ಐಪಿಎಲ್ 2023: ಪ್ಲೇಆಫ್ ಹಂತಕ್ಕೇರುವ 4 ತಂಡಗಳ ಹೆಸರಿಸಿದ ಮಂಜ್ರೇಕರ್: ಆರ್‌ಸಿಬಿ ಕಥೆಯೇನು?

ಐಪಿಎಲ್ 16ನೇ ಆವೃತ್ತಿ ಆರಂಭಗೊಳ್ಳಲು ಕೆಲವೇ ಕ್ಷಣಗಳು ಬಾಕಿಯಿದೆ. ಈ ಸಂದರ್ಭದಲ್ಲಿ ತಂಡಗಳ ಕೊನೆಯ ಹಂತದ ಸಿದ್ಧತೆಗಳನ್ನು ನಡೆಸುತ್ತಿದ್ದು ಗೆಲುವಿನಿಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಹವಣಿಸುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪ್ಲೇಆಫ್ ಹಂತಕ್ಕೇರಬಲ್ಲ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಎಲ್ಲಾ ತಂಡಗಳು ಕೂಡ ಕೆಲ ಬದಲಾವಣೆಗಳೊಂದಿಗೆ ಹೊಸ ಆವೃತ್ತಿಗೆ ಮತ್ತಷ್ಟು ಬಲಿಷ್ಠವಾಗಿದೆ. ಈ ಮೂಲಕ ಮತ್ತೊಮ್ಮೆ ಜಿದ್ದಾಜಿದ್ದಿನ ಕದನಕ್ಕೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಹೀಗಾಗಿ ಯಾವ ತಂಡ ಲೀಗ್ ಹಂತದಲ್ಲಿ ಮೇಲುಗೈ ಸಾಧಿಸಲಿದೆ? ಈ ಮೂಲಕ ಪ್ಲೇಆಫ್ ಹಂತಕ್ಕೇರುವ ತಂಡಗಳು ಯಾವುದು ಎಂಬುದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಮ್ಮ ವಿಶ್ಲೇಷಣೆ ನಡೆಸಿದ್ದಾರೆ.

IPL 2023: Sanjay Manjrekar predicted included RCB These 4 teams will enter playoffs

ಪ್ಲೇಆಫ್ ಹಂತಕ್ಕೇರಲಿದೆ ಆರ್‌ಸಿಬಿ ಎಂದ ಮಂಜ್ರೇಕರ್:

ಇನ್ನು ಈ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಂದಹಾಗೆ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ಅದ್ಭುತ ಅವಕಾಶವನ್ನು ಹೊಂದಿದೆ ಎಂದಿದ್ದು ಈ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಸುದೀರ್ಘ ಕಾಲದ ಕನಸು ಈ ಬಾರಿ ನನದಾಗಲಿದೆ ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಉಳಿದ ಮೂರು ತಂಡಗಳು ಯಾವುದು?:

ಇನ್ನು ಪ್ಲೇಆಫ್ ಹಂತಕ್ಕೇರುವ ಸಾಧಯತೆಯಿರುವ ಉಳಿದ ಮೂರು ತಂಡಗಳನ್ನು ಸಂಜಯ್ ಮಂಜ್ರೇಕರ್ ಹೆಸರಿಸಿದ್ದಾರೆ. ಆರ್‌ಸಿಬಿ ತಂಡವನ್ನು ಹೊರತುಪಡಿಸಿದರೆ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್, ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡಗಳು ಈ ಬಾರಿ ಪ್ಲೇಆಫ್ ಹಂತಕ್ಕೇರಲಿದೆ ಎಂದು ಸಂಜಯ್ ಮಂಜ್ರೇಕರ್ ಭವಿಷ್ಯ ನುಡಿದಿದ್ದಾರೆ.

IPL 2023: ಒಂದು ಐಪಿಎಲ್ ಆವೃತ್ತಿಯಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಎಷ್ಟು ಲಕ್ಷ ಕೋಟಿ ಗೊತ್ತಾ?

ಹಾಲಿ ಚಾಂಪಿಯನ್ ಬಗ್ಗೆ ಮಂಜ್ರೇಕರ್‌ಗೆ ಇಲ್ಲ ವಿಶ್ವಾಸ:

ಇನ್ನು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದು ಮೊದಲ ಪ್ರಯತ್ನದಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಗಾಗಿ ಈ ಬಾರಿಯ ಐಪಿಎಲ್‌ನಲ್ಲಿಯೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳು ಇದೆ. ಆದರೆ ಸಂಜಯ್ ಮಂಜ್ರೇಕರ್ ಪ್ಲೇಆಫ್ ಹಂತಕ್ಕೇರಬಲ್ಲ ನಾಲ್ಕು ತಂಡಗಳ ಪೈಕಿ ಗುಜರಾತ್ ಟೈಟನ್ಸ್ ತಂಡವನ್ನು ಕಡೆಗಣಿಸಿದ್ದು ಅಚ್ಚರಿ ಮೂಡಿಸಿದೆ.

ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದ ಮಾಜಿ ಕ್ರಿಕೆಟಿಗ:

ಇನ್ನು ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಪಟ್ಟಕ್ಕೇರುವ ಅತ್ಯುತ್ತಮ ಅವಕಾಶವನ್ನು ಹೊಂದಿದೆ ಎಂದಿದ್ದಾರೆ. ಆರ್‌ಸಿಬಿ ತಂಡ ಅತ್ಯುತ್ತಮ ಬೌಲಿಂಗ್ ವಿಭಾಗವನ್ನು ಹೊಂದಿದ್ದು ಬ್ಯಾಟಿಂಗ್‌ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಉತ್ತಮ ಪ್ರದರ್ಶನ ನೀಡಲು ಸಫಲವಾದಲ್ಲಿ ತಂಡ ಖಂಡಿತವಾಗಿಯೂ ಚಾಂಪಿಯನ್ ಎನಿಸಲಿದೆ ಎಂದಿದ್ದಾರೆ ಸಂಜಯ್ ಮಂಜ್ರೇಕರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+