IPL 2023: ಈ ಬಾರಿ CSK ತಂಡಕ್ಕೆ ಈತನೇ ಪ್ರಮುಖ ಆಟಗಾರ; ಮ್ಯಾಥ್ಯೂ ಹೇಡನ್
ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕ್ರಿಕೆಟ್ ಪ್ರೇಮಿಗಳ ಬಹುದಿನದ ಕಾಯುವಿಕೆ ಇದೇ ಮಾರ್ಚ್ 31ರಂದು ಅಂತ್ಯಗೊಳ್ಳಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡುವ ಮೂಲಕ ಐಪಿಎಲ್‌ಗೆ ಚಾಲನೆ ಸಿಗಲಿದೆ.

ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 2023ರ ಟಿ20 ಲೀಗ್‌ನ ಆವೃತ್ತಿಗಾಗಿ ಸಜ್ಜಾಗಿದ್ದು, ಎಂಎಸ್ ಧೋನಿ, ರವೀಂದ್ರ ಜಡೇಜಾ ಸೇರಿದಂತೆ ಈಗಾಗಲೇ ಎಲ್ಲ ಆಟಗಾರರು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಂಡದ ಶಿಬಿರವನ್ನು ಸೇರಿಕೊಂಡಿದ್ದಾರೆ.
ಸಿಎಸ್‌ಕೆ ತಂಡ ವಿಶ್ವದ ಕೆಲವು ಅತ್ಯುತ್ತಮ ಆಟಗಾರರನ್ನು ಖರೀದಿಸಿ ತಮ್ಮ ತಂಡವನ್ನು ಬಲಪಡಿಸಿಕೊಂಡಿದೆ. ನಿಸ್ಸಂದೇಹವಾಗಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಒಬ್ಬರಾಗಿದ್ದು, ಸಿಎಸ್‌ಕೆ ಫ್ರಾಂಚೈಸಿಯು ಕಳೆದ ಐಪಿಎಲ್ ಹರಾಜಿನಲ್ಲಿ 16.25 ಕೋಟಿ ರೂ.ಗೆ ಖರೀದಿಸಿತು.

ಇದೀಗ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಪ್ರಮುಖ ಆಟಗಾರನಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಮಾತುಕತೆಯಲ್ಲಿ, "ಬೆನ್ ಸ್ಟೋಕ್ಸ್ ಇದುವರೆಗೆ ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿಲ್ಲ. ಈ ಬಾರಿ ಸಿಎಸ್‌ಕೆ ತಂಡಕ್ಕೆ ಅಗತ್ಯವಿರುವ "ಎಕ್ಸ್ ಫ್ಯಾಕ್ಟರ್' ಆಗಿರುವುದರಿಂದ ಎಲ್ಲವೂ ಬದಲಾಗಲಿದೆ," ಎಂದು ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ 'ಟ್ರಂಪ್ ಕಾರ್ಡ್' ಆಯ್ಕೆ ಮಾಡಲು ಕೇಳಿದಾಗ, ಮ್ಯಾಥ್ಯೂ ಹೇಡನ್ ಅವರು ಮತ್ತೊಬ್ಬ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಸೂಚಿಸಿದರು.
"ನಾನು ಯಾವಾಗಲೂ ಗಮನ ನೀಡಬೇಕಾದ ಆಟಗಾರ ಎಂದರೆ ರವೀಂದ್ರ ಜಡೇಜಾ. ಆತ ಗುಣಮಟ್ಟದ ಆಲ್‌ರೌಂಡರ್. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಲವು ವಿಶ್ವ ದರ್ಜೆಯ ಆಲ್‌ರೌಂಡರ್‌ಗಳನ್ನು ಹೊಂದಿದೆ. ಬೆನ್ ಸ್ಟೋಕ್ಸ್ ಈ ಬಾರಿ ಸೇರಿದ್ದಾರೆ. ಆದರೆ ಜಡೇಜಾ ಅತ್ಯುತ್ತಮರಲ್ಲಿ ಅತ್ಯುತ್ತಮ. ಆತ ನಿಜವಾಗಿಯೂ ಈ ವರ್ಷದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡಕ್ಕೆ ಉತ್ತಮ ಫಲಿತಾಂಶವನ್ನು ನೀಡಬಲ್ಲ ಆಟಗಾರ," ಎಂದು ಸಿಎಸ್‌ಕೆ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ವಿವರಿಸಿದರು.
ರವೀಂದ್ರ ಜಡೇಜಾ ಅವರು ಇತ್ತೀಚಿಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ, ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ತಮ್ಮ ಕ್ರಿಕೆಟ್ ಪುನರಾಗಮನ ಮಾಡಿದರು.
ಐಪಿಎಲ್ 2023: ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ
ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಸಿಸಾಂಡ ಮಗಲ.












Click it and Unblock the Notifications