CSK ನಾಯಕನಾಗಿ 200ನೇ ಪಂದ್ಯವಾಡಿದ MS ಧೋನಿಗೆ ಅಭಿನಂದನೆ ಸಲ್ಲಿಸಿದ ಗೆಳೆಯ ಸುರೇಶ್ ರೈನಾ
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ವಿಶೇಷ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಮಡದ ನಾಯಕನಾಗಿ 200ನೇ ಪಂದ್ಯದಲ್ಲಿ ಮುನ್ನಡೆಸಿದ ಸಾಧನೆ ಮಾಡಿದ್ದಾರೆ. ಈ ಅಪರೂಪದ ಸಾಧನೆಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಎಂಎಸ್ ಧೋನಿ ಅವರ ಆಪ್ತ ಸ್ನೇಹಿತ ಸುರೇಶ್ ರೈನಾ ಅಭಿನಂದನೆ ಸಲ್ಲಿಸಿದ್ದಾರೆ.
ಸುದೀರ್ಘ ಕಾಲದಿಂದ ನಾಯಕನಾಗಿ ಧೋನಿ ಮಾಡಿರುವ ಸಾಧನೆಗೆ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಎಂಎಸ್ ಧೋನಿ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಮತ್ತು ರಾಬಿನ್ ಉತ್ತಪ್ಪ ಜೊತೆಗಿನ ಫೋಟೋವನ್ನು ರೈನಾ ಹಂಚಿಕೊಂಡಿದ್ದು ಗೆಳೆಯನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯಕ್ಕೂ ಮುನ್ನ ಎಂಎಸ್ ಧೋನಿ ಸಾಧನೆಗೆ ಗೌರವ ಸಲ್ಲಿಸಲಾಗಿದ್ದು ಮಾಜಿ ಐಸಿಸಿ ಮುಖ್ಯಸ್ಥ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್ ಶ್ರೀನಿವಾಸನ್ ಧೋನಿಗೆ ಸ್ಮರಣಿಗೆ ನಿಡಿ ಗೌರವಿಸಿದ್ದಾರೆ. ಐಪಿಎಲ್‌ನಲ್ಲಿ ಒಂದೇ ತಂಡದ ನಾಯಕನಾಗಿ 200 ಪಂದ್ಯಗಳನ್ನು ಮುನ್ನಡೆಸಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಎಂಎಸ್ ಧೋನಿ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಸಂಜು ಸ್ಯಾಮ್ಸನ್ ತಾವು ಕೂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಉದ್ಧೇಶ ಹೊಂದಿದ್ದೆವು ಎಂದಿದ್ದಾರೆ. "ನಾವು ಕೂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸಲು ಬಯಸಿದ್ದೆವು. ನಮ್ಮ ಲಯವನ್ನು ಮುಂದುವರಿಸಲು ಇದು ಮುಖ್ಯವಾಗಿದೆ. ಚೆಪಾಕ್‌ಗೆ ಬಂದು ಚೆನ್ನೈ ತಂಡವನ್ನು ಹಾಗೂ ಎಂಎಸ್ ಧೋನಿ ಅವರನ್ನು ಎದುರಿಸುವುದು ಬಹಳ ಗೌರವದ ವಿಚಾರ" ಎಂದಿದ್ದಾರೆ ಸಂಜು ಸ್ಯಾಮ್ಸನ್.
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ಸಿಸಂದ ಮಗಲ, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್
ಬೆಂಚ್: ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಶೇಕ್ ರಶೀದ್, ಸುಭ್ರಾಂಶು ಸೇನಾಪತಿ, ಆರ್‌ಎಸ್ ಹಂಗರ್ಗೇಕರ್, ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮಥೀಶ ಪತಿರಾನ, ಭಗತ್ ವರ್ಮಾ, ನಿಶಾಂತ್ ಸಿಂಧು, ದೀಪಕ್ ಚಾಹರ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಕುಲದೀಪ್ ಸೇನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಬೆಂಚ್: ರಿಯಾನ್ ಪರಾಗ್, ಡೊನಾವನ್ ಫೆರೇರಾ, ಕೆಎಂ ಆಸಿಫ್, ಆಡಮ್ ಝಂಪಾ, ಜೋ ರೂಟ್, ಮುರುಗನ್ ಅಶ್ವಿನ್, ನವದೀಪ್ ಸೈನಿ, ಆಕಾಶ್ ವಸಿಷ್ಟ್, ಕೆಸಿ ಕಾರಿಯಪ್ಪ, ಓಬೇದ್ ಮೆಕಾಯ್, ಕುಲದೀಪ್ ಯಾದವ್, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್, ಟ್ರೆಂಟ್ ಬೌಲ್ಟ್












Click it and Unblock the Notifications