RCB vs CSK: ಆರ್‌ಸಿಬಿ, ಸಿಎಸ್‌ಕೆ ಬಿಗ್‌ ಫೈಟ್‌: ಐಪಿಎಲ್‌ ಪ್ಲೇಆಫ್‌ಗೆ ಕಾದಿದೆ ರೀಯಲ್‌ ಟ್ವಿಸ್ಟ್‌

ಶನಿವಾರ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್‌ 2024ರ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಪ್ರವೇಶ ಪಡೆಯುವ ಕನಸು ಆರ್‌ಸಿಬಿ ತಂಡದ್ದಾಗಿದೆ.

ಅಂಕಿ ಅಂಶಗಳ ಲೆಕ್ಕಾಚಾರ ಏನೇ ಹೇಳಿದ್ರೂ ಪ್ರಸಕ್ತ ಸಾಲಿನ ಫಾರ್ಮ್‌ ಆರ್‌ಸಿಬಿ ತಂಡದ ಬೂಸ್ಟ್‌ ಹೆಚ್ಚಿಸಿದೆ. ಆರ್‌ಸಿಬಿ ಸತತ ಐದು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠವಾಗಿದೆ. ಈಗಾಗಲೇ ಆಡಿರುವ 32 ಪಂದ್ಯಗಳಲ್ಲಿ ಬೆಂಗಳೂರು 10 ರಲ್ಲಿ ಜಯ ಸಾಧಿಸಿದರೆ, ಚೆನ್ನೈ 21 ರಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

IPL 2024 RCB CSK Big Fight IPL Playoffs Awaits Real Twist

ವಿರಾಟ್ ಬೊಂಬಾಟ ಆಟ

ಸ್ಟಾಟ್ಸ್‌ ಏನೇ ಹೇಳಬಹುದು ಆದರೆ ಈ ವರ್ಷ ಆರ್‌ಸಿಬಿ ಸಂಘಟಿತ ಆಟದ ಮೇಲೆ ವಿಶ್ವಾಸವನ್ನು ಇಟ್ಟುಕೊಂಡಿದೆ. ಆರ್‌ಸಿಬಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮವಾಗಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಟಗಾರರು ಆಡುತ್ತಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ. ತಂಡದ ಬ್ಯಾಟಿಂಗ್ ವಿಭಾಗಕ್ಕೆ ರನ್‌ ಮಶೀನ್‌ ವಿರಾಟ್ ಕೊಹ್ಲಿ ಬಲ ತುಂಬ ಬಲ್ಲ ಆಟಗಾರ. ಇವರು ಆಡಿರುವ 13 ಪಂದ್ಯಗಳಲ್ಲಿ 661 ರನ್‌ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.

ಮಿಡ್ಲ್‌ ಆರ್ಡರ್‌ನಲ್ಲಿ ರಜತ್ ಆಸರೆ

ಇನ್ನು ಆರ್‌ಸಿಬಿ ತಂಡದ ಮಿಡ್ಲ್ ಆರ್ಡರ್‌ನಲ್ಲಿ ರಜತ್ ಪಟಿದಾರ್‌ ತಂಡಕ್ಕೆ ಆಸರೆಯಾಗಿದ್ದಾರೆ. ಇವರ ಫಾರ್ಮ್‌ ನಿಜಕ್ಕೂ ಎದುರಾಳಿಗಳಿಗೆ ಕಂಠಕ ನೀಡಿದೆ. ಇವರು ಪ್ರಸಕ್ತ ಸಾಲಿನಲ್ಲಿ 13 ಪಂದ್ಯಗಳಲ್ಲಿ 320 ರನ್‌ ಸಿಡಿಸಿದ್ದಾರೆ. ಇವರನ್ನು ಬಿಟ್ಟರೆ ಟಾಪ್‌ ಆರ್ಡರ್‌ನಲ್ಲಿ ಫಾಫ್‌ ಡುಪ್ಲೇಸಿಸ್‌ ಸಹ ರನ್‌ ಕಲೆ ಹಾಕಿ ಮಿಂಚುತ್ತಿದ್ದಾರೆ. ಉಳಿದಂತೆ ದಿನೇಶ್ ಕಾರ್ತಿಕ್ ಡೆತ್‌ ಓವರ್‌ಗಳಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಪ್ಲೇಯರ್‌..

IPL 2024 RCB CSK Big Fight IPL Playoffs Awaits Real Twist

ಉಳಿದಂತೆ ಕಳೆದ ಕೆಲವು ಪಂದ್ಯಗಳಲ್ಲಿ ಸ್ಫೋಟಕ ಆಟವನ್ನು ಆಡಿ ತಂಡಕ್ಕೆ ನೆರವಾಗಿದ್ದ ವಿಲ್‌ ಜಾಕ್ಸ್ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ. ಇವರು ಟಿ20 ವಿಶ್ವಕಪ್‌ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಅವಕಾಶವನ್ನು ಯಾವ ಯುವ ಆಟಗಾರ ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಲಯದಲ್ಲಿರುವ ವೇಗಿಗಳು

ಆರಂಭದಲ್ಲಿ ಶಿಶ್ತು ಬದ್ಧ ದಾಳಿಯನ್ನು ಸಂಘಟಿಸುವಲ್ಲಿ ವಿಫಲರಾಗಿದ್ದ ಆರ್‌ಸಿಬಿ ತಂಡದ ವೇಗದ ಬೌಲರ್‌ಗಳು, ಈಗ ಲಯಕ್ಕೆ ಮರಳಿದ್ದಾರೆ. ಅಲ್ಲದೆ ವಿಕೆಟ್‌ ಬೇಟೆ ನಡೆಸುತ್ತಿದ್ದಾರೆ. ಯಶ್‌ ದಯಾಳ್ ಹಾಗೂ ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗುತ್ತಿದ್ದಾರೆ. ಸ್ವಪ್ನಿಲ್ ಸಿಂಗ್ ಹಾಗೂ ಕರಣ್ ಶರ್ಮಾ ತಮ್ಮ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳ ನಿದ್ದೆ ಗೆಡಿಸುತ್ತಿದ್ದಾರೆ.

IPL 2024 RCB CSK Big Fight IPL Playoffs Awaits Real Twist

ಆರ್‌ಸಿಬಿಗೆ ಗೆಲುವೊಂದೆ ಟಾರ್ಗೆಟ್‌

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯದಲ್ಲಿ ಆರ್‌ಸಿಬಿ ಗೆಲುವೊಂದೆ ಟಾರ್ಗೆಟ್‌ ಇಟ್ಟುಕೊಂಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿ 18 ರನ್‌ಗಳಿಂದ ಗೆಲ್ಲಬೇಕು. ಇಲ್ಲಾ 18.1 ಓವರ್‌ಗಳಲ್ಲಿ ಚೇಸ್‌ ಮಾಡಬೇಕು ಅಂದಾಗ ಮಾತ್ರ ಪ್ಲೇ ಆಪ್‌ ಆಸೆ ಜೀವಂತವಾಗಿರುತ್ತದೆ.

ಬಲಿಷ್ಠ ಚೆನ್ನೈ ತಂಡ

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಹ ಬಲಿಷ್ಠವಾಗಿದೆ. ಸ್ಟಾರ್ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು, ತಂಡಕ್ಕೆ ನೆರವಾಗಬಲ್ಲರು. ಈ ಸ್ಟಾರ್ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ತಂಡಕ್ಕೆ ನೆರವಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿ, ಪ್ಲೇ ಆಫ್‌ ಪ್ರವೇಶಿಸಿ, ಧೋನಿಗೆ ಕಪ್‌ ಗೆಲುವಿನ ಉಡುಗೊರೆ ನೀಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+