IPL 2023: ನನ್ನ ಆಟದ ಬೆಳವಣಿಗೆಗೆ ಈ ಸ್ಟಾರ್ ಆಟಗಾರನ ಪಾತ್ರ ದೊಡ್ಡದು: ಯಶಸ್ವಿ ಜೈಸ್ವಾಲ್

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನಿಡಿ ಗಮನಸೆಳೆಯುತ್ತಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಜೈಸ್ವಾಲ್ 125 ರನ್‌ಗಳನ್ನು ಗಳಿಸಿದ್ದು 41.67ರಷ್ಟು ಸರಾಸರಿ ಹೊಂದಿದ್ದಾರೆ. ಜೋಸ್ ಬಟ್ಲರ್ ಜೊತೆಗೂಡಿ ಸ್ಪೋಟಕ ಆರಂಭವನ್ನು ನೀಡುತ್ತಿರುವ ಇವರು ಈ ಆವೃತ್ತಿಯ ಆಕ್ರಮಣಕಾರಿ ಆರಂಬಿಕ ಆಟಗಾರರು ಎನಿಸಿಕೊಂಡಿದ್ದಾರೆ.

ಈ ಯಶಸ್ಸಿನ ಬಗ್ಗೆ ಯುವ ಆಟಗಾರ ಯಶಸ್ವಿ ಆಟಗಾರ ಪ್ರತಿಕ್ರಿಯೆ ನೀಡಿದ್ದು ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಸ್ತುತ ವೈಟ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಜೋಸ್ ಬಟ್ಲರ್ ಅವರಿಂದ ಸಾಕಷ್ಟು ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಪಂದ್ಯದ ಸಂದರ್ಭದ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಿರುವುದಾಗಿಯೂ ಜೈಸ್ವಾಲ್ ಹೇಳಿಕೆ ನೀಡಿದ್ದಾರೆ.

IPL 2023: RR batter Yashasvi Jaiswal said star batter Jos Buttler helped me improve my game

"ಪವರ್‌ಪ್ಲೇನಲ್ಲಿ ಜೋಸ್ ಬಟ್ಲರ್ ಯಾವಾಗಲೂ ಉತ್ತಮವಾದ ಮನೋಭಾವದೊಂದಿಗೆ ಆಡುವಂತೆ ಹಾಗೂ ಕ್ರಿಕೆಟಿಂಗ್ ಶಾಟ್ ಬಾರಿಸುವಂತೆ ಹೇಳಿತ್ತಾರೆ. ನಾನು ಅದನ್ನು ಪ್ರಯತ್ನಿಸುತ್ತಾ ಪಾಲಿಸುತ್ತೇನೆ.ನಾನು ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ. ಭಿನ್ನ ಪರಿಸ್ಥಿತಿಯಲ್ಲಿ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿರಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್.

CSK vs RR: ಚೆನ್ನೈ vs ರಾಜಸ್ಥಾನ್ ಮುಖಾಮುಖಿ: ಪ್ರಿವ್ಯೂ, ಸಂಭಾವ್ಯ XI, ಪಿಚ್ ರಿಪೋರ್ಟ್

2022ರ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್ 10 ಪಂದ್ಯಗಳನ್ನು ಆಡಿ 258 ರನ್‌ಗಳನ್ನು ಗಳಿಸಿದ್ದರು. ಅದು ಅವರ ಅತ್ಯುತ್ತಮ ಆವೃತ್ತಿಯಾಗಿತ್ತು. ಆದರೆ ಈ ಬಾರಿ ಮೂರು ಪಂದ್ಯಗಳಲ್ಲಿಯೇ ಅದರ ಅರ್ಧದಷ್ಟನ್ನು ಸಾಧಿಸಿದ್ದಾರೆ. ಹಾಗಾಗಿ ಮತ್ತಷ್ಟು ಹೆಚ್ಚಿನ ರನ್‌ಗಳಿಸುವ ಪ್ರಯತ್ನ ನಡೆಸಲಿದ್ದಾರೆ. ಮೈದಾನದಾಚೆಯೂ ಜೋಸ್ ಬಟ್ಲರ್ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದು ಸಾಕಷ್ಟು ವಿಚಾರಗಳನ್ನು ಅವರಿಂದ ಕಲಿಯುತ್ತಿರುವುದಾಗಿ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ವಾತಾವರಣವನ್ನು ಹೊಗಳಿದ ಜೈಸ್ವಾಲ್: ಇನ್ನು ಈ ಸಂದರ್ಭದಲ್ಲಿ ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದೊಳಗಿನ ವಾತಾವರಣವನ್ನು ಪ್ರಶಂಸಿಸಿದ್ದಾರೆ. "ನಮ್ಮ ತಂಡದಲ್ಲಿನ ಉತ್ತಮ ಅಂಶವೆಂದರೆ ತಂಡದೊಳಗಿನ ವಾತಾವರಣ. ಎಲ್ಲರಿಗೂ ಅವರ ಪಾತ್ರದ ಬಗ್ಗೆ ಅರಿವಿದ್ದು ಅದನ್ನು ನಿಭಾಯಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ಬೆಂಬಲವನ್ನು ನೀಡುತ್ತಿದ್ದು ನಮ್ಮ ಅಂತಿಮ ಗುರಿಯ ಸಾಧನೆಗಾಗಿ ನಮ್ಮ ಪ್ರಯತ್ನ ನಡೆಸುತ್ತಿದ್ದೇವೆ. ಈ ಬಾರಿಯೂ ಅದನ್ನು ಮುಂದುವರಿಸಲಿದ್ದು ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದೇವೆ" ಎಂದಿದ್ದಾರೆ ಯಶಸ್ವಿ ಜೈಸ್ವಾಲ್.

ರಾಜಸ್ಥಾನ್ ರಾಯಲ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಹೀಗಾಗಿ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಆತ್ಮವಿಶ್ವಾಸದಲ್ಲಿದೆ. ತಮಡದ ಬಹುತೇಕ ಆಟಗಾರರು ಉತ್ತಮ ಲಯದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ ಜುರೆಲ್, ರಿಯಾನ್ ಪರಾಗ್, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಒಬೆದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಕೆಸಿ ಕಾರಿಯಪ್ಪ, ಜೇಸನ್ ಹೋಲ್ಡರ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಕುನಾಲ್ ರಾಥೋಡ್, ಆಡಮ್ ಝಂಪಾ, ಕೆಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಟ್, ಅಬ್ದುಲ್ ಪಿ ಎ, ಜೋ ರೂಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+