IPL 2023: ಮಾಡಿದ ತಪ್ಪನ್ನೇ ಮಾಡುತ್ತಿದ್ದಾರೆ ರೋಹಿತ್ ಶರ್ಮಾ: ಆಕಾಶ್ ಚೋಪ್ರ

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಹೇಳಿಕೊಳ್ಳುವ ಪ್ರದರ್ಶಣ ನೀಡಲು ವಿಫಲವಾಗಿದೆ. ಮೊದಲಾರ್ಧದ ಪಂದ್ಯಗಳು ಮುಕ್ತಾಯವಾದ ಸಂದರ್ಭದಲ್ಲಿ ಎಂಐ ತಂಡದ ಖಾತೆಯಲ್ಲಿ 6 ಅಂಕಗಳು ಮಾತ್ರವೇ ಇದ್ದು ನೆಟ್‌ರನ್‌ರೇಟ್‌ನಲ್ಲಿಯೂ ಹಿಂದಿದೆ. ಜೋಫ್ರಾ ಆರ್ಚರ್ ಅವರ ಗಾಯದ ಕಾರಣದಿಂದಾಗಿ ಬೌಲಿಂಗ್‌ನಲ್ಲಿ ದುರ್ಬಲವಾಗಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಲು ವಿಫಲವಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಸಮಸ್ಯೆ ಅಗ್ರ ಕ್ರಮಾಂಕದಿಂದಲೇ ಆರಂಭವಾಗುತ್ತದೆ. ಆರಂಬಿಕ ಆಟಗಾರ ಇಶಾನ್ ಕಿಶನ್ ಹೊಸ ಚೆಂಡು ಎದುರಿಸಲು ಪರದಾಡುತ್ತಿದ್ದಾರೆ. ಇಶಾನ್ ಕಿಶನ್ ರನ್‌ಗಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಜವಾಬ್ಧಾರಿ ವಹಿಸಿಕೊಳ್ಳಲು ಮುಂದಾದರೆ ಅವರು ಕೂಡ ಹೆಚ್ಚಿನ ಸಂದರ್ಭದಲ್ಲಿ ವಿಫಲವಾಗಿತ್ತಿದ್ದಾರೆ. ಇದು ಮುಂಬೈ ಇಂಡಿಯನ್ಸ್‌ಗೆ ಪದೇ ಪದೇ ಆಘಾತ ನೀಡುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ ರೋಹಿತ್ 135ರ ಸ್ಟ್ರೈಕ್‌ರೆಟ್‌ನಲ್ಲಿ 181 ರನ್‌ಗಳಿಸಿದ್ದಾರೆ.

IPL 2023: Aakash Chopra said there is a repeating trend in Rohit Sharmas dismissals

ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ, ರೋಹಿತ್ ಶರ್ಮಾ ಅವರು ಇನ್ನಷ್ಟು ಉತ್ತಮವಾಗಿ ಬ್ಯಾಟಿಂಗ್ ನಡೆಸಬಹುದಾಗಿತ್ತು ಎಂದಿದ್ದಾರೆ. ಅಲ್ಲದೆ ಅವರು ಬಹುತೇಕ ಒಂದೇ ರೀತಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ ಆಕಾಶ್ ಚೋಪ್ರ.

"ಹಾರ್ದಿಕ್ ಪಾಂಡ್ಯ ಮುಂಬೈ ನಾಯಕ ರೋಹಿತ್ ಶರ್ಮಾ ವಿಕೆಟನ್ನು ಸುಲಭವಾಗಿ ಕಬಳಿಸಿದರು. ರೋಹಿತ್ ಶರ್ಮಾ ವಿಭಿನ್ನ ಪ್ರಯತ್ನ ಮಾಡಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ರೀತಿಯಾಗಿ ಅವರು ಸುಲಭವಾಗಿ ಎದುರಾಳಿಗೆ ವಿಕೆಟ್ ನೀಡುತ್ತಿದ್ದಾರೆ. ಇದು ಪದೇ ಪದೇ ಸಂಭವಿಸುತ್ತಿದೆ" ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ ಆಕಾಶ್ ಚೋಪ್ರ.

IPL 2023: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ RCB; ಮತ್ತೆ ಗೆಲುವಿನ ಓಟಕ್ಕೆ ಅಡ್ಡಿಯಾಗುತ್ತಾ KKR

ಈ ಪಂದ್ಯದ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಕೂಡ ಬೇಸರ ಹೊರಹಾಕಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್‌ಗಳಿಂದ ಇನ್ನಷ್ಟು ಹೆಚ್ಚಿನ ಪ್ರದರ್ಶನ ನಿರೀಕ್ಷಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಮುಂದುವರಿದು ಅವರು ದೊಡ್ಡ ಮೊತ್ತದ ಗುರಿಯನ್ನು ಕಂಡು ಬ್ಯಾಟರ್‌ಗಳು ಶಸ್ತ್ರ ತ್ಯಜಿಸಿದರು ಎಂದು ಬೇಸರ ಹೊರಹಾಕಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. 208 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಪರವಾಗಿ ಉತ್ತಮ ಜೊತೆಯಾಟ ಬಾರದ ಕಾರಣದಿಂದಾಗಿ ಈ ಪಂದ್ಯದಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿತು ಮುಂಬೈ ಇಂಡಿಯನ್ಸ್. ಹೀಗಾಗಿ ಈ ಪಂದ್ಯವನ್ನು ದೊಡ್ಡ ಅಂತರದಿಂದ ಕಳೆದುಕೊಂಡಿತು.

ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ ಮುಂಬೈ ಇಂಡಿಯನ್ಸ್: ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಬಾರಿಯ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ಬಳಿಕ ಎಂಐ ಹ್ಯಾಟ್ರಿಕ್ ಗೆಲುವು ಸಾಧಿಸಿ ಗೆಲುವಿನ ಲಯಕ್ಕೆ ಮರಳಿತ್ತು. ಆದರೆ ಅದಾದ ಬಳಿಕ ಮತ್ತೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಆಡಿರುವ 7 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+