Hardik Pandya: ಹೇಗಿದೆ ಗೊತ್ತಾ ಹಾರ್ದಿಕ್ ಪಾಂಡ್ಯ ಐಶಾರಾಮಿ ಮನೆ? ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ?
ಸದ್ಯ ಕೌಂಟುಬಿಕ ಬಿರುಕು ಉಂಟಾಗಿರುವ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ, ಅಮೆರಿಕದಲ್ಲಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ಭಾರತದಲ್ಲಿ ಅವರ ಹಾಗೂ ಪತ್ನಿ ನತಾಶಾ ಅವರ ಡೈವರ್ಸ್ ವದಂತಿಗಳಿಗೆ ದಿನಕ್ಕೊಂದು ರೆಕ್ಕೆ ಪುಕ್ಕ ಹತ್ತಿಕೊಳ್ಳುತ್ತಿದೆ. ಈ ಮಧ್ಯ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಸರ್ಚ್ ಇಂಜಿನಲ್ಲಿ ಹಲವು ವಿಷಯಗಳ ಬಗ್ಗೆ ಅಭಿಮಾನಿಗಳು ಹುಡುಕಿದ್ದಾರೆ.
ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ, ಸ್ಟಾರ್ ಆಲ್‌ರೌಂಡರ್. ಇವರಿಗೆ ತಂಡ ಯಾವುದೇ ಕೆಲಸವನ್ನು ನೀಡಿದರೂ ನಿಯತ್ತಾಗಿ ಮಾಡಿ ಮುಗಿಸುವ ಪ್ಲೇಯರ್. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿರುವ ಟೀಮ್ ಇಂಡಿಯಾ ಸನ್‌ಶೇಷನ್ ಬದುಕು ಮಾತ್ರ ಸರಿಯಾಗಿಲ್ಲ. ಇಷ್ಟು ದಿನ ಎಲ್ಲವೂ ಚೆನ್ನಾಗಿದೆ ಎಂದು ಅಂದುಕೊಂಡಿರುವಂತೆ ಈಗ ದಾಂಪತ್ಯದಲ್ಲಿ ಬಿರುಕು ಬಿಟ್ಟಂತೆ ಕಾಣುತ್ತಿದೆ. ಹಾರ್ದಿಕ್ ಕೊಂಚ ಶೋಕಿ ಬಾಬಾ.. ಆದರೆ ಇದರಿಂದ ಬೇರೆಯವರಿಗೆ ತೊಂದರೆ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ. ಬರೋಡಾದಲ್ಲಿರುವ ಹಾರ್ದಿಕ್ ಬಂಗಲೆಯನ್ನು ಒಮ್ಮೆ ನೋಡಿದರೆ ಯಾವುದೇ ಶ್ರೀಮಂತನ ಬಂಗಲೆಗೆ ಕಡಿಮೆ ಇಲ್ಲ ಅನಿಸುತ್ತದೆ.

ಹಾರ್ದಿಕ್ ಗುಜರಾತ್‌ನ ವಡೋದರಾದಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 3.5 ಕೋಟಿ ಎಂದು ಹೇಳಲಾಗುತ್ತಿದೆ. ನಾಲ್ಕು ಫ್ಲಾಟ್ ಗಳನ್ನು ಜೋಡಿಸಿ ದೊಡ್ಡ ಕಟ್ಟಡದ ರೂಪ ನೀಡಲಾಗಿದೆ. ಈ ಮನೆಯು ಹೈಟೆಕ್ ಸೌಲಭ್ಯಗಳಿಂದ ಕೂಡಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಅನುರಾಧ ಅಗರ್ವಾಲ್ ವಿನ್ಯಾಸಗೊಳಿಸಿದ್ದಾರೆ.
ಅನುರಾಧಾ ಅಗರ್ವಾಲ್ ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ಅವರ ಮನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ವ್ಯಕ್ತಿಗಳ ಅಭಿರುಚಿಗೆ ತಕ್ಕಂತೆ ಕೋಣೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಐಷಾರಾಮಿ ಮನೆಯಲ್ಲಿ ಜಿಮ್, ಹೋಮ್ ಥಿಯೇಟರ್ ಮತ್ತು ದೊಡ್ಡ ಬಾಲ್ಕನಿ ಕೂಡ ಇದೆ. ಹಾರ್ದಿಕ್ ಅವರ ಕುಟುಂಬದೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ, ಇದರಲ್ಲಿ ಹಾರ್ದಿಕ್ ಹಾಗೂ ಕೃನಾಲ್ ಕುಟುಂಬ ಸಹ ವಾಸಿಸುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಕ್ರಿಕೆಟ್ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬರು. ಹಾರ್ದಿಕ್ ಕೇಂದ್ರ ಒಪ್ಪಂದದಲ್ಲಿ ಗ್ರೇಡ್ ಎ ಆಟಗಾರನಾಗಿದ್ದು, ಅವರು ವಾರ್ಷಿಕವಾಗಿ 5 ಕೋಟಿ ರೂ. ಆಗಿದೆ. ಅಲ್ಲದೆ ಹಲವು ಆದಾಯದ ಮೂಲಗಳನ್ನು ಹೊಂದಿದ್ದಾರೆ.
ಹೇಗಿದೆ ಹಾರ್ದಿಕ್ ಪಾಂಡ್ಯ ರೂಮ್?
ಹಾರ್ದಿಕ್ ಪಾಂಡ್ಯ ಅವರ ಕೋಣೆ ಯಾವುದೇ ಕ್ರಿಕೆಟ್ ಪ್ರೇಮಿಯ ಹೃದಯವನ್ನು ಗೆಲ್ಲುತ್ತದೆ. ಕೊಠಡಿಯಲ್ಲಿ ಇತರ ಕ್ರಿಕೆಟಿಗರೊಂದಿಗೆ ಹಾರ್ದಿಕ್ ಅವರ ದೊಡ್ಡ ಚಿತ್ರವಿದೆ. ರೂಮ್ ಕ್ರಿಕೆಟ್‌ನಲ್ಲಿನ ಪಯಣಕ್ಕೆ ಮೀಸಲಿಟ್ಟಂತೆ ತೋರುತ್ತದೆ. ಹಾರ್ದಿಕ್ ತನ್ನ ಕೋಣೆಯಲ್ಲಿ ಹೆಚ್ಚು ನೀಲಿ ಬಣ್ಣವನ್ನು ಬಯಸಿದ್ದರು ಎಂದು ಅನುರಾಧ ಹೇಳುತ್ತಾರೆ. ಇದು ಕ್ರಿಕೆಟ್‌ಗೆ ಅವರ ಸಮರ್ಪಣೆಯನ್ನು ತೋರಿಸುತ್ತದೆ. ಕೋಣೆಯಲ್ಲಿ ತುಂಬಾ ಕಡಿಮೆ ಅಲಂಕಾರವಿದೆ.
ಕೃನಾಲ್ ಪಾಂಡ್ಯ ಅವರ ಕೊಠಡಿ
ಕೃನಾಲ್ ಪಾಂಡ್ಯ ಅವರ ಕೋಣೆಯಲ್ಲಿಹಳದಿ ಬಣ್ಣ ಹೆಚ್ಚಾಗಿ ಕಾಣುತ್ತದೆ. ಹಾಸಿಗೆಯ ಮುಂದೆ ದೊಡ್ಡ ಟಿವಿ ಇದೆ ಮತ್ತು ಟಿವಿಯ ಬಲಭಾಗದಲ್ಲಿ ಕಂದು ಮತ್ತು ಬಿಳಿ ಬಣ್ಣದ ಫೋಟೋ ಹಾಕಲಾಗಿದೆ. ಹಾಸಿಗೆಯ ಹಿಂಭಾಗದ ಗೋಡೆಯ ಮೇಲೆ ಏಳು ಕುದುರೆಗಳ ಚಿತ್ರವಿದೆ. ಇದು ಮನೆಯಲ್ಲಿ ಪಾಸಿಟಿವ್ ಎನರ್ಜಿ ತರುವ ಸಂಕೇತವೆಂದು ಪರಿಗಣಿಸಲಾಗಿದೆ.
ಮುಂಬೈನಲ್ಲೂ ಇದೆ ಮನೆ
ಗುಜರಾತ್‌ನ ವಡೋದರಾ ಮಾತ್ರವಲ್ಲದೆ ಮುಂಬೈನ ಬಾಂದ್ರಾದಲ್ಲಿಯೂ ಪಾಂಡ್ಯ ಸಹೋದರರು 30 ಕೋಟಿ ರೂ. ವೆಚ್ಚದಲ್ಲಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಜಿಮ್, ರಾಕ್ ಕ್ಲೈಂಬಿಂಗ್, ಸ್ಪಾ, ಗೇಮ್ ರೂಮ್ ಮತ್ತು ಸ್ಕೈ ಲೌಂಜ್ ಸೌಲಭ್ಯವೂ ಇದೆ.












Click it and Unblock the Notifications