RCB playoff scenario: ಹೇಗಿದೆ ಗೊತ್ತಾ ಆರ್‌ಸಿಬಿ ಪ್ಲೇ ಆಫ್‌ ಲೆಕ್ಕಾಚಾರ!

ಆರ್‌ಸಿಬಿ ಅಭಿಮಾನಿಗಳಿಗೆ ಭಾನುವಾರ ಆಟಗಾರರು ಚಿನ್ನಸ್ವಾಮಿ ಅಂಗಳದಲ್ಲಿ ಹಬ್ಬದ ಊಟವನ್ನು ಉಣ ಬಡಿಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್‌ಸಿಬಿ ಫ್ಯಾನ್ಸ್‌ ಈಗ ಐಪಿಎಲ್‌ 2024ರ ಪ್ಲೇ ಆಫ್‌ ಲೆಕ್ಕಾಚಾರ ಆರಂಭಿಸಿದ್ದಾರೆ.

ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಂದು ಕುತಿದೆ. ಅಲ್ಲದೆ ಪ್ರಸಕ್ತ ಐಪಿಎಲ್‌ನಲ್ಲಿ ಸತತ ಐದನೇ ಜಯ ಸಾಧಿಸಿ, 12 ಅಂಕಗಳನ್ನು ಕಲೆ ಹಾಕಿದೆ. ಇನ್ನು ಒಂದು ಪಂದ್ಯ ಗೆದ್ದರೆ ಆರ್‌ಸಿಬಿ ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿರುತ್ತದೆ. ಅದು ಹೇಗೆ ಎಂಬುದಕ್ಕೆ ವರದಿ ಇಲ್ಲಿದೆ.

IPL 2024 Playoff Picture Takes Shape CSK RCB Surge Ahead DC Nearing Elimination

14ರ ಗಂಟು

ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ರಾಜಸ್ಥಾನ ತಂಡವನ್ನು ಮಣಿಸಿದೆ. ಅಲ್ಲದೆ 14 ಅಂಕಗಳೊಂದಿಗೆ ಸದ್ಯ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎಸ್‌ಆರ್‌ಎಚ್‌ ತಂಡ ಸಹ 12 ಪಂದ್ಯಗಳಲ್ಲಿ 14 ಅಂಕವನ್ನು ಕಲೆ ಹಾಕಿದ್ದು, ಪ್ಲೇ ಆಫ್‌ ರೇಸ್‌ನಲ್ಲಿ ಜೀವಂತವಾಗಿದೆ. ಎಸ್‌ಆರ್‌ಎಚ್‌ ಇನ್ನು ಮೇ 16 ರಂದು ಗುಜರಾತ್ ಟೈಟನ್ಸ್ ವಿರುದ್ಧ, ಮೇ 19 ರಂದು ಪಂಜಾಬ್ ಕಿಂಗ್ಸ್‌ ವಿರುದ್ಧ ಪಂದ್ಯವನ್ನು ಆಡಬೇಕಿದೆ.

ಈ ಎರಡೂ ಪಂದ್ಯಗಳಲ್ಲಿ ಎಸ್‌ಆರ್‌ಎಚ್‌ ಸೋತರೆ ಆರ್‌ಸಿಬಿ ಹಾದಿ ಸುಗಮವಾಗುತ್ತದೆ. ಒಂದು ವೇಳೆ ಎರಡೂ ಪಂದ್ಯಗಳಲ್ಲಿ ಎಸ್‌ಆರ್‌ಎಚ್‌ ಗೆಲುವು ದಾಖಲಿಸಿದರೆ, ಆಗ ಪ್ಲೇ ಆಫ್‌ ಲೆಕ್ಕಾಚಾರ ಶುರುವಾಗುತ್ತದೆ. ಎಸ್‌ಆರ್‌ಎಚ್‌ ಆಗ 18 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತ್ತದೆ. ಒಂದೇ ವೇಳೆ ಎರಡೂ ಪಂದ್ಯಗಳಲ್ಲಿ ಸೋತರೆ ನಾಲ್ಕನೇ ಸ್ಥಾನದಲ್ಲೇ ಇರುತ್ತದೆ.

ಎಲ್‌ಎಸ್‌ಜಿ ಆಸೆ ಜೀವಂತ

ಲಖ್ನೋ ಸೂಪರ್‌ ಜೇಂಟ್ಸ್‌ ಸಹ ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕೆ.ಎಲ್ ರಾಹುಲ್ ಮುಂದಾಳತ್ವದ ತಂಡ ಮೇ 14 ರಂದು ಡೆಲ್ಲಿ ವಿರುದ್ಧ, ಮೇ 17 ರಂದು ಮುಂಬೈ ವಿರುದ್ಧ ಜಯ ಸಾಧಿಸಿದರೆ, ಈ ತಂಡ ಸಹ 16 ಅಂಕಗಳನ್ನು ಸಂಪಾದಿಸಬಹುದು. ಈ ಎರಡೂ ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ರಾಹುಲ್‌ ಪಡೆ ಪ್ಲೇ ಆಫ್‌ ಆಸೆ ಕಮರಿ ಹೋಗುತ್ತದೆ. ಇದಕ್ಕೆ ಕಾರಣ ಅವರ ನೆಟ್‌ ರನ್‌ ರೆಟ್‌. ಸದ್ಯ ಎಲ್‌ಎಸ್‌ಜಿ ನೆಟ್‌ ರನ್‌ ರೇಟ್‌ ಮೈನ್ಸ್‌ ಆಗಿದೆ.

IPL 2024 Playoff Picture Takes Shape CSK RCB Surge Ahead DC Nearing Elimination

ಮಂಗಳವಾರ ನಡೆಯಲಿರುವ ಲಖ್ನೋ ಹಾಗೂ ಡೆಲ್ಲಿ ಪಂದ್ಯದಲ್ಲಿ ಕ್ಯಾಪಿಟಲ್ಸ್ ಕಡಿಮೆ ಅಂತರದಿಂದ ಗೆದ್ದಿದ್ದೇ ಆದಲ್ಲಿ ಆರ್‌ಸಿಬಿಗೆ ಪ್ಲೇ ಆಫ್‌ ಪ್ರವೇಶಿಸುವ ಕನಸು ಹತ್ತಿರವಾಗುತ್ತದೆ.

ಆರ್‌ಸಿಬಿ vs ಸಿಎಸ್‌ಕೆ

ನಿಜಕ್ಕೂ ಈ ಪಂದ್ಯ ಆರ್‌ಸಿಬಿ ಪಾಲಿಗೆ ಕ್ವಾರ್ಟರ್ ಫೈನಲ್‌ ನಂತೆ ಕಾಣಿಸಿಕೊಳ್ಳಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಮೊದಲ ಸೆಮಿಫೈನಲ್‌ ಹಂತ ತಲುಪಬಹುದು. ಈ ಪಂದ್ಯದಲ್ಲಿ ಆರ್‌ಸಿಬಿ, ಸಿಎಸ್‌ಕೆ ತಂಡವನ್ನು 18 ರನ್‌ನಿಂದ ಬಗ್ಗು ಬಡಿದರೆ, ರನ್‌ ರೇಟ್ ಇಂಪ್ರೂ ಆಗುತ್ತದೆ. ಒಂದೇ ವೇಳೆ ಚೇಸ್ ಮಾಡುವುದಾದರೆ, 18.1 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿದರೆ ಆರ್‌ಸಿಬಿ ಪ್ಲೇ ಆಫ್‌ ಆಸೆ ಸುಗುಮವಾಗುತ್ತದೆ.

IPL 2024 Playoff Picture Takes Shape CSK RCB Surge Ahead DC Nearing Elimination

ಈ ಎಲ್ಲ ಅಂಶಗಳು 14 ಅಂಕದ ಸುತ್ತ ಮುತ್ತ ತಿರುಗಾಡುತ್ತಿವೆ. ಒಂದು ವೇಳೆ ಎಸ್‌ಆರ್‌ಎಚ್‌ ಹಾಗೂ ಎಲ್‌ಎಸ್‌ಜಿ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಆಗ ಸಮೀಕರವೇ ಉಲ್ಟಾ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+