IPL 2023 Mini Auction : ಕೊಚ್ಚಿಯಲ್ಲಿ ಐಪಿಎಲ್ 2023ರ ಹರಾಜು: ಫ್ರಾಂಚೈಸಿಗಳಿಂದ ಎಷ್ಟು ಕೋಟಿ ಹಣ ಖರ್ಚು?
ಇಂಡಿಯನ್ ಪ್ರೀಮಿಯರ್ ಲೀಗ್‌ನ ಐಪಿಎಲ್ 2023ರ ಕ್ರಿಕೆಟ್ ಆಟಗಾರರ ಹರಾಜು ಮುಂದಿನ ತಿಂಗಳು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹಿಂದೆ ಡಿಸೆಂಬರ್ 16ರಂದು ಬೆಂಗಳೂರಿನಲ್ಲಿ ಐಪಿಎಲ್ 2023 ಹರಾಜು ನಡೆಯಲಿದೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಕೊಚ್ಚಿಯಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ ಎಂಬ ಸುದ್ದಿ ಬರುತ್ತಿದೆ. ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಅಧಿಕಾರಿಯೊಬ್ಬರು ಬುಧವಾರ ಈ ಮಾಹಿತಿ ನೀಡಿದ್ದಾರೆ. ಟರ್ಕಿಯ ನಗರ ಇಸ್ತಾಂಬುಲ್ ಹಾಗೂ ಬೆಂಗಳೂರು, ನವದೆಹಲಿ, ಮುಂಬೈ ಮತ್ತು ಹೈದರಾಬಾದ್ ಕೂಡ ಈ ಹರಾಜನ್ನು ಆಯೋಜಿಸಲು ರೇಸ್‌ನಲ್ಲಿದ್ದವು. ಆದರೆ ಬಿಸಿಸಿಐ ಕೇರಳದ ಕೊಚ್ಚಿಯನ್ನು ಆಯ್ಕೆ ಮಾಡಿದೆ.
ವ್ಯವಸ್ಥಾಪನಾ ಅಗತ್ಯತೆಗಳು ಮತ್ತು ದಿನಾಂಕಗಳನ್ನು ಪರಿಗಣಿಸಿ ಕೊಚ್ಚಿ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಹರಾಜಿನಲ್ಲಿ ಕಡಿಮೆ ಆಟಗಾರರು ಬಿಡ್ಡಿಂಗ್ ಮಾಡುತ್ತಾರೆ.

ನವೆಂಬರ್ 15ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ 10 ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಈಗಾಗಲೇ ಅಧೀಕೃತವಾಗಿ ತಿಳಿಸಲಾಗಿದೆ. ಕಳೆದ 3 ವರ್ಷಗಳ ಕಾಯುವಿಕೆಯ ನಂತರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳು ಅಂತಿಮವಾಗಿ ಮರಳಲು ಸಿದ್ಧವಾಗಿದೆ. ಇನ್ನು ಫ್ರಾಂಚೈಸಿಗಳು ಈಗ ಐಪಿಎಲ್ ಆಟಗಾರರಿಗೆ ಒಟ್ಟು 90 ಕೋಟಿಯಿಂದ 95 ಕೋಟಿ ರೂ. ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ.
3 ವರ್ಷಗಳ ಬಳಿಕ ಐಪಿಎಲ್ ಹಳೆಯ ಸ್ವರೂಪಕ್ಕೆ ಮರಳಲಿದೆ
ಐಪಿಎಲ್ 2023ರ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆಯಲಿವೆ ಮತ್ತು ಅಭಿಮಾನಿಗಳಿಗೆ ಉತ್ತಮ ಸುದ್ದಿ ಎಂದರೆ ಈ ಬಾರಿ ಐಪಿಎಲ್ ಮತ್ತೆ ತವರುನಲ್ಲಿ ಹಾಗೂ ವಿದೇಶ ಮಾದರಿಯಲ್ಲಿ ನಡೆಯಲಿದೆ. ಕೋವಿಡ್‌ನಿಂದಾಗಿ 2019ರಿಂದ ಖಾಲಿ ಕ್ರೀಡಾಂಗಣಗಳಿಂದ ಪಂದ್ಯಗಳನ್ನು ಆಡಲಾಯಿತು. ಈಗ ತಂಡಗಳು ತವರು ಮತ್ತು ವಿದೇಶ ಪಂದ್ಯಗಳೊಂದಿಗೆ ಪರಸ್ಪರ ಆಡಲಿವೆ. ಇದಕ್ಕಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ಕೊಚ್ಚಿಯಲ್ಲಿ ನಡೆಯಲಿದೆ.

2020ರಲ್ಲಿ ಕೋವಿಡ್-19ನಿಂದಾಗಿ ಐಪಿಎಲ್‌ನ್ನು ಕೆಲವೇ ಸ್ಥಳಗಳಲ್ಲಿ ನಡೆಸಲಾಯಿತು. ಈ ಲೀಗ್‌ನ್ನು ಯುಎಇಯಲ್ಲಿ ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಮುಚ್ಚಿದ ಕ್ರಿಡಾಂಗಣಗಳಲ್ಲಿ ಆಡಲಾಯಿತು. 2021ರಲ್ಲಿಯೂ ಟೂರ್ನಮೆಂಟ್ ಪಂದ್ಯಗಳು ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಚೆನ್ನೈನಲ್ಲಿ ಮಾತ್ರ ನಡೆದಿದ್ದವು. ಆದರೆ, ಐಪಿಎಲ್ 2022ರಲ್ಲಿ 10 ತಂಡಗಳೊಂದಿಗೆ ಆಯೋಜಿಸಲಾಗಿತ್ತು ಮತ್ತು ಮೊದಲ ಬಾರಿಗೆ ಆಡುತ್ತಿರುವ ಗುಜರಾತ್ ಟೈಟಾನ್ಸ್ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications