T20 World Cup: ವಿರಾಟ್ ಇನ್ನಿಂಗ್ಸ್ ಆರಂಭಿಸಿದರೆ ಹೇಗಿರಲಿದೆ ಮಿಡ್ಲ್ ಆರ್ಡರ್ ಬ್ಯಾಟಿಂಗ್?
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಆರಂಭವಾಗಿದೆ. ಲೀಗ್ ಹಂತದ ಪಂದ್ಯಗಳು ನಡೆದಿವೆ. ಟೀಮ್ ಇಂಡಿಯಾ ಸಹ ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸಿದೆ. ಈಗಾಗಲೇ ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ವಿಶ್ವಾಸದಲ್ಲಿದೆ.
ರೋಹಿತ್ ಪಡೆ ಬುಧವಾರ (ಜೂನ್ 5)ರಂದು ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಟೀಮ್ ಇಂಡಿಯಾ, ಐರ್ಲೆಂಡ್ ಸವಾಲು ಎದುರಿಸಲಿದೆ. ಟಿ20 ವಿಶ್ವಕಪ್ ಗೆಲುವಿನ ಮೇಲೆ ಕಣ್ಣು ನೆಟ್ಟಿರುವ ಟೀಮ್ ಇಂಡಿಯಾಗೆ ಎಲ್ಲ ಪಂದ್ಯಗಳಲ್ಲಿ ಜಯ ಅನಿವಾರ್ಯ.

ಓಪನರ್ ಯಾರು?
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿದ್ದರಿಂದ ಒಂದು ವಿಷಯ ಸ್ಪಷ್ಟವಾದಂತೆ ಕಾಣುತ್ತದೆ. ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಓಪನರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ವಿರಾಟ್ ಆರಂಭಿಕರಾಗಿ ಕಾಣಿಸಿಕೊಂಡಲ್ಲಿ ಪಂತ್ ಮೂರನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ಸಂಜು ಸ್ಯಾಮ್ಸನ್‌ಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ
ಮಿಡ್ಲ್ ಆರ್ಡರ್ ಹೇಗಿರಲಿದೆ?
ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಹಾರ್ದಿಕ್ ಪಾಂಡ್ಯ 5ನೇ ಕ್ರಮಾಂಕದಲ್ಲಿ ಆಡುವುದನ್ನು ಕಾಣಬಹುದು. ಏತನ್ಮಧ್ಯೆ, ಪ್ಲೇಯಿಂಗ್ ಹನ್ನೊಂದರಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಇಬ್ಬರಿಗೂ ಒಟ್ಟಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.
ಒಂದು ವೇಳೆ ಇವರಿಬ್ಬರಿಗೂ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶವನ್ನು ನೀಡಿದ್ದೇ ಆದಲ್ಲಿ ಬೌಲಿಂಗ್ ಆಕ್ಷನ್ ಹೆಚ್ಚಾಗುತ್ತದೆ. ಇಬ್ಬರೂ ತಲಾ ಎರಡು ಓವರ್ ಬೌಲ್ ಮಾಡಿದರೆ ಕೆಲಸ ಮುಗಿಯುತ್ತದೆ. ಆದರೆ, ಸದ್ಯಕ್ಕೆ ಶಿವಂ ದುಬೆ ಅವರ ಫಾರ್ಮ್ ಸರಿಯಾಗಿಲ್ಲ.

ಸ್ಪಿನ್ ಆಲ್‌ರೌಂಡರ್ ರೂಪದಲ್ಲಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಗೆ ಅವಕಾಶ ನೀಡಬಹುದು. ಇವರಿಬ್ಬರೂ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಮ್ಮ ಕೈಚಳಕ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆಯುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾದ ಸಂಭಾವ್ಯ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್.












Click it and Unblock the Notifications