IPL 2024: ಈ ದಿನದಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ನಿರ್ಧಾರ

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು ಪ್ರಕ್ರಿಯೆಯನ್ನು ಡಿಸೆಂಬರ್ ತಿಂಗಳನಲ್ಲಿ ನಡೆಸಲು ಬಿಸಿಸಿಐ ಯೋಚಿಸುತ್ತಿದೆ. ಡಿಸೆಂಬರ್ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯಬಹುದು ಎಂದು ಹೇಳಲಾಗಿದೆ. ಡಿಸೆಂಬರ್ 10ರಿಂದ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಡಿಸೆಂಬರ್ ತಿಂಗಳಿನಲ್ಲಿ ಭಾರತ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲಿದೆ. ಕ್ರಿಸ್ ಮಸ್ ಕೂಡ ಇರುವುದರಿಂದ ವಿದೇಶಿ ಕೋಚಿಂಗ್ ಸಿಬ್ಬಂದಿ ಕೂಡ ಹರಾಜಿನಲ್ಲಿ ಭಾಗವಹಿಸುವುದು ಕಷ್ಟವಾಗುವುದರಿಂದ ಈ ನಿರ್ಧಾರ ಮಾಡಲಾಗಿದೆ.

IPL 2024 Auction to Clash with Indias SA Tour; BCCI Schedules Late December

"ನಮಗೆ ಈ ಬಗ್ಗೆ ಮಾಹಿತಿ ಇದೆ, ಈ ಬಾರಿ ಹರಾಜು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಇರುವುದಿಲ್ಲ. ಎಲ್ಲರಿಗೂ ಅನುಕೂಲವಾಗುವಂತಹ ದಿನದಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಪ್ರಯತ್ನಿಸಲಾಗುತ್ತದೆ" ಎಂದು ಬಿಸಿಸಿಐ ಅಧಿಕಾರಿ ಹೇಳಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಐಪಿಎಲ್ 2023ರ ಹರಾಜು ಪ್ರಕ್ರಿಯೆ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಿತು. ಬಿಸಿಸಿಐ ಹೋಟೆಲ್ ಅಂತಿಮಗೊಳಿಸುವಲ್ಲಿ ಸಮಸ್ಯೆ ಅನುಭವಿಸಿತು, ರಿಕಿಪಾಂಟಿಂಗ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಕ್ರಿಸ್‌ಮಸ್ ಹಬ್ಬದ ಕಾರಣ ವಿದೇಶಿ ಕೋಚ್‌ಗಳಿಗೆ ಸಮಸ್ಯೆಯಾಗಿತ್ತು.

ಈ ನಗರದಲ್ಲಿ ಐಪಿಎಲ್ ಹರಾಜು

ಡಿಸೆಂಬರ್ ಮೊದಲ ವಾರದಲ್ಲೇ ಈ ಬಾರಿ ಹರಾಜು ನಡೆಸುವ ಸಾಧ್ಯತೆ ಇದೆ. ಕಳೆದ ವರ್ಷದಂತೆ ಕ್ರಿಸ್ಮಸ್ ಜೊತೆ ಯಾವುದೇ ಘರ್ಷಣೆ ಇಲ್ಲ. ಮುಂಬೈ, ಜೈಪುರ, ಅಹಮದಾಬಾದ್, ಕೊಚ್ಚಿ ಮತ್ತು ಕೋಲ್ಕತ್ತಾ ಹರಾಜು ಪ್ರಕ್ರಿಯೆಗೆ ಆತಿಥ್ಯ ವಹಿಸಲು ಪೈಪೋಟಿಯಲ್ಲಿವೆ. ವಿಶ್ವಕಪ್ 2023 ರ ನಂತರ ಅಂತಿಮ ದಿನಾಂಕ ಮತ್ತು ಸ್ಥಳವನ್ನು ಘೋಷಿಸಲಾಗುವುದು ಎಂದು ಹೇಳಲಾಗಿದೆ. ಐಪಿಎಲ್ ತಂಡಗಳ ಪರ್ಸ್‌ ಅನ್ನು ಈ ಬಾರಿ 100 ಕೋಟಿ ರೂ.ಗೆ ಹೆಚ್ಚಿಸಲಾಗುವುದು.

ಸದ್ಯ ಬಿಸಿಸಿಐ ಸಂಪೂರ್ಣ ಗಮನವನ್ನು 2023ರ ಏಕದಿನ ವಿಶ್ವಕಪ್ ಆಯೋಜನೆಯತ್ತ ಹರಿಸಿದೆ. ಅಂತಿಮ ದಿನಾಂಕ ಮತ್ತು ಸ್ಥಳದ ಬಗ್ಗೆ ನಂತರ ಐಪಿಎಲ್ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

"ಗಮನ ಈಗ ವಿಶ್ವಕಪ್‌ನಲ್ಲಿದೆ ಮತ್ತು ಪ್ರತಿ ವಿವರವನ್ನು ಒಮ್ಮೆ ನೋಡಿಕೊಂಡರೆ, ನಾವು ಐಪಿಎಲ್‌ನತ್ತ ಸಾಗುತ್ತೇವೆ. ವಿಶ್ವಕಪ್ ನಂತರ ದಿನಾಂಕವನ್ನು ನಿರ್ಧರಿಸುತ್ತೇವೆ. ಇದು ಡಿಸೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದನ್ನು ನಂತರ ಐಪಿಎಲ್ ಜಿಸಿ ಸಭೆಯಲ್ಲಿ ಮಾತ್ರ ಚರ್ಚಿಸಲಾಗುವುದು," ಎಂದು ಅಧಿಕಾರಿ ಹೇಳಿದರು.

ಈ ಬಾರಿ ಮಿನಿ ಹರಾಜು ನಡೆಯಲಿದ್ದು, ಯಾವುದೇ ಸಂಭಾವ್ಯ ಹೊಸ ಖರೀದಿಗಳಿಗೆ ಸ್ಥಳಾವಕಾಶ ಮಾಡುವಾಗ ತಂಡಗಳು ತಮ್ಮ ಮೂಲ ತಂಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+