಆರ್‌ಸಿಬಿ ಈ ಮ್ಯಾಚ್ ಗೆದ್ದೇ ಗೆಲ್ಲುತ್ತೆ ಅನ್ನೋದು ಫ್ಯಾನ್ಸ್ ಕನಸಾಗಿತ್ತು. ಮೊದಲ ಇನ್ನಿಂಗ್ಸ್ ನೋಡಿ ಆರ್‌ಸಿಬಿ ಬೆಂಗಳೂರು ತಂಡದ ಅಭಿಮಾನಿಗಳು ಗೆಲುವು ನಮ್ಮದೇ ಅಂತಾ ಫಿಕ್ಸ್ ಆಗಿ, ಕುಣಿದು ಕುಪ್ಪಳಿಸಿದ್ದರು. ಆದರೆ ಅಂತಿಮವಾಗಿ, ಆಗಿದ್ದೇ ಬೇರೆ. ಆರ್‌ಸಿಬಿ ನೀಡಿರುವ 184 ರನ್‌ಗಳ ಗುರಿಯನ್ನು ಸುಲಭವಾಗಿ ಚೇಸ್ ಮಾಡಿ ಹೊಸ ಇತಿಹಾಸ ಬರೆದಿದೆ RR ಅಂದ್ರೆ ರಾಜಸ್ಥಾನ್ ರಾಯಲ್ಸ್ ತಂಡ.

ಅತ್ಯಂತ ನಿಷ್ಠಾವಂತ ಅಭಿಮಾನಿಗಳು

ಬಹುಶಃ ಜಗತ್ತಿನಲ್ಲಿ ಆರ್‌ಸಿಬಿ ತಂಡಕ್ಕೆ ಸಿಕ್ಕಷ್ಟು ನಿಷ್ಠಾವಂತ ಅಭಿಮಾನಿಗಳು ಯಾವುದೇ ತಂಡಕ್ಕೂ ಸಿಕ್ಕಿಲ್ಲ, ಸಿಕ್ಕೋದಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಸೋತರೂ, ಗೆದ್ದರೂ ಜನ ಆರ್‌ಸಿಬಿ ತಂಡಕ್ಕೆ ಹೆಚ್ಚಾಗಿ ಬೆಂಬಲ ನೀಡುತ್ತಾರೆ. ಈಗ, ಆರ್‌ಆರ್ ತಂಡದ ವಿರುದ್ಧ ಕೂಡ ಆರ್‌ಸಿಬಿ ಟೀಂಗೆ ಅಭಿಮಾನಿಗಳು ಇದೇ ರೀತಿ ಬೆಂಬಲ ನೀಡುತ್ತಿದ್ದಾರೆ. ಗೆದ್ದರೂ.. ಸೋತರೂ.. ಆರ್‌ಸಿಬಿ.. ಆರ್‌ಸಿಬಿ.. ಅಂತಿದ್ದಾರೆ ಫ್ಯಾನ್ಸ್. ಆದರೂ ಈ ಸೋಲಿನಿಂದ ಆರ್‌ಸಿಬಿ ಫ್ಯಾನ್ಸ್ ಒಂದಷ್ಟು ನೊಂದಿದ್ದಾರೆ.

ಕಪ್ ಗೆಲ್ಲುತ್ತಾ? ಕಪ್ ಗೆಲ್ಲೋದಿಲ್ವಾ?

ಆರ್‌ಸಿಬಿ ಕಪ್ ಗೆಲ್ಲುವುದು ಬಿಡಿ, ಈ ಬಾರಿ ಲೀಗ್ ಹಂತದಲ್ಲೇ ಸಾಲು ಸಾಲು ಸೋಲು ಅನುಭವಿಸಿ ನರಳಾಡಿದೆ. ಇದು ಫ್ಯಾನ್ಸ್‌ಗೆ ಕೂಡ ಸಖತ್ ಬೇಸರ ಮೂಡಿಸಿದೆ. ಇನ್ನೂ ಮುಂದೆ ಹೋಗಿ ಅಭಿಮಾನಿಗಳು ಈ ಬಾರಿ ಕಪ್ ಬರೋದೆ ಅನುಮಾನ ಅಂತಿದ್ದಾರೆ. ಹೀಗಿದ್ದರೂ ವಿರಾಟ್ ಕೊಹ್ಲಿ ಅವರು ಇಂದು ಬಾರಿಸಿದ ಅಮೋಘ ಶತಕ, ಆರ್‌ಸಿಬಿಗೆ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ಒಂದಷ್ಟು ಖುಷಿ ಕೊಟ್ಟಿತ್ತು.

ಆದರೆ ವಿರಾಟ್ ಕೊಹ್ಲಿ ಹೀಗೆ ಸೆಂಚ್ಯುರಿ ಬಾರಿಸಿದರೂ ಆರ್‌ಸಿಬಿ ತಂಡ ಮಾತ್ರ ಗೆಲ್ಲಲೇ ಇಲ್ಲ ಅನ್ನೋ ಬೇಸರ ಕೂಡ ಕಾಡುತ್ತಿದೆ. ಹೀಗಾಗಿ, ಮುಂದೆ ಏನಾಗುತ್ತದೆ? ಆರ್‌ಸಿಬಿ ಕಂಬ್ಯಾಕ್ ಮಾಡುತ್ತಾ? ಅಂತಾ ಕಾದು ನೋಡಬೇಕಿದೆ. ಕಂಬ್ಯಾಕ್ ಮಾಡದೇ ಹೋದ್ರೆ ಆರ್‌ಸಿಬಿ ಫ್ಯಾನ್ಸ್‌ಗೆ ಮತ್ತಷ್ಟು ನೋವಾಗುವುದೂ ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+