20 ಕೋಟಿ ರೂಪಾಯಿ ಗೆದ್ದ ಭಾರತ ತಂಡ: ಯಾವ ಆಟಗಾರನಿಗೆ ಎಷ್ಟು ಕೋಟಿ ಸಿಗಲಿದೆ?

ಭಾರತ ಕ್ರಿಕೆಟ್ ತಂಡ ನಿನ್ನೆ ಐಸಿಸಿ ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿದೆ. ಈ ಮೂಲಕ 14 ವರ್ಷಗಳ ನಂತರ ಭಾರತ ತಂಡಕ್ಕೆ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಸಿಕ್ಕಂತಾಗಿದೆ. ಹಾಗಾದ್ರೆ ಈಗ ಕಪ್ ಗೆದ್ದಿರುವ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಕೋಟಿ? ಬಹುಮಾನದ ಹಣದಲ್ಲಿ ಯಾವ ಯಾವ ಆಟಗಾರರಿಗೆ ಎಷ್ಟು ಕೋಟಿ ರೂಪಾಯಿ ಹಣ ಹಂಚಿಕೆ ಆಗಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ನಿನ್ನೆ ಶತಕೋಟಿ ಭಾರತೀಯ ಹೃದಯಗಳ ಆಸೆ ಈಡೇರಿದೆ, ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಗೆದ್ದು ಬರಲಿ ಎಂಬ ಪ್ರಾರ್ಥನೆ ಫಲಿಸಿದೆ. ಈ ಮೂಲಕ ಭಾರತ ತಂಡ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಅದರಲ್ಲೂ ಟೂರ್ನಿ ಪೂರ್ತಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 76 ರನ್ ಕೊಡುಗೆ ನೀಡಿದ್ದಾರೆ. ಹೀಗಿದ್ದಾಗ ಭಾರತ ತಂಡಕ್ಕೆ ಒಟ್ಟಾರೆ 20 ಕೋಟಿ 40 ಲಕ್ಷ ರೂಪಾಯಿಗು ಹೆಚ್ಚು ಹಣ ಬಹುಮಾನದ ರೂಪದಲ್ಲಿ ಸಿಕ್ಕಿದೆ. ಹಾಗಾದ್ರೆ ಈ ಹಣದಲ್ಲಿ ಯಾರಿಗೆಲ್ಲಾ ಹಂಚಿಕೆ ಆಗಲಿದೆ? ಪೂರ್ತಿ ಮಾಹಿತಿ ಇಲ್ಲಿದೆ ಮುಂದೆ ಓದಿ.

Indian Team Got This Much Of Prize Money After Winning The T20 World Cup 2024 Trophy

ವಿರಾಟ್ ಕೊಹ್ಲಿಗೆ ಎಷ್ಟು ಕೋಟಿ?

ಟಿ20 ವಿಶ್ವಕಪ್ 2024 ಗೆದ್ದು ಬೀಗಿದ ಭಾರತಕ್ಕೆ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಹಾಗೇ ಫೈನಲ್‌ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು ಭಾರತ ತಂಡಕ್ಕೆ ಈಗ ಸಿಕ್ಕಿರುವ 20 ಕೋಟಿ 42 ಲಕ್ಷ ರೂಪಾಯಿ ಹಣದಲ್ಲಿ ತಂಡದ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಇಷ್ಟು ಅಂತಾ ಹಣ ಸಿಗಲಿದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಿಗೆ ಹೆಚ್ಚಿನ ಪಾಲು ಹೋಗಲಿದೆ.

ಫುಟ್‌ಬಾಲ್ ಆಟದಲ್ಲಿ ಹೆಚ್ಚು ಹಣ!

ಕ್ರೀಡಾ ಲೋಕದಲ್ಲಿ ಅತಿಹೆಚ್ಚು ಹಣ ನೀಡುವ ಆಟಗಳ ಪೈಕಿ ಫುಟ್‌ಬಾಲ್ ಮೊದಲನೇ ಸ್ಥಾನ ಪಡೆದಿದೆ. ಹಾಗೇ ಫಾರ್ಮುಲಾ ರೇಸ್, ಟೆನ್ನಿಸ್, ಬೇಸ್‌ಬಾಲ್ ಆಟದಲ್ಲಿ ಕೂಡ ಕ್ರಿಕೆಟ್ ಆಟಕ್ಕಿಂತ ಹೆಚ್ಚಿನ ಹಣ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕೂಡ ದೊಡ್ಡ ದೊಡ್ಡ ಕ್ರೀಡೆಗಳ ಸಾಲಿಗೆ ಬಂದು ನಿಲ್ಲುತ್ತಿದೆ. ಹಾಗೇ ಕ್ರಿಕೆಟ್ ಕೀರ್ತಿ ಈಗ ಹಬ್ಬುತ್ತಿದೆ. ವಿರಾಟ್ ಕೊಹ್ಲಿ ಕ್ರೇಜ್ ಇದಕ್ಕೆ ಪ್ರಮುಖ ಕಾರಣ ಎಂಬ ವಾದ ಕೂಡ ಇದೆ.

ಕೊಹ್ಲಿ ದಾಖಲೆ ಮುಟ್ಟಲು ಆಗಲ್ಲ!

ವಿರಾಟ್ ಕೊಹ್ಲಿ ಟಿ20 ಮಾದರಿ ಕ್ರಿಕೆಟ್‌ಗೆ ಈಗ ನಿವೃತ್ತಿ ಘೋಷಣೆ ಮಾಡಿ, ವಿದಾಯ ಹೇಳಿದ್ದರೂ ಅವರ ದಾಖಲೆ ಮುಟ್ಟಲು ಇನ್ನೂ 20 ವರ್ಷವೇ ಬೇಕು ಬಿಡಿ. ಯಾಕಂದ್ರೆ ಅಷ್ಟು ದೊಡ್ಡ ದಾಖಲೆ ನಿರ್ಮಿಸಿದ್ದಾರೆ ನಮ್ಮ ಕೊಹ್ಲಿ. ಹೀಗಾಗಿ ವಿರಾಟ್ ಕೊಹ್ಲಿಗೆ & ಅವರ ದಾಖಲೆಗಳಿಗೆ ಅವರೇ ಸರಿಸಮ ಎನ್ನಬಹುದು. ಈ ಮೂಲಕ ಕ್ರಿಕೆಟ್ ಇತಿಹಾಸ ಒಂದು ಯುಗಾಂತ್ಯ ಕಂಡಿದೆ ಎಂಬುದು ಕ್ರಿಕೆಟ್ ತಜ್ಞರ ಮಾತಾಗಿದೆ. ಅಲ್ಲದೆ ಸಚಿನ್ & ಇತರ ಆಟಗಾರರ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಈಗ ಹತ್ತಿರದಲ್ಲೇ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+