IPL 2023: ಈ ತಂಡದ ನೈಜ ಪ್ರದರ್ಶನ ಇನ್ನಷ್ಟೇ ಬರಬೇಕಿದೆ: ಸಂಜಯ್ ಮಂಜ್ರೇಕರ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಭರ್ಜರಿಯಾಗಿ ಆರಂಭವಾಗಿದ್ದು ಪ್ರತಿ ದಿನವೂ ರೋಚಕ ಪಂದ್ಯಗಳಿಗೆ ಅಭಿಮಾನಿಗಳು ಸಾಕ್ಷಿಯಾಗುತ್ತಿದ್ದಾರೆ. ಕೆಲ ತಂಡಗಳಿಂದ ಅತ್ಯುತ್ತಮ ಪ್ರದರ್ಶನ ವ್ಯಕ್ತವಾಗಿದ್ದರೆ ಕೆಲ ತಂಡಗಳು ಸಾಧಾರಣ ಪ್ರದರ್ಶನ ನೀಡುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ನೀಡುತ್ತಿರುವ ಪ್ರದರ್ಶನದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ಲ್ಲಿ ಆರಂಭದಲ್ಲಿ ಸತತ ಎರಡು ಗೆಲುವು ಸಾಧಿಸಿ ಭರ್ಜರಿ ಆರಂಭ ಪಡೆಯಿತು. ಆದರೆ ನಂತರ ಎರಡು ಪಂದ್ಯಗಳಲ್ಲಿ ಮೊಹಾಲಿ ಮೂಲದ ತಂಡ ಸೋಲು ಅನುಭವಿಸಿದ್ದು ಹಿನ್ನಡೆ ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ ತಂಡ 6ನೇ ಸ್ಥಾನವನ್ನು ಪಡೆದುಕೊಂಡಿದೆ.

IPL 2023: Sanjay Manjrekar statement on PBKS, they had best auction but performances arent coming

ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ಸಂಜಯ್ ಮಂಜ್ರೇಕರ್ ಸಂದರ್ಶನ ನೀಡಿದ್ದು ಈ ಸಂದರ್ಭದಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಈ ಟೂರ್ನಿಯನ್ನು ಆನಂದಿಸುವಂತೆ ತೋರುತ್ತಿಲ್ಲ ಎಂದಿರುವ ಅವರು ಹರಾಜಿನಲ್ಲಿ ಅತ್ಯುತ್ತಮ ಆಯ್ಕೆ ಮಾಡಿದರೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೋಲುಣಿಸಿತ್ತು.

"ನೀವು ಗುಜರಾತ್ ಟೈಟನ್ಸ್ ತಂಡವನ್ನು ನೋಡಿದರೆ ಅವರು ಪಂದ್ಯಗಳಲ್ಲಿ ನಿರಾಳವಾಗಿದ್ದು ಆನಂದಿಸುತ್ತಿದ್ದಾರೆ. ಆದರೆ ಅದು ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸುತ್ತಿಲ್ಲ. ಇದು ವರ್ಷಗಳಿಂದಲೂ ನಡೆಯುತ್ತಿದೆ. ಒಂದು ಹಂತದಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹರಾಜಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದಂತೆ ಭಾಸವಾಗಿತ್ತು. ಆದರೆ ಅವರ ನೈಜ ಪ್ರದರ್ಶನ ಇನ್ನು ಕೂಡ ಬಂದಿಲ್ಲ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

IPL 2023: ನಮ್ಮ ಬ್ಯಾಟರ್‌ಗಳನ್ನು ಪ್ರಶಂಸಿಸುವುದಿಲ್ಲ; ಪಂಜಾಬ್ ವಿರುದ್ಧ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಹೇಳಿದ್ದೇಕೆ?

ಮುಂದುವರಿದು ಮಾತನಾಡಿದ ಸಂಜಯ್ ಮಂಜ್ರೇಕರ್ ಪಂಜಾಬ್ ಕಿಂಗ್ಸ್ ತಂಡ ಒತ್ತಡದಲ್ಲಿದ್ದಂತೆ ಭಾಸವಾಗುತ್ತಿದೆ, ಒತ್ತಡವನ್ನು ಆಚೆಗಿಟ್ಟು ಪ್ರಯತ್ನಿಸಿದರೆ ಆ ತಂಡದಿಂದ ಉತ್ತಮ ಪ್ರದರ್ಶನ ಬರಬಹುದು ಎಂದಿದ್ದಾರೆ. "ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಯಾಮ್ ಕರನ್, ಭಾನುಕಾ ರಾಜಪಕ್ಷೆ ಆಟನೋಡಿದರೆ ತಂಡದ ಆಟಗಾರರು ಒತ್ತಡದಲ್ಲಿದ್ದಂತೆ ತೋರುವುದು ಸ್ಪಷ್ಟವಾಗುತ್ತದೆ. ಅವರು ತಮ್ಮ ಆಟವನ್ನು ಆನಂದಿಸುತ್ತಿಲ್ಲ. ಅರು ಒತ್ತಡವನ್ನು ಬಿಟ್ಟು ಆಡಿದರೆ ಬಹಶಃ ಉತ್ತಮ ಪ್ರದರ್ಶನ ಬರಬಹುದು" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಪಂಜಾಬ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಶನಿವಾರ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಲಿದ್ದು ಗೆಲುವಿಗಾಗಿ ಪ್ರಯತ್ನಿಸಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಅತ್ಯುತ್ತಮ ಪ್ರದರ್ಶಣ ನೀಡುತ್ತಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಕಠಿಣ ಸವಾಲವನ್ನು ಶಿಖರ್ ಧವನ್ ಬಳಗ ಯಾವ ರೀತಿಯಾಗಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

CSK in IPL: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಹತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೆದ್ದ ತಂಡಗಳು ಇವು!

ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಸಿಕಂದರ್ ರಜಾ, ಶಾರುಖ್ ಖಾನ್, ಮೋಹಿತ್ ರಾಥೀ, ಹರ್ಪೀತ್ ಬ್ರಾರ್, ಸ್ಯಾಮ್ ಕರನ್, ರಿಷಿ ಧವನ್, ಬಲ್ತೇಜ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಷೆ, ಜಿತೇಶ್ ಶರ್ಮಾ, ಕಗಿಸೊ ರಬಾಡ, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್, ಶಿವಂ ಸಿಂಗ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಸಿಂಗ್ ಬ್ರಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+