MS Dhoni: ಸಿಎಸ್‌ಕೆ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದ ಎಂಎಸ್ ಧೋನಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಉದ್ಘಾಟನಾ ಪಂದ್ಯಕ್ಕೆ ಮುನ್ನವೇ ಸಿಎಸ್‌ಕೆ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿ ಕೆಳಗಿಳಿದಿದ್ದಾರೆ. ಈ ಮೂಲಕ ಹೊಸ ನಾಯಕನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ತಂಡದ ಹೊಸ ನಾಯಕನಾಗಿ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಎಲ್ಲಾ 10 ತಂಡದ ನಾಯಕರು ಜೊತೆಯಾಗಿ ತೆಗೆಸಿಕೊಂಡಿದ್ದು, ಎಂಎಸ್ ಧೋನಿ ಬದಲಾಗಿ ರುತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ.

2022ರ ಆವೃತ್ತಿಯಲ್ಲಿ ಕೂಡ ಸಿಎಸ್‌ಕೆ ನಾಯಕನ ಬದಲಾವಣೆಯ ಪ್ರಯೋಗ ಮಾಡಿತ್ತು. ಧೋನಿ ಬದಲಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ನಾಯಕರನ್ನು ಮಾಡಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡದ ಕಾರಣ, ಪಂದ್ಯಾವಳಿಯ ಮಧ್ಯದಲ್ಲೇ ಮತ್ತೆ ಧೋನಿ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿತ್ತು.
2023ರ ಆವೃತ್ತಿಯಲ್ಲಿ ಮತ್ತೆ ಧೋನಿ ಸಿಎಸ್‌ಕೆ ತಂಡದ ಸಾರಥ್ಯ ವಹಿಸಿಕೊಂಡಿದ್ದರು. ಯುವ ಪಡೆಯ ಜೊತೆಗೆ ಅನುಭವಿಗಳನ್ನು ಸಮರ್ಥವಾಗಿ ಮುನ್ನಡೆಸಿದ್ದ ಧೋನಿ, 5ನೇ ಬಾರಿ ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷವೇ ಅವರು ನಿವೃತ್ತಿಯಾಗುತ್ತಾರೆ ಎನ್ನಲಾಗುತ್ತಿತ್ತು, ಆದರೆ ಅಭಿಮಾನಿಗಳಿಗಾಗಿ ಈ ವರ್ಷ ಕೂಡ ಐಪಿಎಲ್ ಆಡಲು ನಿರ್ಧರಿಸಿದ್ದಾರೆ. ಇದೇ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗಿದೆ.












Click it and Unblock the Notifications