Jos Buttler: ಐಪಿಎಲ್‌ನಲ್ಲಿ ಮುಂದುವರಿದ ಬಟ್ಲರ್ ಅಬ್ಬರ: ಗೇಲ್ ದಾಖಲೆ ಸಮ
2022 ಐಪಿಎಲ್‌ನುದ್ದಕ್ಕೂ ಅಬ್ಬರಿಸಿ ಬೊಬ್ಬಿರಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ 2023ರ ಆವೃತ್ತಿಯನ್ನು ಕೂಡ ಅಬ್ಬರದಿಂದಲೇ ಆರಂಭಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಸ್ಪೋಟಕ ಪ್ರದರ್ಶನ ನೀಡಿದ್ದಾರೆ ಜೋಸ್ ಬಟ್ಲರ್. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಭರ್ಜರಿ ಆರಂಭಕ್ಕೆ ಬುನಾದಿ ಹಾಕಿದ್ದಾರೆ.
ಜೋಸ್ ಬಟ್ಲರ್ ಈ ಪಂದ್ಯದಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿ 54 ರನ್ ಗಳಿಸಿ ಔಟಾಗಿದ್ದಾರೆ. 245.45ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜೋಸ್ ಬಟ್ಲರ್ 3 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಪವರ್‌ಪ್ಲೇನಲ್ಲಿ ತನ್ನ ಅತಿ ಹೆಚ್ಚಿನ ರನ್‌ಗಳಿಸಿದಂತಾಗಿದೆ. ಈ ಪಂದ್ಯದಲ್ಲಿ ಆರ್‌ಆರ್ ತಂಡ ಪವರ್‌ಪ್ಲೇನಲ್ಲಿ 85/1 ರನ್‌ಗಳಿಸಿ ಈ ಸಾಧನೆ ಮಾಡಿದೆ.

ಇನ್ನು ಜೋಸ್ ಬಟ್ಲರ್ ಈ ಅರ್ಧ ಶತಕದೊಂದಿಗೆ ಐಪಿಎಲ್‌ನಲ್ಲಿ ಪವರ್‌ಪ್ಲೇ ಅವಧಿಯಲ್ಲಿ ಅರ್ಧ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಸಾಧನೆಯನ್ನು ಜೋಸ್ ಬಟ್ಲರ್ ಸರಿಗಟ್ಟಿದಂತಾಗಿದೆ. ಕ್ರಿಸ್ ಗೇಲ್ ಹಾಗೂ ಜೋಫಸ್ ಬಟ್ಲರ್ ಈ ಅವಧಿಯಲ್ಲಿ 3 ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು ವಾರ್ನರ್ ಪವರ್‌ಪ್ಲೇನಲ್ಲಿ 6 ಅರ್ಧ ಶತಕ ಸಿಡಿಸಿದ್ದಾರೆ.
RCB vs MI Head to Head: ಮೊದಲ ಪಂದ್ಯ ದೇವ್ರಿಗಾ? ಫ್ಯಾನ್ಸ್‌ಗಾ? ಪ್ಲೇಯಿಂಗ್ 11, ಪಿಚ್ ವರದಿ
ಇನ್ನು ಇಂಗ್ಲೆಂಡ್‌ನ ಆಟಗಾರ ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಅಕ್ಷರಶಃ ವಿಧ್ವಂಸಕ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಆವೃತ್ತಿಯಲ್ಲಿ ಫೈನಲ್‌ಗೆ ಪ್ರವೇಶಿಸಲು ಜೋಸ್ ಬಟ್ಲರ್ ಪ್ರದರ್ಶನ ಮಹತ್ವದ ಪಾತ್ರವಹಿಸಿತ್ತು ಎಂಬುದು ಗಮನಾರ್ಹ ಅಂಶ. ಕಳೆದ 19 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ ಜೋಸ್ ಬಟ್ಲರ್ 5 ಶತಕ ಹಾಗೂ 5 ಅರ್ಧ ಶತಕ ಸಿಡಿಸಿದ್ದಾರೆ. ಇದು ಜೋಸ್ ಬಟ್ಲರ್ ಎಂಥಾ ಅಮೋಘ ಫಾರ್ಮ್‌ನಲ್ಲಿದ್ದಾರೆ ಎಂಬುದಕ್ಕೆ ಸಾಕ್ಷಿ.
ಇನ್ನು ಸನ್‌ರೈರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಜೋಸ್ ಬಟ್ಲರ್ ಜೊತೆಗೆ ಮತ್ತೋರ್ವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಸ್ಪೋಟಕ ಪ್ರದರ್ಶನ ನಿಡಿದ್ದು 37 ಎಸೆತಗಳಲ್ಲಿ 54 ರನ್‌ಗಳಿಸಿದರು. ಇನ್ನು ನಾಯಕ ಸಂಜು ಸ್ಯಾಮ್ಸನ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ರಾಜಸ್ಥಾನ್ ರಾಯಲ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್
ಬೆಂಚ್: ಧ್ರುವ್ ಜುರೆಲ್, ಸಂದೀಪ್ ಶರ್ಮಾ, ಮುರುಗನ್ ಅಶ್ವಿನ್, ನವದೀಪ್ ಸೈನಿ, ಡೊನಾವನ್ ಫೆರೇರಾ, ಒಬೆದ್ ಮೆಕಾಯ್,
ಕುನಾಲ್ ಸಿಂಗ್ ರಾಥೋಡ್, ಅಬ್ದುಲ್ ಬಸಿತ್, ಕುಲದೀಪ್ ಸೇನ್, ಕುಲದೀಪ್ ಯಾದವ್, ಕೆಸಿ ಕಾರಿಯಪ್ಪ, ಆಕಾಶ್ ವಸಿಷ್ಟ್, ಆಡಮ್ ಝಂಪಾ, ಜೋ ರೂಟ್
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ (ನಾಯಕ), ಆದಿಲ್ ರಶೀದ್, ಟಿ ನಟರಾಜನ್, ಉಮ್ರಾನ್ ಮಲಿಕ್, ಫಜಲ್ಹಕ್ ಫಾರೂಕಿ
ಬೆಂಚ್: ಅಬ್ದುಲ್ ಸಮದ್, ವಿವ್ರಾಂತ್ ಶರ್ಮಾ, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಮಯಾಂಕ್ ಮಾರ್ಕಂಡೆ, ಅಕೇಲ್ ಹೊಸೈನ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಕಾರ್ತಿಕ್ ತ್ಯಾಗಿ, ಸನ್ವಿರ್ ಸಿಂಗ್, ನಿತೀಶ್ ರೆಡ್ಡಿ.












Click it and Unblock the Notifications