Rinku Singh: ಸದ್ಯಕ್ಕೆ ಮುರಿದುಬಿದ್ದ ಭಾರತದ ಸ್ಟಾಟ್‌ ಕ್ರಿಕೆಟರ್ ರಿಂಕ್‌ ಸಿಂಗ್ ವಿವಾಹ

Rinku Singh: ಇತ್ತೀಚಿನ ಕೊನೇ ಹಂತದಲ್ಲಿ ಎಷ್ಟೋ ವಿವಾಹಗಳು ವಿವಿಧ ಕಾರಣಗಳಿಂದ ಮುರಿದುಬಿದ್ದ ಉದಾಹರಣೆಗಳಿವೆ. ಈ ನಡುವೆಯೇ ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್‌ ಅವರ ಮದುವೆಯೂ ರದ್ದಾಗಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ನಲ್ಲಿ ಕೊಲ್ಕಾತ್‌ ನೈಟ್‌ ರೈಡರ್ಸ್‌ ಪರ ಸ್ಫೋಟಕ ಬ್ಯಾಟ್‌ ಬೀಸಿದ ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್‌ ಮದುವೆ ರದ್ದಾಗಿದೆ. ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್‌ನ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆಗೆ ವಿವಾಹ ಫಿಕ್ಸ್‌ ಆಗಿದ್ದು, ಇದೇ ವರ್ಷದ ನವೆಂಬರ್ 18ರಂದು ವಾರಣಾಸಿಯಲ್ಲಿ ನಡೆಯಬೇಕಿತ್ತು. ಆದರೆ, ಇದೀಗ ಸದ್ಯಕ್ಕೆ ಈ ವಿವಾಹ ಮುರಿದುಬಿದ್ದಿದೆ.

India s Star Cricketer Rinku Singh Wedding Postponed

ಕ್ರಿಕೆಟಿಗ ರಿಂಕು ಸಿಂಗ್‌ ಹಾಗೂ ಪ್ರಿಯಾ ಸರೋಜ್ ಅವರ ವಿವಾಹ ಸಂಭ್ರಮಕ್ಕೆ ಅಂತಲೇ ವಾರಣಾಸಿಯ ನಾಡೇಸರ್‌ನಲ್ಲಿರುವ ಹೋಟೆಲ್ ತಾಜ್‌ ಅನ್ನು ಬುಕ್‌ ಮಾಡಲಾಗಿತ್ತು. ಆದರೆ, ಈಗ ಅದನ್ನು ಮುಂದೂಡಿಕೆ ಮಾಡಲಾಗಿದೆ. ರಿಂಕುಗೆ ಕ್ರಿಕೆಟ್‌ನಲ್ಲಿ ಬಿಡುವು ಸಿಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದೀಗ ಬಂದ ಮಾಹಿತಿ ಪ್ರಕಾರ, ರಿಂಕು ಸಿಂಗ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಕಾರ್ಯನಿರತರಾಗಿರುತ್ತಾರೆ. ಆದ್ದರಿಂದ ಅವರ ಮದುವೆಯನ್ನ ಮುಂದೂಡಿಕೆ ಮಾಡಲಾಗಿದೆ. ಮದುವೆಗಂತಲೇ ಹೋಟೆಲ್ ಬುಕ್ಕಿಂಗ್‌ ಅನ್ನು ಸಹ ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಕುಟುಂಬದವರು ಮತ್ತೆ ವಿವಾಹದ ದಿನಾಂಕವನ್ನು ನಿರ್ಧರಿಸಲಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಇಲ್ಲ.

ಈಗಾಗಲೇ ಇತ್ತೀಚೆಗಷ್ಟೇ ಪ್ರಿಯಾ ಸರೋಜ್ ಮತ್ತು ರಿಂಕು ಸಿಂಗ್ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ವೇಳೆ ಹಲವು ಸ್ಟಾರ್ ಕ್ರಿಕೆಟಿಗರು ಮತ್ತು ರಾಜಕೀಯ ನಾಯಕತರು ಪಾಲ್ಗೊಂಡಿದ್ದರು. ಇನ್ನೂ ಇದೇ ವೇಳೆ ಪ್ರಿಯಾ ಸರೋಜ್ ಭಾವುಕರಾಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿತ್ತು.

ನಿಶ್ಚಿತಾರ್ಥದ ಈ ವಿಶೇಷ ಸಂದರ್ಭವನ್ನು ಮತ್ತಷ್ಟು ಸ್ಮರಣೀಯ ಆಗಿಸಲು ರಿಂಕು ಸಿಂಗ್ ಹಾಗೂ ಪ್ರಿಯಾ ಸರೋಜ್ ಪರಸ್ಪರ ವಿಶೇಷ ಉಂಗುರಗಳನ್ನು ಆರ್ಡರ್ ಮಾಡಿದ್ದರು. ಪ್ರಿಯಾ ಕೋಲ್ಕತ್ತಾದಿಂದ ತಮ್ಮ ಆಯ್ಕೆಯ ಡಿಸೈನರ್ ಉಂಗುರವನ್ನು ಖರೀದಿ ಮಾಡಿದರೆ, ರಿಂಕು ಸಿಂಗ್‌ ಮುಂಬೈನಿಂದ ವಿಶೇಷವಾಗಿ ಉಂಗುರವನ್ನು ಆರ್ಡರ್ ಮಾಡಿದರು. ಇಬ್ಬರ ಆಯ್ಕೆಯ ಪ್ರಕಾರ, ಸಮಾರಂಭದ ಮೆನುವನ್ನು ಸಹ ವಿಶೇಷವಾಗಿ ತಯಾರಿ ಮಾಡಲಾಗಿತ್ತು.

ಅಕ್ಟೋಬರ್ 19ರಿಂದ ನವೆಂಬರ್ 8ರ ವರೆಗೆ ಆಸ್ಟ್ರೇಲಿಯಾದಲ್ಲಿ 3 ಏಕದಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಮತ್ತು ಐದು ಟಿ-20 ಪಂದ್ಯದ ವೇಳಾಪಟ್ಟಿಯನ್ನ ಬಿಸಿಸಿಐ ಬಿಡುಗಡೆಗೊಳಿಸಿದೆ. ನವೆಂಬರ್ 14ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯ, ನವೆಂಬರ್ 30ರಿಂದ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿವೆ. ಆದ್ದರಿಂದ ವಿವಾಹ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 27 ವರ್ಷದ ರಿಂಕು ಸಿಂಗ್ ಭಾರತದ ಪರ ಇಲ್ಲಿವರೆಗೂ ಎರಡು ಏಕದಿನ ಅಂತಾರಾಷ್ಟ್ರೀಯ ಮತ್ತು 33 ಟಿ-20 ಪಂದ್ಯಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+