IPL 2024: RCB ಪರ ಶತಕ ಬಾರಿಸಿದ ನಾಲ್ಕು ಭಾರತೀಯ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಪ್ರಶಸ್ತಿ ಗೆಲ್ಲದೇ ಇದ್ದರೂ ಅಭಿಮಾನಿಗಳ ಅಭಿಮಾನ ಹಾಗೆ ಇದೆ. ಇಂದು ಆರ್‌ಸಿಬಿ ಹಾಗೂ ಸಿಎಸ್‌ಕೆ ಕ್ವಾರ್ಟರ್‌ ಫೈನಲ್‌ ಫೈಟ್‌ ನಡೆಯಲಿದ್ದು, ಕ್ರಿಕೆಟ್‌ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲೆ ನೆಟ್ಟಿದೆ.

ಅದೆಷ್ಟೋ ಕ್ರಿಕೆಟ್‌ ಆಟಗಾರರು ಆರ್‌ಸಿಬಿ ಜೆರ್ಸಿ ಹಾಕಿಕೊಂಡು ಅಬ್ಬರಿಸಿದ್ದಾರೆ. ಭಾರತೀಯ ಆಟಗಾರರು ಸಹ ಈ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇಂದಿನ ವರದಿಯಲ್ಲಿ ಆರ್‌ಸಿಬಿ ಪರ ಶತಕ ಬಾರಿಸಿದ ಭಾರತೀಯ ಆಟಗಾರರ ಪರಿಚಯ ಇಲ್ಲಿದೆ.

IPL 2024 Four Indian players to score centuries for RCB

ಮನೀಷ್‌ ಪಾಂಡೆ

ಈ ಪಟ್ಟಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವ ಹೆಸರು ಮನೀಷ್ ಪಾಂಡೆ. ಇವರು ಆರ್‌ಸಿಬಿ ಪರ ಅಷ್ಟೇ ಅಲ್ಲ ಐಪಿಎಲ್‌ನಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕರ್ನಾಟಕದ ಮನೀಷ್ ಪಾಂಡೆ 2011ರಲ್ಲಿ ಡೆಕ್ಕನ್ ಚಾರ್ಜಸ್‌ ವಿರುದ್ಧದ ಪಂದ್ಯದಲ್ಲಿ ಮೂರಂಕಿ ಮುಟ್ಟಿದ್ದರು. 73 ಎಸೆತಗಳಲ್ಲಿ ಅಜೇಯ 114 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಮನೀಷ್‌ ಪಾಂಡೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 18 ಪಂದ್ಯಗಳನ್ನು ಆಡಿದ್ದು, 417 ರನ್‌ ಕಲೆ ಹಾಕಿದ್ದಾರೆ.

IPL 2024 Four Indian players to score centuries for RCB

ವಿರಾಟ್ ಕೊಹ್ಲಿ

ಆರ್‌ಸಿಬಿ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಪ್ರಸಕ್ತ ಲೀಗ್‌ನಲ್ಲೂ ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಶತಕ ಬಾರಿಸಿ ತಂಡಕ್ಕೆ ನೆರವಾಗುವ ಅಗತ್ಯವಿದೆ.

ವಿರಾಟ್‌ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇವರು ಇದುವರೆಗೆ 249 ಐಪಿಎಲ್‌ ಪಂದ್ಯಗಳಲ್ಲಿ 8 ಶತಕ ಸಿಡಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಅಲ್ಲದೆ 7897 ರನ್‌ ಕಲೆ ಹಾಕಿದ ಶ್ರೇಯ ಇವರದ್ದಾಗಿದೆ.

IPL 2024 Four Indian players to score centuries for RCB

ದೇವದತ್ ಪಡಿಕ್ಕಲ್‌

ಬೆಂಚ್‌ ಕಾಯ್ದ ಬಳಿಕ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳ ಬೇಕು ಎಂಬುದನ್ನು ತೋರಿಸಿಕೊಟ್ಟ ಆಟಗಾರ ದೇವದತ್ ಪಡಿಕ್ಕಲ್. ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್‌ ಅಬ್ಬರಿಸಿದ್ದರು. 2021ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದೇವದತ್ ಅಜೇಯ ಶತಕ ಸಿಡಿಸಿದ್ದರು. ಇವರು ಆರ್‌ಸಿಬಿ ಪರ 29 ಪಂದ್ಯಗಳನ್ನು ಆಡಿದ್ದು 884 ರನ್‌ ಕಲೆ ಹಾಕಿದ್ದಾರೆ.

IPL 2024 Four Indian players to score centuries for RCB

ರಜತ್ ಪಟಿದಾರ್

ಆರ್‌ಸಿಬಿ ಪರ ಶತಕ ಬಾರಿಸಿದ ನಾಲ್ಕನೇ ಆಟಗಾರ ರಜತ್ ಪಟಿದಾರ್. ಮಧ್ಯಪ್ರದೇಶದ ಈ ಪ್ಲೇಯರ್‌ 2022ರಲ್ಲಿ ಲಖ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ಎಸೆತಗಳಲ್ಲಿ 112 ರನ್ ಅಮೋಘ ಇನ್ನಿಂಗ್ಸ್ ಕಟ್ಟಿದ್ದರು. ಇವರ ಆರ್‌ಸಿಬಿ ಪರ 700ಕ್ಕೂ ಹೆಚ್ಚು ರನ್‌ ಕಲೆ ಹಾಕಿದ ಹಿರಿಮೆಯನ್ನು ಹೊಂದಿದ್ದಾರೆ.

17ನೇ ಆವೃತ್ತಿಯಲ್ಲೂ ರಜತ್ ಪಟಿದಾರ ಅಮೋಘ ಫಾರ್ಮ್‌ನಲ್ಲಿದ್ದು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾಗುವ ಅವಶ್ಯಕತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+