IPL 2023 : ಐಪಿಎಲ್ ಇತಿಹಾಸದಲ್ಲೇ ಮೊದಲು: ಗೇಲ್ ಹಾಗೂ ಡಿವಿಲಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲಿದೆ RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ 15 ಆವೃತ್ತಿಗಳಿಂದ ಆಡುತ್ತಿದ್ದರೂ ಟ್ರೋಫಿ ಗೆಲ್ಲಲು ಈವರೆಗೆ ಸಾಧ್ಯವಾಗಿಲ್ಲ. ಹಾಗಂತ ಆರ್‌ಸಿಬಿ ತಂಡ ಮೈದಾನದಲ್ಲಿ ತಂಡದ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅನೇಕ ದಿಗ್ಗಜ ಶ್ರೇಷ್ಠ ಆಟಗಾರರು ಕಳೆದ 15 ಆವೃತ್ತಿಗಳಲ್ಲಿ ತಂಡದ ಪರವಾಗಿ ಆಡಿದ್ದು ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಅದರೆ ಆರ್‌ಸಿಬಿ ಅಭಿಮಾನಿಗಳು ಮೂವರು ಆಟಗಾರರ ಮೇಲೆ ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುದು ಹೊಸ ಸಂಗತಿಯಲ್ಲ. ಅದು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್.

ಈ ಮೂವರು ಆಟಗಾರರ ಪೈಕಿ ಐಪಿಎಲ್‌ನಲ್ಲಿ ಸಕ್ರಿಯವಾಗಿರುವುದು ವಿರಾಟ್ ಕೊಹ್ಲಿ ಮಾತ್ರ. ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಇಬ್ಬರು ಕೂಡ ಐಪಿಎಲ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಿಗ್ಗಜ ಆಟಗಾರರಿಗೆ ಆರ್‌ಸಿಬಿ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ.

IPL 2023: RCB Set To Retire AB de Villiers and Chris Gayles jersey numbers 17 And 333

ಆರ್‌ಸಿಬಿ ತಂಡದ ಈ ಇಬ್ಬರು ಆಟಗಾರರ ಜರ್ಸಿ ಸಂಖ್ಯೆಗಳಿಗೆ ಆರ್‌ಸಿಬಿ ನಿವೃತ್ತಿ ಹೇಳಲಿದ್ದು ಆರ್‌ಸಿಬಿ ಪರವಾಗಿ ಆಡುವ ಯಾವುದೇ ಆಟಗಾರರು ಮುಂದೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರ ಜರ್ಸಿ ಸಂಖ್ಯೆಗಳನ್ನು ಧರಿಸುವುದಿಲ್ಲ. ಒಂದು ತಂಡ ಇಬ್ಬರು ದಿಗ್ಗಜರ ಜರ್ಸಿ ಸಂಖ್ಯೆಗೆ ನಿವೃತ್ತಿಯ ಗೌರವ ನೀಡುತ್ತಿರುವುದು ಇದು ಐಪಿಎಲ್ ಇತಿಹಾಸದಲ್ಲಿ ಮೊದಲು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದಿಗ್ಗಜ ಸಚಿನ್ ತೆಂಡೂಲ್ಕರ್ ಜರ್ಸಿ ಸಂಖ್ಯೆ '10'ಕ್ಕೆ ನಿವೃತ್ತಿಯ ಗೌರವ ನೀಡಿತ್ತು.

Kane Williamson: 6ನೇ ದ್ವಿಶತಕ ಸಿಡಿಸಿದ ಕೇನ್ ವಿಲಿಯಮ್ಸನ್; ಲಂಕಾ ವಿರುದ್ಧ ಕಿವೀಸ್ ಮೇಲುಗೈ

ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಪರವಾಗಿ ಸುದೀರ್ಘ ಕಾಲದ ಆಡಿದ ಆಟಗಾರರು. ಅಲ್ಲದೆ ತಮ್ಮದೇ ಆದ ಅಬ್ಬರದ ಶೈಲಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸಿದ ಆಟಗಾರರು. ಅದೇಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟ ದೃಷ್ಟಾಂತಗಳು ಕೂಡ ಇವೆ. ಹೀಗಾಗಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಧರಿಸುವ ಜರ್ಸಿ ಸಂಖ್ಯೆಗಳಿಗೆ ಆರ್‌ಸಿಬಿ ಗೌರವ ಸೂಚಕವಾಗಿ ನಿವೃತ್ತಿ ನೀಡಲಿದೆ.

ಅಂದಹಾಗೆ ಎಬಿ ಡಿವಿಲಿಯರ್ಸ್ '17' ಸಂಖ್ಯೆಯ ಜರ್ಸಿಯೊಂದಿಗೆ ಕಣಕ್ಕಿಳಿಯುತ್ತಿದ್ದರೆ ಕ್ರಿಸ್ ಗೇಲ್ '333' ಸಂಖ್ಯೆಯ ಜರ್ಸಿಯೊಂದಿಗೆ ಆಡುತ್ತಿದ್ದರು. ಈ ಜರ್ಸಿ ಸಂಖ್ಯೆಗಳಿಗೆ ನಿವೃತ್ತಿ ಹೇಳಲಿರುವ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ ಭಾರತದ ಯುವ ವೇಗಿ ಅರ್ಶ್‌ದೀಪ್ ಸಿಂಗ್

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಐಪಿಎಲ್‌ನ ಆರಂಭಿಕ ಆವೃತ್ತಿಗಳಲ್ಲಿ ಡೆಲ್ಲಿ ಮೂಲದ ಫ್ರಾಂಚೈಸಿ ಡೆಲ್ಲಿ ಡೇರ್‌ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಭಾಗವಾಗಿದ್ದರು. ಆದರೆ 2011ರ ಹರಾಜಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡ ಅವರು ಬಳಿಕ ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿದ್ದರು. ಆರ್‌ಸಿಬಿ ತಂಡದ ಪರವಾಗಿ 156 ಪಂದ್ಯಗಳನ್ನು ಆಡಿರುವ ಎಬಿಡಿ 4491 ರನ್ ಗಳಿಸಿದ್ದಾರೆ.

ಮತ್ತೊಂದೆಡೆ ಗೇಲ್ 2011ರ ಐಪಿಎಲ್ ಮಹಾ ಹರಾಜಿನಲ್ಲಿ ಯಾವುದೇ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ಆರ್‌ಸಿಬಿಯ ಆಟಗಾರ ಡಾರ್ಕ್ ನ್ಯಾನ್ನಿಸ್ ಗಾಯಗೊಂಡ ಕಾರಣ ಅವರ ಸ್ಥಾನಕ್ಕೆ ಕ್ರಿಸ್ ಗೇಲ್ ಬದಲಿ ಆಟಗಾರನಾಗಿ ಸೇರಿಕೊಂಡರು. ಅದಾದ ಬಳಿಕ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿ ಮುಂದಿನ 7 ವರ್ಷಗಳ ಕಾಲ ಆಡಿದ ಕ್ರಿಸ್ ಗೇಲ್ ಅನೇಕ ದಾಖಲೆಗಳನ್ನು ಬರೆದರು. ಆರ್‌ಸಿಬಿ ಪರವಾಗಿ ಗೇಲ್ 3163 ರನ್‌ಗಳನ್ನು ಗಳಿಸಿದ್ದು ಅವರು ಗಳಿಸಿದ ಅಜೇಯ 175 ರನ್ ಐಪಿಎಲ್ ಇತಿಹಾಸದಲ್ಲಿ ಇನ್ನು ಕೂಡ ಗರಿ‍ಷ್ಠ ಸ್ಕೋರ್ ಆಗಿ ಉಳಿದುಕೊಂಡಿದೆ.

ಮಾರ್ಚ್‌ 26ರಂದು ವಿಶೇಷ ಕಾರ್ಯಕ್ರಮ: ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದ ಹಿನ್ನೆಲೆಯಲ್ಲಿ ಮಾರ್ಚ್ 26ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. 'ಅನ್‌ಬಾಕ್ಸ್' ಕಾರ್ಯಕ್ರಮ ಅಂದು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದ್ದು ಅಭಿಮಾನಿಗಳು ಟಿಕೆಟ್‌ಕೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡ ಮುಂದಿನ ಆವೃತ್ತಿಯಲ್ಲಿ ಧರಿಸಲಿರುವ ಜರ್ಸಿಯನ್ನು ಕೂಡ ಅನಾವರಣಗೊಳಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+