IPL 2024: ಮುಂಬೈಗೆ ಪಾಂಡ್ಯ, ಆರ್​ಸಿಬಿಗೆ ಗ್ರೀನ್ ಸೇರ್ಪಡೆ: ಗುಜರಾತ್‌ಗೆ ಟೈಟನ್ಸ್‌ಗೆ ಗಿಲ್ ನಾಯಕ

ಐಪಿಎಲ್ 2024ರ ಹರಾಜಿಗೆ ಮುನ್ನ ಸಾಕಷ್ಟು ಹೈಡ್ರಾಮ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳುತ್ತಾರೆ ಎನ್ನುವಾಗಲೇ ಅವರನ್ನು ಗುಜರಾತ್ ಟೈಟನ್ಸ್ ಉಳಿಸಿಕೊಂಡಿತ್ತು, ಅದಾದ ಬಳಿಕ ಮಹತ್ವದ ಬೆಳವಣಿಗೆಯಲ್ಲಿ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಟ್ರೇಡಿಂಗ್ ಮೂಲಕ ಪಾಂಡ್ಯ ಜಿಟಿ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಟ್ರೇಡಿಂಗ್ ಮುಖಾಂತರ ಆರ್​ಸಿಬಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. 2023ರ ಮಿನಿ ಹರಾಜಿನಲ್ಲಿ ಗ್ರೀನ್‌ರನ್ನು ಮುಂಬೈ ಬರೋಬ್ಬರಿ 17.5 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.

 IPL 2024: Hardik Pandya Traded to MI, Green to RCB; Gill Appointed as Captain of Gujarat Titans

2023ರ ಐಪಿಎಲ್‌ ಹರಾಜಿನಲ್ಲಿ ಗ್ರೀನ್‌ ಅತ್ಯಂತ ದುಬಾರಿ ಖರೀದಿದಾರರಲ್ಲಿ ಒಬ್ಬರಾಗಿದ್ದರು. ಕ್ಯಾಮೆರಾನ್ ಗ್ರೀನ್ ಐಪಿಎಲ್ 2023 ರಲ್ಲಿ 452 ರನ್ ಗಳಿಸಿದ್ದ ಅವರು, 9.50 ಆರ್ಥಿಕತೆಯಲ್ಲಿ ರನ್ ಬಿಟ್ಟುಕೊಟ್ಟು ಆರು ವಿಕೆಟ್ ಪಡೆದಿದ್ದಾರೆ.

ಪಾಂಡ್ಯಗೆ ಅವಕಾಶ ನೀಡಲು ಗ್ರೀನ್‌ಗೆ ಗೇಟ್‌ಪಾಸ್‌

ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲು ಮುಂಬೈ ಇಂಡಿಯನ್ಸ್ ದೊಡ್ಡ ಹಣದ ಆಟಗಾರನನ್ನು ವ್ಯಾಪಾರ ಮಾಡಬೇಕಾಗಿತ್ತು. ಕ್ಯಾಮರೂನ್ ಗ್ರೀನ್ ಅದಕ್ಕೆ ಸರಿಹೊಂದುತ್ತಾರೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸಕ್ತಿ ತೋರಿದ್ದರಿಂದ ಟ್ರೇಡಿಂಗ್ ಮಾಡಲಾಗಿದೆ. ಐಪಿಎಲ್ ಇತಿಹಾಸದಲ್ಲಿ ಇದು ದುಬಾರಿ ಟ್ರೇಡಿಂಗ್ ಎನ್ನುವ ದಾಖಲೆ ನಿರ್ಮಿಸಿದೆ.

10 ಆಟಗಾರರನ್ನು ಬಿಡುಗಡೆ ಮಾಡಿದ ನಂತರ, ಆರ್​ಸಿಬಿ ಅವರ ಪರ್ಸ್‌ನಲ್ಲಿ ಒಟ್ಟು 40.75 ಕೋಟಿ ರೂಪಾಯಿ ಹೊಂದಿತ್ತು, ಈಗ ಗ್ರೀನ್‌ರನ್ನು ಟ್ರೇಡ್ ಮಾಡಿದ ನಂತರ, 23.25 ಕೋಟಿ ರೂಪಾಯಿ ಪರ್ಸ್ ಅನ್ನು ಹೊಂದಿದ್ದು, ಇನ್ನೂ ಆರು ಆಟಗಾರರನ್ನು ಖರೀದಿಸಲು ಅವಕಾಶ ಇದೆ.

ಶುಭಮನ್ ಗಿಲ್‌ಗೆ ನಾಯಕನ ಪಟ್ಟ

ಇನ್ನು ಎರಡು ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿಕೊಂಡ ನಂತರ ಶುಭಮನ್ ಗಿಲ್ ಅವರನ್ನು ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಗುಜರಾತ್ ಟೈಟನ್ಸ್ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಇನ್ನು ಮಾಹಿತಿಯ ಪ್ರಕಾರನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ, ರೋಹಿತ್ ಶರ್ಮಾ ಯಶಸ್ವಿಯಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ನಂತರ ಪಾಂಡ್ಯ ಮುಂಬೈನ ಭವಿಷ್ಯದ ನಾಯಕನಾಗಲಿದ್ದಾರೆ.

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ: ವನಿಂದು ಹಸರಂಗ, ಫಿನ್ ಅಲೆನ್, ಕೇದಾರ್ ಜಾಧವ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್ ಮತ್ತು ಸಿದ್ದಾರ್ಥ್ ಕೌಲ್.

ಐಪಿಎಲ್ 2024 ರ ಆರ್‌ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಾಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಮೊಹಮ್ಮದ್ ಸಿರಾಜ್, ರಾಜನ್ ಶರ್ಮಾ, ಹಿಮಾನ್ಸ್ ಶರ್ಮಾ, ವಿಜಯಕುಮಾರ್ ವೈಶಾಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+