IPL 2023 Opening Ceremony: ಐಪಿಎಲ್ ಉದ್ಘಾಟನಾ ಸಮಾರಂಭದ ಗ್ಲಾಮರ್ ಹೆಚ್ಚಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ!

ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಡುವ ಮೂಲಕ 16ನೇ ಋತುವಿಗೆ ಚಾಲನೆ ನೀಡಲಿವೆ.

ಕೋವಿಡ್-19 ನಂತರ ಮೊದಲ ಬಾರಿಗೆ ಭಾರತದಲ್ಲಿ ಪೂರ್ಣ ಪ್ರಮಾಣದ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಈ ವೇಳೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತನೆ ನಡೆಸಿದೆ.

IPL 2023 Opening Ceremony: Rashmika Mandanna, Tamannaah Bhatia Likely to Perform Says Report

ಐಪಿಎಲ್‌ನ 70 ಲೀಗ್ ಪಂದ್ಯಗಳಿಗಾಗಿ 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಈ ಬಾರಿ ಎಲ್ಲಾ ತಂಡಗಳು ತವರಿನ ಹಾಗೂ ಎದುರಾಳಿ ನೆಲದಲ್ಲಿ ಆಡುವ ಸ್ವರೂಪಕ್ಕೆ ಮರಳಿದೆ.

ಇನ್‌ಸೈಡ್‌ಸ್ಫೋರ್ಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, "ಚಲನಚಿತ್ರ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ಸೇರಿದಂತೆ ಹಲವು ಬಾಲಿವುಡ್ ತಾರೆಯರು 2023ರ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮತ್ತು ಸಮಾರಂಭದ ಗ್ಲಾಮರ್ ಹೆಚ್ಚಿಸಲಿದ್ದಾರೆ," ಎಂದು ತಿಳಿಸಿದೆ.

ಐಪಿಎಲ್ ಉದ್ಘಾಟನಾ ಸಮಾರಂಭವು ಮಾರ್ಚ್ 31ರಂದು ಆರಂಭಿಕ ಪಂದ್ಯಕ್ಕೂ ಮುನ್ನ ಪ್ರಾರಂಭವಾಗಲಿದೆ. ಕಳೆದ ತಿಂಗಳು 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭಿಕ ಪಂದ್ಯದಂತೆಯೇ ಪುರುಷರ ಪಂದ್ಯವು ಅರ್ಧ ಘಂಟೆಯ ತಡವಾಗಿ ಪ್ರಾರಂಭವಾಗಲಿದೆ.

IPL 2023 Opening Ceremony: Rashmika Mandanna, Tamannaah Bhatia Likely to Perform Says Report

"ಮಾರ್ಚ್ 31ರಂದು ಚಿಕ್ಕದಾಗಿ ಉದ್ಘಾಟನಾ ಸಮಾರಂಭವಿರಲಿದೆ. ಈ ಮೂಲಕ ತವರಿನ ಪ್ರೇಕ್ಷಕರನ್ನು ಸ್ವಾಗತಿಸಲು ಅಗತ್ಯವೆಂದು ನಾವು ಭಾವಿಸಿದ್ದೇವೆ," ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಗಳಾದ ಕೃತಿ ಸನೋನ್, ಕಿಯಾರಾ ಅಡ್ವಾಣಿ ಮತ್ತು ಪಂಜಾಬಿ ಪಾಪ್ ಸೆನ್ಸೇಷನ್ ಎಪಿ ಧಿಲ್ಲೋನ್ ಪ್ರದರ್ಶನ ನೀಡಿದ್ದರು. ಅದೇ ರೀತಿ ಐಪಿಎಲ್ 2023ರ ಉದ್ಘಾಟನಾ ಸಮಾರಂಭದಲ್ಲಿ ಹಲವಾರು ಬಾಲಿವುಡ್ ತಾರೆಗಳು ಭಾಗವಹಿಸುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.

ಕೋವಿಡ್-19 ರೋಗದ ಮೊದಲು ಪುಲ್ವಾಮಾ ದಾಳಿಯ ಕಾರಣಕ್ಕಾಗಿ 2019ರ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿತ್ತು. ಈ ಬಾರಿ 52 ದಿನಗಳ ಅವಧಿಯಲ್ಲಿ 12 ಸ್ಥಳಗಳಲ್ಲಿ ಒಟ್ಟು 70 ಲೀಗ್ ಹಂತದ ಪಂದ್ಯಗಳು ನಡೆಯಲಿವೆ.

ಲೀಗ್ ಹಂತದಲ್ಲಿ ಎಲ್ಲಾ ಹತ್ತು ತಂಡಗಳು ಕ್ರಮವಾಗಿ 7 ತವರಿನ ಪಂದ್ಯಗಳನ್ನು ಮತ್ತು 7 ಎದುರಾಳಿ ನೆಲದಲ್ಲಿ ಪಂದ್ಯಗಳನ್ನು ಆಡಲಿವೆ. ಎರಡು ಗುಂಪುಗಳಾಗಿರುವ ಐಪಿಎಲ್‌ನಲ್ಲಿ ಪ್ರತಿ ತಂಡವು ಅದೇ ಗುಂಪಿನ ಇತರ ನಾಲ್ಕು ತಂಡಗಳನ್ನು ಎರಡು ಬಾರಿ ಎದುರಿಸಲಿದೆ. ಇನ್ನೊಂದು ಗುಂಪಿನ ಐದು ತಂಡಗಳ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಇನ್ನು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಎದುರು ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.

ಐಪಿಎಲ್ 2023 ತಂಡಗಳು ಹಾಗೂ ಗುಂಪುಗಳು

ಗುಂಪು ಎ: ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್.

ಗುಂಪು ಬಿ: ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+