ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಅರ್ಧಕ್ಕೆ ಮೊಟಕು, ಬಿಸಿಸಿಐಗೆ 2,500 ಕೋಟಿ ರು ನಷ್ಟ

|
Google Oneindia Kannada News

ಮುಂಬೈ, ಮೇ 6: ಕೋವಿಡ್ 19 ಸಂಕಷ್ಟದ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಅವೃತ್ತಿಯನ್ನು ಆಯೋಜಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗ ಕೋವಿಡ್ ಸೋಂಕಿನ ಸುಳಿಯಲ್ಲಿ ಸಿಲುಕಿದೆ.

ಸೋಂಕಿತ ಆಟಗಾರರ ಆರೈಕೆ ಜೊತೆಗೆ ವಿದೇಶಿ ಆಟಗಾರರನ್ನು ಅವರ ದೇಶಕ್ಕೆ ತಲುಪಿಸುವ ಹೊಣೆ ಕೂಡಾ ಬಿಸಿಸಿಐ ಮೇಲಿದೆ. 52 ದಿನಗಳ ಕಾಲ ನಡೆಯಬೇಕಿದ್ದ 60 ಐಪಿಎಲ್ ಪಂದ್ಯಗಳು ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಬಿಸಿಸಿಐ ಭಾರಿ ನಷ್ಟ ಅನುಭವಿಸಿದೆ.

ಸರಿ ಸುಮಾರು 2500 ಕೋಟಿ ರುಗೂ ಅಧಿಕ ಮೊತ್ತದ ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಕೋವಿಡ್ 19 ನಿರ್ಬಂಧದ ನಡುವೆ ಆರಂಭವಾದ ಐಪಿಎಲ್ 52 ದಿನಗಳ ಕಾಲ ನಿಗದಿಯಾಗಿತ್ತು. ಮೇ 30ರಂದು ಫೈನಲ್ ಎಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, 24 ದಿನಗಳನ್ನು 29 ಪಂದ್ಯಗಳ ನಂತರ ಐಪಿಎಲ್ ರದ್ದಾಗಲು ಕೊವಿಡ್ 19 ಕಾರಣವಾಗಿದೆ.

IPL 14 Cancel: BCCI stands to lose over ₹2000 crore

ಐಪಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲು ಸ್ಟಾರ್ ನೆಟ್ವರ್ಕ್ 5 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕ 3269.4 ಕೋಟಿ ರು ಮೌಲ್ಯದ್ದಾಗಿದೆ. ಪ್ರತಿ ಪಂದ್ಯಕ್ಕೆ 54.5 ಕೋಟಿ ಅಂದಾಜು ಮೌಲ್ಯ ತಗುಲುತ್ತದೆ.

29 ಪಂದ್ಯಗಳಿಗೆ 1580 ಕೋಟಿ ಅಂದಾಜು ವೆಚ್ಚವಾಗಲಿದ್ದು, ಬಿಸಿಸಿಐಗೆ 1690 ಕೋಟಿ ರು ನಷ್ಟವಾಗಲಿದೆ.

ಶೀರ್ಷಿಕೆ ಪ್ರಾಯೋಜಕತ್ವ ವಿವೋ 440 ಕೋಟಿ ರು ಈ ಸೀಸನ್ ಗಾಗಿ ನೀಡಿದ್ದು, ಈಗ ಇದರ ಅರ್ಧ ಮೊತ್ತ ಮಾತ್ರ ಸಿಗಲಿದೆ.

ಇದಲ್ಲದೆ ಅನ್ ಅಕಾಡೆಮಿ, ಡ್ರೀಮ್ಸ್ 11, ಕ್ರೆಡ್, ಅಪ್ ಸ್ಟಾಕ್, ಟಾಟಾ ಮೋಟರ್ಸ್ ಸೇರಿಸಿ ಒಟ್ಟಾರೆ 120 ಕೋಟಿ ರು ಪಾವತಿ ಕೂಡಾ ನಷ್ಟವಾಗಲಿದೆ. ಆಟಗಾರರಿಗೆ ಪ್ರೋ ರೇಟಾ ಬದಲಿಗೆ ಪಂದ್ಯಾವಳಿಯಲ್ಲಿ ಎಷ್ಟು ಅವಧಿ ಇರುತ್ತಾರೋ ಅವಧಿಗೆ ಮಾತ್ರ ಸಂಭಾವನೆ ಸಿಗಲಿದೆ ಎಂದು ತಿಳಿದು ಬಂದಿದೆ.

English summary
The BCCI stands to lose over ₹2000 crore of the broadcast and sponsorship money earmarked for this year's Indian Premier League which was indefinitely postponed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X