IPL 2023: ಈ ಬಾರಿಯ ಐಪಿಎಲ್ ಗೆಲ್ಲುವ ತಂಡವನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ

16ನೇ ಅವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿಶ್ಲೇಷಕರು ತಮ್ಮದೇ ಲೆಕ್ಕಾಚಾರಗಳೊಂದಿಗೆ ಭವಿಷ್ಯ ನಡಿಯುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಯಾವ ತಂಡ ಗೆಲುವು ಸಾಧಿಸಬಹುದು ಎಂಬುದರ ಬಗ್ಗೆ ಸಾಕಷ್ಟು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ತಮ್ಮ ವಿಶ್ಲೇಷಣೆ ಮಾಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಗೆಲುವು ಸಾಧಿಸಲಿದೆ ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಈ ಅನಿಸಿಕೆಗೆ ಅವರು ಮೂರು ಪ್ರಮುಖ ಕಾರಣಗಳನ್ನು ಕೂಡ ನೀಡಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಗುಜರಾತ್ ಟೈಟನ್ಸ್ ತಂಡಕ್ಕೆ ಇದೆ ಎಂದಿದ್ದಾರೆ ಪಠಾಣ್.

IPL 2023: Irfan Pathan predicts Gujarat Titans have chance to became champion 2nd Time

IPL 2023: ಒಂದು ಐಪಿಎಲ್ ಆವೃತ್ತಿಯಲ್ಲಿ ನಡೆಯುವ ಬೆಟ್ಟಿಂಗ್ ದಂಧೆ ಎಷ್ಟು ಲಕ್ಷ ಕೋಟಿ ಗೊತ್ತಾ?

ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಕಳೆದ ವರ್ಷ ಚೊಚ್ಚಲ ಪ್ರಯತ್ನದಲ್ಲಿಯೇ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಬಾರಿ ಈ ಅಂಶವೇ ಹೆಚ್ಚು ಆತ್ಮವಿಶ್ವಾಸವನ್ನು ನೀಡಲಿದೆ. ಇದು ಹಾರ್ದಿಕ್ ನೇತೃತ್ವದ ತಂಡಕ್ಕೆ ಈ ಬಾರಿ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಮೊದಲ ಕಾರಣವಾಗಲಿದೆ ಎಂದಿದ್ದಾರೆ ಇರ್ಫಾನ್ ಪಠಾಣ್.

ಇನ್ನು ಗುಜರಾತ್ ಟೈಟನ್ಸ್ ಈ ಬಾರಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ಕಾರಣವಾಗಬಹುದಾದ ಮತ್ತೊಂದು ಅಂಶವೆಂದರೆ ಅದು ಹಾರ್ದಿಕ್ ಪಾಂಡ್ಯ ನಾಯಕತ್ವ ಎಂದಿದ್ದಾರೆ ಪಠಾಣ್. ಕಳೆದ ಬಾರಿ ನಾಯಕತ್ವದ ಅನುಭವವೇ ಇಲ್ಲದೆ ಅದ್ಭುತವಾಗಿ ಮುನ್ನಡೆಸಿ ಮಿಂಚಿದ್ದ ಹಾರ್ದಿಕ್ ಈ ಬಾರಿ ಭಾರತ ರಾಷ್ಟ್ರೀಯ ತಂಡವನ್ನು ಕೂಡ ಮುನ್ನಡೆಸಿದ ಅನುಭವವೊಂದಿಗೆ ಟೂರ್ನಿಗೆ ಕಣಕ್ಕಿಳಿಯಲಿದ್ದಾರೆ.

ಇನ್ನು ಇರ್ಫಾನ್ ಪಠಾಣ್ ಹೇಳಿದ ಮತ್ತೊಂದು ಕಾರಣ ಎಂದರೆ ಸ್ಪಿನ್ನರ್ ರಶೀದ್ ಖಾನ್. ಟಿ20 ಮಾದರಿಯಲ್ಲಿ ಚಾಂಪಿಯನ್ ಆಟಗಾರ ಎನಿಸಿರುವ ರಶೀದ್ ಖಾನ್ ಹಾರ್ದಿಕ್ ಪಡೆಗೆ ಮತ್ತೊಂದು ದೊಡ್ಡ ಅಸ್ತ್ರ ಎನಿಸಿಕೊಂಡಿದ್ದಾರೆ. ರಶೀದ್ ಖಾನ್ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ.

IPL 2023: ಪಂಜಾಬ್ ಕಿಂಗ್ಸ್‌ಗೆ ಮತ್ತೊಂದು ಆಘಾತ: ಮೊದಲ ಪಂದ್ಯಕ್ಕೆ ಸ್ಫೋಟಕ ಬ್ಯಾಟರ್ ಅಲಭ್ಯ

ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ಶಿವಂ ಮಾವಿ, ಯಶ್ ದಯಾಳ್, ಆರ್ ಸಾಯಿ ಕಿಶೋರ್, ಅಭಿನವ್ ಮನೋಹರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜಯಂತ್ ಯಾದವ್, ವಿಜಯ್ ಶಂಕರ್, ಕೆಎಸ್ ಭರತ್ (ವಿಕೆಟ್ ಕೀಪರ್), ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ಸಾಯಿ ಸುದರ್ಶನ್, ಪ್ರದೀಪ್ ಸಾಂಗ್ವಾನ್, ರಶೀದ್ ಖಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೇನ್ ವಿಲಿಯಮ್ಸನ್, ಜೋಶ್ ಲಿಟಲ್, ಓಡಿಯನ್ ಸ್ಮಿತ್, ನೂರ್ ಅಹ್ಮದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+