IPL 2024: RCB ಪ್ಲೇ ಆಫ್ ಪ್ರವೇಶಿಸುವುದ ಕನ್ಫರ್ಮ್: ಹೀಗೆ ಆದಾಗ ಮಾತ್ರ ಅದು ಸಾಧ್ಯ
ಆರಂಭಿಕ ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದ ಆರ್‌ಸಿಬಿ ನಿರಾಸೆ ಮೂಡಿಸಿತ್ತು. ಆದರೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತಮ್ಮ ಕ್ಷಮತೆಗೆ ತಕ್ಕ ಆಟವಾಡಿರುವ ಆರ್‌ಸಿಬಿ ಎಲ್ಲರ ಚಿತ್ತ ಕದ್ದಿದೆ. ಅಲ್ಲದೆ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹಾಗಿದ್ದರೆ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ಏನೆಲ್ಲಾ ಆಗಬೇಕು ಎಂಬ ಬಗ್ಗೆ ವರದಿ ಇಲ್ಲಿದೆ.
ಹ್ಯಾಟ್ರಿಕ್ ಗೆಲುವು ಆರ್‌ಸಿಬಿ ತಂಡದ ಬೂಸ್ಟ್ ಹೆಚ್ಚಿಸಿದೆ. ಕಳೆದ ಒಂದು ತಿಂಗಳಿನಿಂದ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ, ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದ ಬಳಿಕ ಅಂಕ ಪಟ್ಟಿಯಲ್ಲಿ ಭರ್ಜರಿ ಬಡ್ತಿ ಪಡೆದಿದ್ದು, ಏಳನೇ ಸ್ಥಾನದಲ್ಲಿದೆ. ಸದ್ಯ ಆರ್‌ಸಿಬಿ 11 ಪಂದ್ಯಗಳಲ್ಲಿ 8 ಅಂಕಗಳನ್ನು ಕಲೆ ಹಾಕಿ, ಪ್ಲೇ ಆಫ್ ಪ್ರವೇಶಿಸುವ ಆಸೆಗೆ ಪುಷ್ಠಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಆರಂಭಿಸಿದ್ದಾರೆ.

ಯಾರಿಗೆ ಪ್ಲೇ ಆಫ್ ಅವಕಾಶ
ಸದ್ಯ ಅಂಕ ಪಟ್ಟಿಯ ಮೇಲೆ ಒಂದು ನೋಟು ಹಾಕಿದರೆ, ಕೆಕೆಆರ್ ಹಾಗೂ ರಾಜಸ್ಥಾನ ತಂಡಗಳು ಮಾತ್ರ ಪ್ಲೇ ಆಫ್ ಹಂತಕ್ಕೆ ಒಂದು ಕಾಲು ಇಟ್ಟಿವೆ. ಎರಡೂ ತಂಡಗಳು 16 ಅಂಕಗಳನ್ನು ಕಲೆ ಹಾಕಿವೆ. ಇನ್ನು ಸಿಎಸ್‌ಕೆ, ಎಸ್‌ಆರ್‌ಎಚ್, ಎಲ್‌ಎಸ್‌ಜಿ ತಂಡಗಳು ತಲಾ 12 ಅಂಕಗಳನ್ನು ಕಲೆ ಹಾಕಿದ್ದು ಪ್ಲೇ ಆಫ್ ಪ್ರವೇಶಿಸುವ ಕನಸಿನಲ್ಲಿವೆ. ಡಿಸಿ ಸಹ 10 ಅಂಕ ಕಲೆ ಹಾಕಿದೆ. ಅಂಕಪಟ್ಟಿಯಲ್ಲಿ ಸದ್ಯ ಇರುವ ಟಾಪ್ ನಾಲ್ಕು ತಂಡಗಳನ್ನು ಬಿಟ್ಟರೆ ಆರ್‌ಸಿಬಿಯ ರನ್ ರೇಟ್ ಉತ್ತಮವಾಗಿದೆ.
ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಹೇಗೆ?
ಇನ್ನು ಆರ್‌ಸಿಬಿ ಐಪಿಎಲ್ 2024ರಲ್ಲಿ ಮೂರು ಪಂದ್ಯಗಳನ್ನು ಆಡಬೇಕಿದೆ. ಮೇ 9ರಂದು ಪಂಜಾಬ್ ಕಿಂಗ್ಸ್ ವಿರುದ್ಧ, ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, ಮೇ 18 ರಂದು ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪೂರ್ಣ ಅಂಕ ಕಲೆ ಹಾಕುವ ಪ್ಲ್ಯಾನ್ ಆರ್‌ಸಿಬಿ ತಂಡದ್ದಾಗಿದೆ. ಇನ್ನು ನೆಟ್ ರನ್ ರೇಟ್ ಮೇಲೆ ಸಹ ಆರ್‌ಸಿಬಿ ಒಂದು ದೃಷ್ಟಿ ನೆಟ್ಟಿರಬೇಕಾಗುತ್ತದೆ.
ಆರ್‌ಸಿಬಿ ಈ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸುವ ಆಸೆ ಜೀವಂತವಾಗಿದೆ. ಅದು ಉಳಿದ ತಂಡಗಳು 12 ಅಂಕ ಕಲೆ ಹಾಕದಂತೆ ನೋಡಿಕೊಳ್ಳಬೇಕು. ಅಲ್ಲದೆ ಈ ವೇಳೆ ನೆಟ್ ರನ್ ರೇಟ್ ತುಂಬಾನೆ ಮುಖ್ಯ.

ಇನ್ನೆಷ್ಟು ಪಂದ್ಯ ಬಾಕಿ
ಸಿಎಸ್‌ಕೆ ಮುಂದಿನ ಮೂರು ಪಂದ್ಯಗಳಲ್ಲಿ ಜಿಟಿ, ಆರ್‌ಆರ್, ಆರ್‌ಸಿಬಿ ವಿರುದ್ಧ ಆಡಬೇಕಿದೆ. ಎಲ್‌ಎಸ್‌ಜಿ ಇನ್ನು ಎಸ್‌ಆರ್‌ಎಚ್, ಡೆಲ್ಲಿ, ಮುಂಬೈ ತಂಡದ ವಿರುದ್ಧ ಸೆಣಸಲಿದೆ. ಎಸ್‌ಆರ್‌ಎಚ್ ಮುಂದಿನ ಪಂದ್ಯಗಳಲ್ಲಿ ಎಸ್‌ಆರ್‌ಎಚ್, ಜಿಟಿ, ಪಂಜಾಬ್ ವಿರುದ್ಧ ಸೆಣಸಲಿದೆ. ಈ ಮೂರು ಪಂದ್ಯಗಳ ಮೇಲೆ ಆರ್‌ಸಿಬಿ ಚಿತ್ತ ನೆಟ್ಟಿದೆ. ಸಿಎಸ್‌ಕೆ ಹಾಗೂ ಎಸ್‌ಆರ್‌ಎಚ್ ಮುಂದಿನ ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದೇ ಇದ್ದು, ಆರ್‌ಸಿಬಿ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸಬಹುದು.
ಈ ಪಂದ್ಯದ ಮೇಲೆ ಆರ್‌ಸಿಬಿ ಚಿತ್ತ
ಮೇ 8ರಂದು ನಡೆಯಲಿರುವ ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ಪಂದ್ಯದ ಮೇಲೆ ಈಗ ಆರ್‌ಸಿಬಿ ದೃಷ್ಟಿ ನೆಟ್ಟಿದೆ. ಈ ಪಂದ್ಯದಲ್ಲಿ ಯಾರು ಹೇಗೆ ಗೆಲ್ಲುತ್ತಾರೆ ಎಂಬುದನ್ನು ಆರ್‌ಸಿಬಿ ಲೆಕ್ಕಾ ಹಾಕುತ್ತಿದೆ. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಲೋ ಮಾರ್ಜಿನ್‌ನಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇ ಆಫ್ ಆಸೆ ಚಿಗುರುತ್ತದೆ.
ಮುಂಬೈ ಜಯ ಚಿಗುರಿಸಿದ ಆಸೆ
ಸೋಮವಾರ ನಡೆದ ಐಪಿಎಲ್ 55ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ಸನ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 173 ರನ್ ಬಾರಿಸಿತು. ಇದಕ್ಕುತ್ತರವಾಗಿ ಮುಂಬೈ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 174 ರನ್ ಸೇರಿಸಿ ಜಯ ಸಾಧಿಸಿತು.
ಈ ಪಂದ್ಯವನ್ನು ಗೆದ್ದು ಹೈದರಾಬಾದ್ ಪ್ಲೇ ಆಫ್ ಹತ್ತಿರಕ್ಕೆ ಬಂದು ನಿಲ್ಲುವ ಆಸೆಯನ್ನು ಹೊಂದಿತ್ತು. ಆದರೆ ಈ ಆಸೆ ಫಲಿಸಲಿಲ್ಲ. ಸನ್ ತಂಡದ ಸೋಲು ಆರ್‌ಸಿಬಿ ಅಭಿಮಾನಿಗಳ ಖುಷಿ ಡಬಲ್ ಮಾಡಿದೆ. ಸನ್‌ರೈಸರ್ಸ್ ತಂಡ ಮುಂದಿನ ತನ್ನ ಎಲ್ಲ ಪಂದ್ಯಗಳನ್ನು ಸೋತಲ್ಲಿ ಆರ್‌ಸಿಬಿ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದು. ಅದಕೆ ಆರ್‌ಸಿಬಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲುವುದು ಅವಶ್ಯ.
ಚಿಗುರಿದ ಡೆಲ್ಲಿ ಆಸೆ
ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿದ್ದು, ಡೆಲ್ಲಿ ಪ್ಲೇ ಆಫ್ ಆಸೆ ಸಹ ಚಿಗುರಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡಬೇಕಾದಲ್ಲಿ ಡೆಲ್ಲಿ ಮುಂದಿನ ಎಲ್ಲ ಪಂದ್ಯಗಳನ್ನು ಸೋಲ ಬೇಕು. ಅಂದಾಗ ಡೆಲ್ಲಿ ಪಾಯಿಂಟ್ 12 ಆಗುತ್ತದೆ. ಆರ್‌ಸಿಬಿ ಎಲ್ಲ ಪಂದ್ಯಗಳನ್ನು ಗೆದ್ದಲ್ಲಿ 14 ಅಂಕವಾಗುತ್ತದೆ. ಇನ್ನು ಒಂದು ಪಂದ್ಯವನ್ನು ಸೋತರೂ ನೆಟ್ ರನ್ ರೇಟ್ ವಿಚಾರದಲ್ಲಿ ಆರ್‌ಸಿಬಿ ಬಲಾಢ್ಯವಾಗಿದೆ.












Click it and Unblock the Notifications