Virat Kohli: ಆರ್‌ಸಿಬಿ ಗೆದ್ದ ಬೆನ್ನಲ್ಲೇ ಮತ್ತೆ ಫ್ಯಾನ್ಸ್ ಮನಕದ್ದ ಕಿಂಗ್ ಕೊಹ್ಲಿ!

ಬೆಂಗಳೂರು, ಮಾರ್ಚ್. 26: ಗೆದ್ದರು.. ಸೋತರು ಆರ್‌ಸಿಬಿ ಫ್ಯಾನ್ಸ್ ಮಾತ್ರ ಯಾವಾತ್ತೂ ಬದಲಾಗೋದಿಲ್ಲ ಎಂಬುದು ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿರುವ ವಿಚಾರ. ಹೀಗಾಗಿಯೇ ಈ ಬಾರಿ ಮೊದಲ ಪಂದ್ಯದಲ್ಲಿ ಸೋತರೂ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಫ್ಯಾನ್ಸ್‌ಗೆ ಸಕತ್ ಟ್ರೀಟ್ ಕೊಟ್ಟಿದ್ದಾರೆ. ಪಂದ್ಯ ಗೆದ್ದ ಖುಷಿಯ ಜೊತೆಗೆ ಮತ್ತೊಂದು ವಿಶೇಷ ಕಾರಣಕ್ಕೆ ಅಭಿಮಾನಿಗಳ ಮನಗೆದ್ದಿದ್ದಾರೆ. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 77 ರನ್ ಗಳಿಸಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ ನೆರವಾಗಿದ್ದಾರೆ.

ಹೌದು... ಮಾರ್ಚ್. 25 ರ ಸೋಮವಾರ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಗೆದ್ದು ಬೀಗಿದೆ. ತಂಡದ ಪರ ಅದ್ಭುತ 77 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಆರ್‌ಸಿಇ ಪಾಲಿಗೆ ನಿಜವಾಗಿಯೂ ವರವಾಗಿದ್ದಾರೆ. ಇದರ ಜೊತೆಗೆ ಪಂದ್ಯ ಮುಗಿದ ತಕ್ಷಣ ತನ್ನ ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿ ತಾವು ಕ್ರಿಕೆಟಿಗನೂ ಹೌದು ಜವಾಬ್ದಾರಿಯುತ ಪತಿ, ತಂದೆ ಕೂಡ ಹೌದು ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ.

IPL 2024 Cricketer Virat Kohli video calls Anushka Sharma After RCB Won Internet reacts

ಪಂದ್ಯ ಗೆದ್ದ ಖುಷಿಯಲ್ಲಿ ತಂಡ, ವಿಡಿಯೋ ಕಾಲ್‌ನಲ್ಲಿ ಕೊಹ್ಲಿ!

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಗೆಲುವನ್ನು ತಂಡದ ಇತರ ಸದಸ್ಯರು ಆನಂದಿಸುತ್ತಿದ್ದರೇ, ವಿರಾಟ್ ಕೊಹ್ಲಿ ಆ ಸಮಯದಲ್ಲಿಯೂ ಕೂಡ ಮೈದಾನದಿಂದಲೇ ನಟಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಾಮಿಕಾ, ಮಗ ಅಕಾಯ್‌ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೀಡಿಯೊ ಕೋಟ್ಯಾಂತರ ಜನರ ಮನಗೆದ್ದಿದೆ.

ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎರಡನೇ ಮಗುವಿಗೆ ಪೋಷಕರಾಗಿದ್ದಾರೆ. ಹೀಗಾಗಿ ಪಂದ್ಯ ಮುಗಿದ ಕೂಡಲೇ ಅನುಷ್ಕಾ ಅವರಿಗೆ ಕರೆ ಮಾಡಿ ಊಟ ಮಾಡಿದಿರಾ ಎಂದು ವಿಚಾರಿಸಿದ್ದಾರೆ. ಜೊತೆಗೆ ಮಕ್ಕಳ ಜೊತೆಗೆ ಮುದ್ದು ಮುದ್ದಾಗಿ ಸನ್ನೆ ಮಾಡುತ್ತಾ ಆನಂದಿಸಿದ್ದಾರೆ. ತನ್ನವರಿಗೆ ಖುಷಿಯಿಂದ ಮುತ್ತು ಕೊಟ್ಟಿದ್ದಾರೆ. ಬಳಿಕ ತಂಡದ ಜೊತೆಗೆ ಹೋಗಬೇಕು ಆಮೇಲೆ ಕರೆ ಮಾಡುತ್ತೇನೆ ಎಂದು ತಿಳಿಸುತ್ತಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

IPL 2024 Cricketer Virat Kohli video calls Anushka Sharma After RCB Won Internet reacts

ಈ ಹಿಂದೆಯೂ ವಿರಾಟ್ ಕೊಹ್ಲಿ ಎಂತಹ ಒತ್ತಡದಲ್ಲಿದ್ದರೂ ಮನೆಯವರನ್ನು ವಿಚಾರಿಸುವುದನ್ನು ಬಿಟ್ಟಿಲ್ಲ. ಅವರ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಈ ಕಾರಣದಿಂದಲೇ ವಿರಾಟ್ ಕೊಹ್ಲಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಬಾರಿ ಕೂಡ ಮೈದಾನದಿಂದ ಒಂದು ನಿಮಿಷ ಹೆಚ್ಚು ಕಾಲ ತಮ್ಮ ಮನೆಯವರೊಂದಿಗೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡುವಾಗ ವಿರಾಟ್ ಕೊಹ್ಲಿ, ನಗುವುದು, ಮುಖವನ್ನು ಮರೆಮಾಚುವುದು ಮತ್ತು ತಮಾಷೆಯ ಚಹರೆಗಳನ್ನು ಮಾಡುವ ಮೂಲಕ ಆಟವಾಡುವಂತೆ ಕಾಣಿಸುತ್ತಾರೆ. ಹೀಗಾಗಿ ಹಲವು ಮಂದಿ ಅವರು ತನ್ನ ಚಿಕ್ಕ ಮಗು ಅಕಾಯ್ ಜೊತೆಗೆ ಮಾತನಾಡುತ್ತಿರಬಹುದು ಎಂದಿದ್ದಾರೆ.

ಮತ್ತೆ ಕೆಲವರು, ಮ್ಯಾಚ್ ಮುಗಿದ ತಕ್ಷಣವೆ ತಂದೆಯ ಜವಾಬ್ದಾರಿ ಶುರುವಾಯಿತು. ಬೆಸ್ಟ್ ಕೂಲ್ ಡ್ಯಾಡಿ ವಿರಾಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತಷ್ಟು ಜನ ಅವರು ಅಪ್ಪಟ ಕೌಟುಂಬಿಕ ವ್ಯಕ್ತಿ ಎಂದರೆ, ಮತ್ತೊಬ್ಬರು, ನಾನು ಇಡೀ ದಿನ ಈ ವಿಡಿಯೋ ನೋಡುತ್ತಾ ದಿನ ದೂಡಬಹುದು ಎಂದು ಖುಷಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಮತ್ತು ಅನುಷ್ಕಾಗೆ ಒಬ್ಬ ಮಗಳಿದ್ದಾಳೆ. ಇನ್ನು, ಫೆಬ್ರವರಿ 15, 2024 ರಂದು ವಿರಾಟ್- ಅನುಷ್ಕಾ ದಂಪತಿಗೆ ಎರಡನೆ ಮಗುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+