ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಡಬಲ್ ಧಮಾಕ!
ಇಂಡಿಯನ್ ಕ್ರಿಕೆಟ್ ಟೀಂನ ರನ್ ಮಷಿನ್ ವಿರಾಟ್ ಕೊಹ್ಲಿ ಈಗ ಸಂಭ್ರಮದಲ್ಲಿ ಇದ್ದಾರೆ. ಒಂದು ಕಡೆ ಅವರಿಗೆ ಗಂಡು ಮಗು ಹುಟ್ಟಿದ್ದು, 2ನೇ ಮಗುವಿನ ಜೊತೆ ಅನುಷ್ಕಾ & ವಿರಾಟ್ ಕೊಹ್ಲಿ ಖುಷಿ ಖುಷಿಯಾಗಿದ್ದಾರೆ. ಈ ಸಮಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅವರ ಫ್ಯಾನ್ಸ್‌ಗೆ ಮಾತ್ರ ಡಬಲ್ ಲಾಟರಿ ಹೊಡೆದಷ್ಟು ಖುಷಿಯಾಗಿದೆ. ಅರೆರೆ ಏನಾಯ್ತು? ಅಂದ್ರಾ, ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ವಿರಾಟ್ ಕೊಹ್ಲಿ ಅಂದ್ರೆ ಕನ್ನಡಿಗರಿಗೆ ತುಂಬಾನೆ ಹತ್ತಿರ. ಯಾಕಂದ್ರೆ ಐಪಿಎಲ್ ಶುರುವಾಗಿ ಕಳೆದ 17 ವರ್ಷಗಳಿಂದಲೂ ವಿರಾಟ್ ಕೊಹ್ಲಿ ಅವರು ಬೆಂಗಳೂರು ತಂಡಕ್ಕೆ ಆಡುತ್ತಿದ್ದು, ಬೇರೆ ಯಾವುದೇ ತಂಡಕ್ಕೆ ಹೋಗುವ ಮನಸ್ಸು ಮಾಡಿಲ್ಲ. ಹೀಗಾಗಿ ಕೊಹ್ಲಿ ಅವರನ್ನ ಈ ನಮ್ಮ ನಾಡಿನ ಜನ, ಅಂದ್ರೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಅಣ್ಣ ಅಂತಾ ಕರೆದು ಗೌರವಿಸುತ್ತಾರೆ. ಹಾಗೇ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರನ್ನ ಅತ್ತಿಗೆ ಅಂತಾ ಕರೆಯುತ್ತಾರೆ. ಹೀಗೆ ಬೆಂಗಳೂರು ತಂಡದ ಆರ್‌ಸಿಬಿ ಅಭಿಮಾನಿಗಳ ಅಣ್ಣ & ಅತ್ತಿಗೆ ಇದೀಗ 2ನೇ ಮಗು ಪಡೆದ ಸಂಭ್ರಮದಲ್ಲಿ ಇದ್ದಾರೆ. ಈ ಸಮಯದಲ್ಲೇ ಕೊಹ್ಲಿ ಫ್ಯಾನ್ಸ್‌ಗೆ ಡಬಲ್ ಧಮಾಕ ಸಿಕ್ಕಿದೆ!

ಐಪಿಎಲ್ ಹವಾ ಕೂಡ ಶುರು!
ಮೊದಲೇ ಹೇಳಿದಂತೆ ವಿರಾಟ್ ಕೊಹ್ಲಿ ದಂಪತಿ ಇದೀಗ 2ನೇ ಮಗುವನ್ನು ಸ್ವಾಗತಿಸಿದ್ದಾರೆ. ಈ ಸಮಯದಲ್ಲೇ 2024ರ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಿದೆ. ವೇಳಾಪಟ್ಟಿ ಪ್ರಕಾರವೇ ಮೊದಲ ಪಂದ್ಯ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ನಡೆಯಲಿದೆ. ಮೊದಲಿನಿಂದ ಕೂಡ ಈ ಎರಡೂ ತಂಡಗಳ ಪಂದ್ಯ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತದೆ. ಈಗಲೂ ಇದೇ ರೀತಿಯಾಗಿ 2024ರ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಬೆಂಗಳೂರು & ಚೆನ್ನೈ ತಂಡಗಳು, ಇದೀಗ ಸೆಣೆಸಾಟ ನಡೆಸಲಿವೆ.
ಹೀಗಾಗಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಕೊಂಡಿದೆ. ಅದರಲ್ಲೂ ಈ ಸುದ್ದಿ ಕೇಳಿ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಮತ್ತಷ್ಟು ಖುಷಿ ಆಗಿದ್ದಾರೆ. ಒಂದು ಕಡೆ ಕೊಹ್ಲಿ ಅವರಿಗೆ 2ನೇ ಮಗು ಜನಿಸಿದ್ದರೆ, ಇನ್ನೊಂದ್ಕಡೆ ಐಪಿಎಲ್ ಹವಾ ಶುರು ಆಗುತ್ತಿದೆ. ಹೀಗಾಗಿ ಡಬಲ್ ಖುಷಿಯಲ್ಲಿ, ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು.

ಈ ಸಲ ಕಪ್ ಯಾರದ್ದು?
ಬಹು ನಿರೀಕ್ಷಿತ 17ನೇ ಆವೃತ್ತಿ ಐಪಿಎಲ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿಯನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. 2024ರ ಐಪಿಎಲ್ ಟೂರ್ನಿ ಮಾರ್ಚ್ 22 ರಿಂದ ಆರಂಭವಾಗಲಿದ್ದು, ಉದ್ಘಾಟನೆ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ & ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಫೈಟ್ ಪಕ್ಕಾ ಆಗಿದೆ. ಚಿದಂಬರಂ ಮೈದಾನದಲ್ಲಿ ಕಾದಾಟ ನಡೆಯಲಿದೆ ಹೀಗಾಗಿಯೇ ಬೆಂಗಳೂರು ತಂಡದ ಅಭಿಮಾನಿಗಳು ಮೈದಾನದಲ್ಲಿ ಸಂಭ್ರಮ ಆಚರಿಸಲು ಸಿದ್ಧವಾಗಿದ್ದಾರೆ.
ಬೆಂಗಳೂರು ಟೀಂ ಐಪಿಎಲ್ ಟೂರ್ನಿ ಗೆಲ್ಲುತ್ತೆ ಅಂತಾ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿ 'ಈ ಸಲ ಕಪ್ ನಮ್ದೆ' ಘೋಷ ವಾಖ್ಯ ವೈರಲ್ ಆಗಿದೆ ಆರ್‌ಸಿಬಿ ಬೆಂಗಳೂರು ಟೀಂ ಅಭಿಮಾನಿಗಳು ತಮ್ಮ ತಂಡದ ಗೆಲುವಿಗೆ ಕಾಯ್ತಾ ಕೂತಿದ್ದಾರೆ. ಅವರ ಆಸೆ ಈ ವರ್ಷ ನೆರವೇರುತ್ತಾ? ಅನ್ನೋ ಕುತೂಹಲ ಕೂಡ ಡಬಲ್, ಆಗುತ್ತಿದೆ. ಅಲ್ಲದೆ ಈ ಬಾರಿ ಕಪ್ ಗೆಲ್ಲಲು ಆರ್‌ಸಿಬಿ ತಂಡ ಕೂಡ ಎಲ್ಲಾ ರೀತಿ ಎಫರ್ಟ್ಸ್ ಹಾಕುತ್ತಿದೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಅವರ ಅಭಿಮಾನಿ, ಬಳಗವಂತೂ ಈ ಬಾರಿ ಡಬಲ್ ಸಂಭ್ರಮದಲ್ಲಿ ಇದೆ.












Click it and Unblock the Notifications