• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾರ್ ನಟನಿಗೆ ಜೆರ್ಸಿ ಗಿಫ್ಟ್ ಕೊಟ್ಟ ರಾಜಸ್ಥಾನ ನಾಯಕ ಸ್ಯಾಮ್ಸನ್

|

ಮುಂಬೈ, ಏಪ್ರಿಲ್ 12: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಜೆರ್ಸಿ ಗಿಫ್ಟ್ ಮಾಡಿದ್ದಾರೆ.

ಪ್ರೇಕ್ಷಕರೇ ಇಲ್ಲದೆ ಆಡುವಂಥ ಪರಿಸ್ಥಿತಿಯನ್ನು ಕೊವಿಡ್ 19 ಸಾಂಕ್ರಾಮಿಕ ತಂದೊಡ್ಡಿದ್ದು, ಸೆಲೆಬ್ರಿಟಿಗಳು ಮನೆಯಲ್ಲೇ ಐಪಿಎಲ್ ಆಟ ಸಂಭ್ರಮಿಸುವ ಪರಿಸ್ಥಿತಿ ಇದೆ. ಅನೇಕ ಸ್ಟಾರ್ ನಟರಂತೆ ಪೃಥ್ವಿರಾಜ್ ಕೂಡಾ ಐಪಿಎಲ್ ಅತಿದೊಡ್ಡ ಸೆಲೆಬ್ರಿಟಿ ಫ್ಯಾನ್ ಎನಿಸಿಕೊಂಡಿದ್ದಾರೆ

ಐಪಿಎಲ್: ಪತಿ ಬೂಮ್ರಾ ಬೆಂಬಲಿಸಲು ನೀಲಿ ಡ್ರೆಸ್ ಧರಿಸಿದ ನಿರೂಪಕಿ ಸಂಜನಾ! ಐಪಿಎಲ್: ಪತಿ ಬೂಮ್ರಾ ಬೆಂಬಲಿಸಲು ನೀಲಿ ಡ್ರೆಸ್ ಧರಿಸಿದ ನಿರೂಪಕಿ ಸಂಜನಾ!

ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಭರ್ಜರಿಯಾಗಿ ಆರಂಭವಾಗಿದೆ. ರಾಜಸ್ಥಾನ ಇಂದು ಕಣಕ್ಕಿಳಿಯುತ್ತಿದ್ದು, ವಾಂಖೆಡೆ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ.

ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್ ಧೋನಿ ಮೇಲೆ ದ್ರಾವಿಡ್ ಕೋಪಗೊಂಡ ಪ್ರಸಂಗ ಸ್ಮರಿಸಿದ ಸೆಹ್ವಾಗ್

ಈ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಅವರು ಪೃಥ್ವಿ ಹಾಗೂ ಅವರ ಪುತ್ರಿ ಅಲಂಕೃತಾ ಅವರಿಗೆ ರಾಯಲ್ಸ್ ಜೆರ್ಸಿ ಕಳಿಸಿದ್ದಾರೆ. ಗಿಫ್ಟ್ ತಲುಪಿದೆ, ನೀವು ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವುದು ನಮ್ಮ ಹೆಮ್ಮೆ, ನಾವೆಲ್ಲರೂ ನಿಮ್ಮ ತಂಡದ ಗೆಲುವಿಗಾಗಿ ಚಿಯರ್ ಮಾಡುತ್ತೇವೆ, ಇನ್ನಷ್ಟು ಹರಟೆ, ಕ್ರಿಕೆಟ್ ಸಂಭ್ರಮ ನಮ್ಮದಾಗಲಿ ಎಂಬರ್ಥದಲ್ಲಿ ಪೃಥ್ವಿ ಅವರು ಥ್ಯಾಂಕ್ಸ್ ಹೇಳಿದ್ದಾರೆ.

English summary
IPL 2021: Malayalam film star Prithviraj Sukumaran on Sunday shared the news of him and daughter Alankrita receiving jerseys from IPL side Rajasthan Royals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X