AB De Villiers: ಆರ್‌ಸಿಬಿ ತಂಡಕ್ಕೆ ಎಬಿ ಡೀ ವಿಲಿಯರ್ಸ್ ವಾಪಸ್! ಯಾವಾಗ ಗೊತ್ತಾ?

ಎಬಿ ಡೀ ವಿಲಿಯರ್ಸ್.. ಈ ಹೆಸರು ಕೇಳಿದ್ರೆ ಐಪಿಎಲ್ ಬಿಡಿ ಇಡೀ ಕ್ರಿಕೆಟ್ ಮೈದಾನ ನಡುಗಿ ಹೋಗುತ್ತಿತ್ತು. ಯಾಕಂದ್ರೆ ಎಬಿ ಡೀ ವಿಲಿಯರ್ಸ್ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಬಂದ್ರೆ ಎದುರಾಳಿ ಬೌಲರ್‌ಗಳ ಎದೆಯಲ್ಲಿ ಢವಢವ ಶುರುವಾಗುತ್ತಿತ್ತು. ಹೀಗಿದ್ದಾಗ ಆರ್‌ಸಿಬಿ ಟೀಂ ಪರ ಆಡುತ್ತಿದ್ದ ಎಬಿ ಡೀ ವಿಲಿಯರ್ಸ್ ಅವರು ಇದೀಗ ನಿವೃತ್ತಿ ಪಡೆದಿದ್ದಾರೆ. ಆದರೆ ಆರ್‌ಸಿಬಿ ಫ್ಯಾನ್ಸ್‌ಗೆ ಭರ್ಜರಿ ಸುದ್ದಿ ಸಿಕ್ಕಿದ್ದು, ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ಪರ ಮತ್ತೆ ಆಡೋದು ಗ್ಯಾರಂಟಿ ಆಗಿದೆ. ಈ ಮಾತನ್ನು ಸ್ವತಃ ಎಬಿಡಿ ಹೇಳಿದ್ದು, ವಿಡಿಯೋ ನೋಡಲು ಮುಂದೆ ಓದಿ.

ಹೌದು, ಖಾಸಗಿ ಸಂದರ್ಶನದಲ್ಲಿ ಮಾತನಾಡುವಾಗ ಎಬಿ ಡೀ ವಿಲಿಯರ್ಸ್ ಮಾತೊಂದನ್ನು ಹೇಳಿದ್ದಾರೆ. ಅದು ಏನೆಂದರೆ ತಾವು ಶೀಘ್ರದಲ್ಲೇ ಆರ್‌ಸಿಬಿ ತಂಡಕ್ಕೆ ವಾಪಸ್ ಬರುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗೇ ಎಬಿ ಡೀ ವಿಲಿಯರ್ಸ್ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಟೀಂಗೆ ವಾಪಸ್ ಬರ್ತಾ ಇರೋದು ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಆರ್‌ಸಿಬಿ ತಂಡಕ್ಕೆ ವಾಪಸ್ ಬರೋ ಬಗ್ಗೆ ಎಬಿ ಡೀ ವಿಲಿಯರ್ಸ್ ಮಾತನಾಡಿರುವ ವಿಡಿಯೋ ಇಲ್ಲಿದೆ, ವಿಡಿಯೋ ನೋಡಲು ಮುಂದೆ ಓದಿ.

IPL 2024 Explore When Ab De Villiers Will Return To RCB Team

ಎಬಿಡಿ ಅಂದ್ರೆ ಬೌಲರ್ಸ್‌ಗೆ ಭಯ!

ಐಪಿಎಲ್ ಅಖಾಡದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಎಬಿ ಡೀ ವಿಲಿಯರ್ಸ್ ಅವರಿಗೆ, ಅವರೇ ಸಾಟಿ ಎನ್ನಬಹುದು. ಸುಮಾರು 151.69 ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಬಿಡಿ. ಹೀಗೆ 39.71 ಆವರೇಜ್ ಮೂಲಕ ಐಪಿಎಲ್‌ ಟೂರ್ನಿಯಲ್ಲಿ 5,162 ರನ್ ಕಲೆಹಾಕಿರುವ ಅವರು 184 ಐಪಿಎಲ್ ಪಂದ್ಯ ಆಡಿದ್ರು. ಈ ಪೈಕಿ ಹೆಚ್ಚಾಗಿ ಆರ್‌ಸಿಬಿ ಬೆಂಗಳೂರು ತಂಡದ ಪರವೇ ಬ್ಯಾಟ್ ಬೀಸಿದ್ದರು. 40 ಅರ್ಧಶತಕ ಕೂಡ ಎಬಿ ಡೀ ವಿಲಿಯರ್ಸ್ ಅವರ ಹೆಸರಲ್ಲೇ ಇದೆ. ಹೀಗಾಗಿಯೇ ಅಭಿಮಾನಿಗಳು ಕೂಡ ಬೆಂಗಳೂರು ತಂಡಕ್ಕೆ ಎಬಿಡಿ ವಾಪಸ್ ಬರಲಿ ಅಂತಾ ಕಾಯ್ತಿದ್ರು. ಎಬಿಡಿ ತಾವು ವಾಪಸ್ ಬರುವ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ.

ಎಬಿಡಿ & ಕೊಹ್ಲಿ ಸ್ನೇಹ!

ವಿರಾಟ್ ಕೊಹ್ಲಿ ಯಾವತ್ತಿದ್ರೂ ಸ್ನೇಹಕ್ಕೆ ಭಾರಿ ಗೌರವ ಕೊಡ್ತಾರೆ. ಒಬ್ಬರ ಜೊತೆಗೆ ಸ್ನೇಹ ಸಂಬಂಧ ಬೆಸೆದರೆ ವಿರಾಟ್ ಕೊಹ್ಲಿ ಕೊನೆಯವರೆಗೂ ಅದನ್ನ ಮರೆಯೋದಿಲ್ಲ. ಹೀಗಾಗಿ, ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಪ್ರಾಣ ಸ್ನೇಹಿತರು ಇದ್ದಾರೆ. ಅದೇ ರೀತಿ ಎಬಿಡಿ ಕೂಡ RCB ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ಅತ್ಯಾಪ್ತ ಸ್ನೇಹಿತ. ಹೀಗಾಗಿ ವಿರಾಟ್ ಕೊಹ್ಲಿ & ಎಬಿಡಿ, ಈಗ್ಲೂ ಒಟ್ಟೊಟ್ಟಿಗೆ ಪ್ರಾಕ್ಟಿಸ್ ಮಾಡ್ತಾರೆ ಕ್ರಿಕೆಟ್ ಅಂಗಳದಲ್ಲಿ ಒಟ್ಟಾಗಿ ಹೋರಾಡಿದ್ದ ಜೋಡಿ ಹೊರ ಪ್ರಪಂಚದಲ್ಲಿ ಕೂಡ ಒಂದಾಗಿದ್ದಾರೆ. ಶೀಘ್ರದಲ್ಲೇ ಎಬಿಡಿ ಮತ್ತೆ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದರೆ ಆರ್‌ಸಿಬಿ ತಂಡಕ್ಕೆ ದೊಡ್ಡ ತಿರುವು ಗ್ಯಾರಂಟಿ ಅಂತಿದೆ ಕ್ರಿಕೆಟ್ ಲೋಕ.

ಕೊಹ್ಲಿ.. ಕೊಹ್ಲಿ.. ಕೊಹ್ಲಿ!

ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ 155 ಸ್ಟ್ರೈಕ್ ರೇಟ್ ಮೂಲಕ 661ಕ್ಕೂ ಹೆಚ್ಚು ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ, ಐಪಿಎಲ್ ಅಖಾಡದಲ್ಲೂ ವಿರಾಟ್ ಕೊಹ್ಲಿ ಅವರ ಅಬ್ಬರ ಜೋರಾಗಿದೆ. ಹಾಗೇ ಆರ್‌ಸಿಬಿ ತಂಡ ಇದೀಗ ಮುಂದಿನ ಹಂತಕ್ಕೆ ಅಂದ್ರೆ ಪ್ಲೇ ಆಫ್ ಹಂತಕ್ಕೆ ಹೋಗಲು ಸಜ್ಜಾಗಿದೆ. ಇನ್ನೇನು ಆರ್‌ಸಿಬಿ ಒಂದು ಪಂದ್ಯ ಗೆದ್ದರೆ ಸಾಕು ಮುಂದಿನ ಹಂತಕ್ಕೆ ಹೋಗಲಿದೆ. ಈ ಮೂಲಕ ಆರ್‌ಸಿಬಿ ಟೀಂ ಕಪ್ ಗೆಲ್ಲುವುದು ಬಹುತೇಕ ಪಕ್ಕಾ ಆಗಲಿದೆ. ಮೊನ್ನೆ ದೆಹಲಿ ತಂಡದ ವಿರುದ್ಧ ಗೆದ್ದು ಬೀಗಿದ್ದ ಆರ್‌ಸಿಬಿ ತಂಡಕ್ಕೆ ಚೆನ್ನೈ ತಂಡ ಸವಾಲು ಎಸೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+