IPL 2023: ಕೊಹ್ಲಿ ಕೆಣಕಿದ್ದ ನವೀನ್ ಉಲ್ ಹಕ್‌ಗೆ ಸ್ವಿಗ್ಗಿ, ಜೊಮ್ಯಾಟೊ, ರಾಜಸ್ಥಾನ್ ಕಡೆಯಿಂದಲೂ ಟ್ರೋಲ್!

IPL 2023: Swiggy, Zomato and Rajasthan Royals trolled Naveen Ul Haq by posting mango photos

ಮೇ 1ರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು.

ಕೇವಲ ಮೈದಾನಕ್ಕೆ ಸೀಮಿತವಾಗದ ಈ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿಯೂ ಮುಂದುವರಿದಿತ್ತು. ಬಳಿಕ ವಿರಾಟ್ ಕೊಹ್ಲಿ ಪಂದ್ಯವೊಂದರಲ್ಲಿ ಹೆಚ್ಚು ರನ್ ಕಲೆಹಾಕದೇ ಔಟ್ ಆದದ್ದನ್ನು ಇನ್ಸ್ಟಾಗ್ರಾಮ್ ಸ್ಟೋರಿಗೆ ಹಾಕಿಕೊಂಡಿದ್ದ ನವೀನ್ ಉಲ್ ಹಕ್ 'ಸ್ವೀಟ್ ಮ್ಯಾಂಗೋಸ್' ಎಂದು ಬರೆದುಕೊಂಡು ಸಂಭ್ರಮಿಸಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ಸಹ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ಸೋತದ್ದನ್ನು ಪರೋಕ್ಷವಾಗಿ ಸಂಭ್ರಮಿಸಿದ್ದರು. ಹೀಗೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಆನ್‌ಲೈನ್ ಕಿತ್ತಾಟ ನಡೆಯುತ್ತಲೇ ಬಂದಿದೆ.

ಹೀಗೆ ನವೀನ್ ಉಲ್ ಹಕ್ ಯಾವಾಗ ವಿರಾಟ್ ಕೊಹ್ಲಿ ವಿಕೆಟ್ ಅನ್ನು ಮಾವಿನ ಹಣ್ಣಿನ ಜತೆ ಸಂಭ್ರಮಿಸಿದರೋ ಆಗಿನಿಂದ ಅವರ ವಿರುದ್ದ ವಿರಾಟ್ ಕೊಹ್ಲಿ ಫ್ಯಾನ್ಸ್ ಸತತವಾಗಿ ಕಿಡಿಕಾರುತ್ತಲೆ ಇದ್ದಾರೆ. ನವೀನ್ ಉಲ್ ಹಕ್ ಕಳಪೆ ಪ್ರದರ್ಶನ ನೀಡಿದಾಗಲೆಲ್ಲಾ ಟ್ರೋಲ್ ಮಾಡುತ್ತಲೆ ಇದ್ದಾರೆ.

ಇನ್ನು ಅಂದು ನವೀನ್ ಉಲ್ ಹಕ್ ಮಾಡಿದ್ದ ಸಂಭ್ರಮಾಚರಣೆಯನ್ನು ನಿನ್ನೆ ( ಮೇ 24 ) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋತ ನಂತರವೂ ಟ್ರೋಲ್ ಮಾಡಲಾಗಿದೆ.

ಇನ್ನು 4 ಓವರ್ ಬೌಲಿಂಗ್ ಮಾಡಿದ ನವೀನ್ ಉಲ್ ಹಕ್ 38 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಟಗಾರರಾದ ರೋಹಿತ್ ಶರ್ಮಾ, ಕೆಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರ ವಿಕೆಟ್‌ಗಳನ್ನು ನವೀನ್ ಉಲ್ ಹಕ್ ಪಡೆದರು.

ಕೆಟ್ ಪಡೆದುಕೊಂಡ ಬಳಿಕ ಕಿವಿ ಮುಚ್ಚಿಕೊಂಡು ಸೆಲಬ್ರೇಟ್ ಮಾಡಿದ್ದಾರೆ. ಇದು ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಪಂದ್ಯ ಮುಕ್ತಾಯವಾದ ಬಳಿಕ ಲಕ್ನೋ ಹೀನಾಯವಾದ ಸೋಲನ್ನು ಕಂಡದ್ದನ್ನು ಇಟ್ಟುಕೊಂಡು ಮುಂಬೈ ಇಂಡಿಯನ್ಸ್‌ನ ಕೆಲ ಆಟಗಾರರು ನವೀನ್ ಉಲ್ ಹಕ್ ಟ್ರೋಲ್ ಮಾಡಿದ್ದಾರೆ. ಅದೂ ಸಹ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ನವೀನ್ ಉಲ್ ಹಕ್ ಬಳಿಸಿದ್ದ ವಿಧಾನವನ್ನೇ ಈ ಆಟಗಾರರು ಬಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸಂದೀಪ್ ವಾರಿಯರ್ ತನ್ನ ಸಹ ಆಟಗಾರರಾದ ವಿಷ್ಣು ವಿನೋದ್ ಹಾಗೂ ಕುಮಾರ್ ಕಾರ್ತಿಕೇಯ ಜತೆಗೂಡಿ ಗಾಂಧೀಜಿಯವರ ಮೂರು ಬುದ್ದಿವಂತ ಕೋತಿಗಳ ಹಾಗೆ ಕಿವಿ, ಕಣ್ಣು ಹಾಗೂ ಬಾಯಿ ಮುಚ್ಚಿ ಮುಂದಿನ ಟೇಬಲ್ ಮೇಲೆ ಮಾವಿನ ಹಣ್ಣುಗಳನ್ನು ಇಟ್ಟು 'ಮಾವಿನ ಹಣ್ಣಿನ ಸ್ವೀಟ್ ಸೀಸನ್' ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ಔಟ್ ಆದಾಗ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ವೀಟ್ ಮ್ಯಾಂಗೋಸ್ ಎಂದು ಬರೆದುಕೊಂಡಿದ್ದ ಹಾಗೂ ನಿನ್ನೆಯ ಪಂದ್ಯದಲ್ಲಿ ವಿಕೆಟ್ ಪಡೆದು ಕಿವಿ ಮುಚ್ಚಿ ಸಂಭ್ರಮಿಸಿದ್ದ ನವೀನ್ ಉಲ್ ಹಕ್‌ಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಟಾಂಗ್ ನೀಡಿದ್ದಾರೆ.

ಅಲ್ಲದೆ ಜೊಮ್ಯಾಟೊ ಕಂಪನಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಿನ್ನೆಯ ಪಂದ್ಯದಲ್ಲಿ ನವೀನ್ ಉಲ್ ಹಕ್ ರನ್ ಗಳಿಸಲು ಪರದಾಡುತ್ತಿದ್ದ ಫೋಟೊ ಜತೆ ಮಾವಿನ ಹಣ್ಣುಗಳನ್ನು ಇಟ್ಟು 'ಮಾವಿನ ಹಣ್ಣುಗಳು ಹೆಚ್ಚೇನೂ ಸಿಹಿಯಿಲ್ಲ' ಎಂದು ಬರೆದುಕೊಂಡು ಟ್ರೋಲ್ ಮಾಡಿದೆ. ಸ್ವಿಗ್ಗಿ ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ಮಾವಿನಹಣ್ಣಿನ ಫೋಟೊ ಹಂಚಿಕೊಂಡು ಟ್ರೋಲ್ ಮಾಡಿತ್ತು.

ಇನ್ನು ರಾಜಸ್ಥಾನ್ ರಾಯಲ್ಸ್ ಮುಂಬೈ ಇಂಡಿಯನ್ಸ್ ತಂಡದ ಆಕಾಶ್ ಮಧ್ವಲ್ ಐದು ವಿಕೆಟ್‌ಗಳನ್ನು ಪಡೆದು ಲಕ್ನೋ ಸೋಲಿಗೆ ಕಾರಣರಾಗಿದ್ದನ್ನು ಟ್ವೀಟ್ ಮಾಡಿದ್ದು, 5 ವಿಕೆಟ್ ಎಂದು ಬಿಂಬಿಸುವ ಬದಲು ಐದು ಮ್ಯಾಂಗೊಗಳು ಎಂದು ಬರೆದುಕೊಂಡು ನವೀನ್ ಉಲ್ ಹಕ್ ಕಾಲೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+