IPL 2023: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ಶಿಖರ್ ಧವನ್
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರ ಡಬಲ್ ಹೆಡರ್ ಪಂದ್ಯಗಳು ನಡೆಯಲಿದೆ. ಮೊದಲ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣೆಸಾಟ ನಡೆಸಿದ್ದು ಈ ಪಂದ್ಯದಲ್ಲಿ ಯಾವ ತಂಡ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಈ ಪಂದ್ಯದಲ್ಲಿ ಪಂಜಾಬ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಐಪಿಎಲ್‌ನಲ್ಲಿ ಮಹತ್ವದ ದಾಖಲೆಯೊಂದನ್ನು ಸರಿಗಟ್ಟಿದ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು 50ಕ್ಕೂ ಅಧಿಕ ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ಈವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಈ ಪಂದ್ಯದಲ್ಲಿ ಶಿಖರ್ ಧವನ್ ಕೊಹ್ಲಿ ಹೆಸರಿನಲ್ಲಿದ್ದ ಈ ಪ್ರಮುಖ ದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಭಾನುಕಾ ರಾಜಪಕ್ಷ ಜೊತೆಗೆ 86 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು 50 ಪ್ಲಸ್ ಜೊತೆಯಾಟದಲ್ಲಿ ಭಾಗಿಯಾದ ಆಟಗಾರರ ಪಟ್ಟಿ
| ವಿರಾಟ್ ಕೊಹ್ಲಿ | ಶಿಖರ್ ಧವನ್ | ಸುರೇಶ್ ರೈನಾ | ಡೇವಿಡ್ ವಾರ್ನರ್ | ರೋಹಿತ್ ಶರ್ಮಾ |
| 94 | 94 | 83 | 82 | 76 |
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ ಉತ್ತಮ ಪ್ರದರ್ಶನ ನೀಡಿದರು. 29 ಎಸೆತಗಳನ್ನು ಎದುರಿಸಿದ ಧವನ್ 40 ರನ್ ಬಾರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು 6 ಬೌಂಡರಿ ಬಾರಿಸಿ ಮಿಂಚಿದರು. ಇನ್ನು ಧವನ್‌ಗೆ ಸಾಥ್ ನೀಡಿದ ರಾಜಪಕ್ಷ ಸ್ಪೋಟಕವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 32 ಎಸೆತಗಳಲ್ಲಿ ಅವರು 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 50 ರನ್‌ಗಳಿಸಿ ಔಟಾದರು.
CSK vs GT IPL 2023: ಗುಜರಾತ್ ವಿರುದ್ಧ 3ನೇ ಸೋಲು; CSK ಬ್ಯಾಟರ್‌ಗಳ ವಿರುದ್ಧ ಕಿಡಿಕಾರಿದ ಎಂಎಸ್ ಧೋನಿ
ಇನ್ನು ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಟಾಸ್ ಸೋತರು ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡಿದ್ದು ಕೆಕೆಆರ್‌ಗೆ ದೊಡ್ಡ ಮೊತ್ತದ ಗುರಿಯನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಗಿದೆ.
ಪಂಜಾಬ್ ಕಿಂಗ್ಸ್ ಆಡುವ ಬಳಗ: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕುರಾನ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹಾರ್, ಅರ್ಷದೀಪ್ ಸಿಂಗ್
IPL 2023: ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ತಂಡಗಳ ಕಾದಾಟ; ಪಂದ್ಯದ ವಿವರ, ಆಡುವ 11ರ ಬಳಗ
ಬೆಂಚ್: ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ರಿಷಿ ಧವನ್, ರಾಜ್ ಬಾವಾ, ಬಲ್ತೇಜ್ ಸಿಂಗ್, ಅಥರ್ವ ಟೈಡೆ, ವಿಧ್ವತ್ ಕಾವೇರಪ್ಪ, ಮೋಹಿತ್ ರಾಠಿ, ಶಿವಂ ಸಿಂಗ್
ಕೊಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಬೆಂಚ್: ವೆಂಕಟೇಶ್ ಅಯ್ಯರ್, ಎನ್ ಜಗದೀಸನ್, ಲಾಕಿ ಫರ್ಗುಸನ್, ಡೇವಿಡ್ ವೈಸ್, ಕುಲ್ವಂತ್ ಖೇಜ್ರೋಲಿಯಾ, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ.












Click it and Unblock the Notifications