IPL 2023: ಇಂದು ಲಕ್ನೋ ಸೂಪರ್ ಜೈಂಟ್ಸ್‌ಗೆ ಮುಂಬೈ ಇಂಡಿಯನ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್‌ನ ಸದ್ಯ ಕೊನೆಯ ಘಟ್ಟವನ್ನು ತಲುಪಿದ್ದು ಈ ಹಂತದಲ್ಲಿ ಪ್ರತಿ ಪಂದ್ಯಗಳು ಕೂಡ ಅತ್ಯಂತ ನಿರ್ಣಾಯಕವಾಗಿದೆ. ಪ್ರತಿ ಪಂದ್ಯದ ಫಲಿತಾಂಶ ಕೂಡ ಅತ್ಯಂತ ಮಹತ್ವದ್ದಾಗಿದ್ದು ಎಲ್ಲಾ ತಂಡಗಳಿಗೂ ಎಲ್ಲಾ ಫಲಿತಾಂಶಗಳು ಕೂಡ ನಿರ್ಣಾಯಕ ಎನಿಸಿಕೊಂಡಿದೆ. ಇಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧದ ಪಂದ್ಯ ಕೂಡ ಹೀಗೆಯೇ ಅತ್ಯಂತ ಮಹತ್ವದ ಪಂದ್ಯವಾಗಿದ್ದು ಇಲ್ಲಿ ಗೆದ್ದ ತಮ ಪ್ಲೇಆಫ್‌ಗೇರುವ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಟೂರ್ನಿಯಲ್ಲಿ ಸಾಕಷ್ಟು ಪೈಪೊಟಿ ನಿಡಿರುವ ತಂಡಗಳು. ಲಕ್ನೋ ಆರಂಬದಲ್ಲಿ ಅಬ್ಬರಿಸಿ ಮಂಕಾಗಿದ್ದರೆ ಮುಂಬೈ ಇಂಡಿಯನ್ಸ್ ಮೊದಲ ಹಂತದಲ್ಲಿ ಕಳಪೆ ಪ್ರದರ್ಶನ ನೀಡಿ ನಂತರ ತಿರುಗಿಬೀಳುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕಗಳಿಸಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ 12 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 13 ಅಂಕಗಳಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತೀವ್ರ ಪೈಪೋಟಿ ನಡೆಸಲಿದೆ.

IPL 2023, Lucknow Super Giants vs Mumbai Indians, match preview and other details

ಪಂದ್ಯದ ವಿವರ ಹಾಗೂ ನೇರಪ್ರಸಾರದ ಮಾಹಿತಿ

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧದ ಈ ಪಂದ್ಯ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಇಂದು ಸಂಜೆ ಏರ್ಪಡಲಿದೆ. ಸಂಜೆ 7:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ಪೂರ್ಣವಾಗಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸುವ ಅವಕಾಶವಿದ್ದು ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ಪ್ರಸಾರವಾಗಲಿದೆ.

Shubman Gill: ಎಲ್ಲಾ ಮಾದರಿಯಲ್ಲೂ ಅಮೋಘ ಫಾರ್ಮ್: ಈ ವರ್ಷದ 6ನೇ ಶತಕ ಸಿಡಿಸಿದ ಶುಬ್ಮನ್ ಗಿಲ್

ಪಿಚ್ ರಿಪೋರ್ಟ್ ಹೀಗಿದೆ

ಲಕ್ನೋದ ಏಕಾನ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಮಧ್ಯೆ ಸಮತೋಲಿತ ಹೋರಾಟವನ್ನು ನೀಡುವ ಪಿಚ್ ಆಗಿದೆ. ಇಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರೆ ಮಾತ್ರವೇ ಯಶಸ್ಸು ಸಾಧ್ಯ. ಬಳಿಕ ಮೇಲುಗೈ ಸಾಧಿಸುವ ಅವಕಾಶವಿದೆ. ಆದರೆ ಮಧ್ಯಮ ಓವರ್‌ಗಳಲ್ಲಿ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ.

ಹವಾಮಾನ ವರದಿ: ಮಳೆಯಾಗುವ ಸಾಧ್ಯತೆಗಳು ಇಲ್ಲವಾಗಿರುವ ಕಾರಣ ಕ್ರಿಕೆಟ್ ಪಂದ್ಯಕ್ಕೆ ಅನುಕೂಲಕರವಾದ ವಾತಾವರಣ ಹೊಂದಿದೆ. 27ರಿಂದ 34 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರುವ ನಿರೀಕ್ಷೆಯಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ(ನಾಯಕ), ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ವೀರ್ ಸಿಂಗ್ ಚರಕ್, ಅವೇಶ್ ಖಾನ್, ಆಯುಷ್ ಬಡೋನಿ, ಸ್ವಪ್ನಿಲ್ ಸಿಂಗ್, ಡೇನಿಯಲ್ ಸಾಮ್ಸ್, ದೀಪಕ್ ಹೂಡಾ, ಅರ್ಪಿತ್ ಗುಲೇರಿಯಾ, ಕೃಷ್ಣಪ್ಪ ಗೌತಮ್, ಮೊಹ್ಸಿನ್ ಖಾನ್, ಕರುಣ್ ನಾಯರ್, ಮನನ್ ವೋಹ್ರಾ, ಮಾರ್ಕ್ ವುಡ್, ನವೀನ್-ಉಲ್-ಹಕ್, ರೊಮಾರಿಯೋ ಶೆಫರ್ಡ್, ಕರಣ್ ಶರ್ಮಾ

ಮುಂಬೈ ಇಂಡಿಯನ್ಸ್ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಕ್ಯಾಮೆರಾನ್ ಗ್ರೀನ್, ವಿಷ್ಣು ವಿನೋದ್, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ಸಂದೀಪ್ ವಾರಿಯರ್, ಹೃತಿಕ್ ಶೋಕೀನ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ದುವಾನ್ ಜಾನ್ಸೆನ್, ಅರ್ಷದ್ ಖಾನ್, ಟ್ರಿಸ್ಟಾನ್ ಸ್ಟಬ್ಸ್, ರಾಘವ್ ಗೋಯಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+