IPL 2023: ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು; ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಅಂತಿಮ ಹಂತವನ್ನು ತಲುಪಿದೆ. ಕೊನೆಯ ಹಂತದಲ್ಲಿ ಎಲ್ಲಾ ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನವನ್ನು ನೀಡುತ್ತಿದ್ದು ಪ್ಲೇಆಫ್ ಹಂತಕ್ಕೇರಲು ಕಠಿಣ ಪೈಪೋಟಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸೋಲು ಕಂಡಿದ್ದು ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ತಂಡದ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ ಭರ್ಜರಿ ಶತಕ ಸಿಡಿಸಿದರು. ಇದರ ಪರಿಣಾಮವಾಗಿ ಶಿಖರ್ ಧವನ್ ಪಡೆ 31 ರನ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ ತನ್ನ ಹೋರಾವನ್ನು ಲೀಗ್ ಹಂತಕ್ಕೆ ಮುಗಿಸುವುದು ದೃಢವಾಗಿದೆ.

ಈ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ಕಿಂಗ್ಸ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದರು. ಆರಂಭದಿಂದಲೇ ಪಂಜಾಬ್ ಕಿಂಗ್ಸ್ ತಂಡ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು. ಆದರೆ ಒಂದು ತುದಿಯಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ ಗಟ್ಟಿಯಾಗಿ ನೆಲೆಯೂರಿದ್ದು ಕೊನೆಯ ಹಂತದವರೆಗೂ ಹೋರಾಟ ಮುಂದುವರಿಸಿದರು. ಇದರ ಪರಿಣಾಮವಾಗಿ ಪ್ರಭ್ಸಿಮ್ರಾನ್ ಸಿಂಗ್ 103 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಈ ಪಂದ್ಯದಲ್ಲಿ ಪಂಜಾಬ್ ಪರ ಪ್ರನ್ಸಿಮ್ರಾನ್ ಅವರನ್ನು ಹೊರತುಪಡಿಸಿ ಉಳಿದ ಆಟಗಾರರ ಪೈಕಿ ಸ್ಯಾಮ್ ಕರನ್ ಅವರ 20 ರನ್ ಅತಿ ಹಚ್ಚಿನ ಸ್ಕೋರ್ ಎನಿಸಿಕೊಂಡಿದೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 167 ರನ್‌ಗಳನ್ನು ಗಳಿಸಿ ಸವಾಲಿನ ಗುರಿ ನಿಗದಿಪಡಿಸಿತು.
ಇನ್ನು ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ ವಾರ್ನರ್, ಫಿಲ್ ಸಾಲ್ಟ್ ಜೋಡಿ 69 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ಜೊಡಿ ವಿಕೆಟ್ ಕಳೆದುಕೊಂಡ ಬಳಿಕ ಪಂಜಾಬ್ ಕಿಂಗ್ಸ್ ಆಘಾತಕಾರಿ ರೀತಿಯಲ್ಲಿ ಕುಸಿತ ಕಾಣಲು ಆರಂಭಿಸಿತು. ಅದರಲ್ಲೂ ಮಧ್ಯಮ ಕ್ರಮಾಂಕದ ಆಟಗಾರರೆಲ್ಲಾ ಒಂದಂಕಿಗೆ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 20 ಓವರ್‌ಗಳಲ್ಲಿ 136 ರನ್‌ಗಳಿಸಿ ಡಿಸಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೋಸೊವ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಬೆಂಚ್: ಮನೀಶ್ ಪಾಂಡೆ, ರಿಪಾಲ್ ಪಟೇಲ್, ಲಲಿತ್ ಯಾದವ್, ಚೇತನ್ ಸಕರಿಯಾ, ಅಭಿಷೇಕ್ ಪೊರೆಲ್, ಸರ್ಫರಾಜ್ ಖಾನ್, ಲುಂಗಿ ಎನ್‌ಗಿಡಿ, ರೋವ್‌ಮನ್ ಪೊವೆಲ್, ಪ್ರಿಯಮ್ ಗಾರ್ಗ್, ಪೃಥ್ವಿ ಶಾ, ಯಶ್ ಧುಲ್, ವಿಕಿ ಓಸ್ತ್ವಾಲ್
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕುರಾನ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ಬೆಂಚ್: ನಾಥನ್ ಎಲ್ಲಿಸ್, ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಮೋಹಿತ್ ರಥಿ, ಭಾನುಕಾ ರಾಜಪಕ್ಸೆ, ಬಲ್ತೇಜ್ ಸಿಂಗ್, ಕಗಿಸೊ ರಬಾಡ, ವಿಧ್ವತ್ ಕಾವೇರಪ್ಪ, ಗುರ್ನೂರ್ ಬ್ರಾರ್, ಶಿವಂ ಸಿಂಗ್












Click it and Unblock the Notifications