2 ವರ್ಷ, 22 ಸಾವಿರ ಕಿಲೋ ಮೀಟರ್ ಪ್ರಯಾಣ; ನೀರಜ್‌ ಚೋಪ್ರಾ ಅವರ ವಿಶಿಷ್ಠ ಅಭಿಮಾನಿ

ಭಾರತದ ಪೋಸ್ಟರ್ ಬಾಯ್‌ ನೀರಜ್‌ ಚೋಪ್ರಾ ಅವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್‌ 6 ರಿಂದ ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಭಾರತದಲ್ಲಿ ಅಪಾರ ಅಭಿಮಾನಿಗಳ ಬಳಗ ಇದೆ. ಈಗ ಪ್ಯಾರೀಸ್‌ಗೆ ಭಾರತೀಯ ಅಭಿಮಾನಿಯೊಬ್ಬರು ಹೋಗಿದ್ದು, ಚೋಪ್ರಾ ಅವರನ್ನು ಹುರಿದಂಬಿಸಲಿದ್ದಾರೆ.

ನೀವು ಅಭಿಮಾನಿ ಅಂದರೆ ಇವರೇನು ಸಾಮಾನ್ಯ ಅಭಿಮಾನಿ ಎಂದು ಕೊಳ್ಳಬೇಡಿ. ಇವರು ಪ್ಯಾರೀಸ್‌ಗೆ ಫ್ಲೈಟ್‌ನಲ್ಲಿ ಹಾರಿ ಹೋಗಿಲ್ಲ. ಒಂದು ವೇಳೆ ವಿಮಾನದ ಮೂಲಕ ಅಲ್ಲಿಗೆ ಹೋಗಿದ್ದರೆ ಈ ಸುದ್ದಿ ಆಗುತ್ತಿರಲಿಲ್ಲ. ಏಕೆಂದರೆ, ಒಲಿಂಪಿಕ್ಸ್‌ ನೋಡಲು ಸಾಕಷ್ಟು ಅಭಿಮಾನಿಗಳು ಈಗಾಗಲೇ ಪ್ಯಾರೀಸ್‌ ತಲುಪಿದ್ದಾರೆ. ಈ ಅಭಿಮಾನಿ ಪ್ಯಾರೀಸ್‌ ತಲುಪಿದ್ದು ಸೈಕಲ್‌ನಲ್ಲಿ.. ಈ ಅಭಿಮಾನಿಯ ಹೆಸರು ಫೈಸ್ ಅಸ್ರಫ್ ಅಲಿ.

Indian Fan Cycles 22 000 Km Across 30 Countries to Cheer for Neeraj Chopra at Paris Olympics 2024

ಎರಡು ವರ್ಷಗಳ ಪ್ರಯಾಣ

ಫೈಸ್ ಅಸ್ರಫ್ ಅಲಿ ಭಾರತವನ್ನು ಬಿಟ್ಟು ಇದಾಗಲೇ ಎರಡು ವರ್ಷವೇ ಆಗಿದೆ. ಇವರು ನೀರಜ್‌ ಚೋಪ್ರಾ ಅವರ ಅಪಟ್ಟ ಅಭಿಮಾನಿ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಫೈನಲ್‌ ವೇಳೆಯೂ ಫೈಸ್ ಅಸ್ರಫ್ ಅಲಿ ಮೈದಾನದಲ್ಲಿ ಉಪಸ್ಥಿತಿರದ್ದರು. ಈಗಾಗಲೇ ಸೈಕಲ್‌ ಮೇಲೆ ಇವರು ಸುಮಾರು ಹಲವು ದೇಶಗಳನ್ನು ಭೇಟಿ ನೀಡಿದ್ದಾರೆ. ಪ್ಯಾರೀಸ್‌ ತಲುಪಲು ಇವರಿಗೆ ಎರಡು ವರ್ಷ ಬೇಕಾಯಿತು.

ಪ್ಯಾರೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಅವರ ಆಟವನ್ನು ನೋಡಲು ಇವರು ಸಹ ಆಗಮಿಸಿದ್ದಾರೆ. ಇದೇ ವೇಳೆ ಬುಡಾಪೆಸ್ಟ್‌ನಲ್ಲಿ ಚೋಪ್ರಾ ಸಹ ಇದ್ದಿರುವುದು ತಿಳಿದು ಅಲ್ಲಿಗೆ ಬಂದಿದ್ದಾರೆ. ತಮ್ಮ ರೋಲ್‌ ಮಾಡೆಲ್‌ ಅವರನ್ನು ಭೇಟಿ ಆಗಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.

22 ಸಾವರಿ ಕಿಲೋ ಮೀಟರ್ ಪ್ರಯಾಣ

ನೀವು ಲಂಡನ್‌ಗೆ ಹೋಗುವುದಾದರೆ ಪ್ಯಾರಿಸ್‌ಗೆ ಬನ್ನಿ ಮತ್ತು ಒಲಿಂಪಿಕ್ಸ್ ಅನ್ನು ಸಹ ವೀಕ್ಷಿಸಿ ಎಂದು ನೀರಜ್ ಈ ಮೊದಲೇ ಫೈಸ್ ಅಸ್ರಫ್ ಅಲಿ ಸಲಹೆ ನೀಡಿದ್ದರು. ನೀರಜ್ ಅವರ ಈ ಸಲಹೆಯ ಮೇರೆಗೆ, ಇವರು ತನ್ನ ಯೋಜನೆಯನ್ನು ಬದಲಾಯಿಸಿಕೊಂಡರು ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತಮ್ಮ ಪ್ಲ್ಯಾನ್ ಚೇಂಜ್ ಮಾಡಿದ್ದಾರೆ.

Indian Fan Cycles 22 000 Km Across 30 Countries to Cheer for Neeraj Chopra at Paris Olympics 2024

ಕೇರಳದ ಕ್ಯಾಲಿಕಟ್‌ನಿಂದ ಬರುವ ಫೈಸ್ ಅಸ್ರಫ್ ಅಲಿ ಅವರು 2 ವರ್ಷಗಳಲ್ಲಿ 22 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸೈಕಲ್‌ನಲ್ಲಿ ಪ್ರಯಾಣಿಸಿದರು ಮತ್ತು 30 ದೇಶಗಳನ್ನು ದಾಟಿದ ನಂತರ ಅವರು ಪ್ಯಾರಿಸ್ ತಲುಪಿದರು. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಐಫೆಲ್ ಟವರ್ ಮುಂಭಾಗದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಆಟಗಾರರ ಭೇಟಿ

ಅಲಿ ಅವರ ಪ್ರಯಾಣವನ್ನು ಅನೇಕ ಸ್ಟಾರ್‌ ಕ್ರಿಕೆಟ್‌ ಆಟಗಾರರು ಸಹ ಶ್ಲಾಘೀಸಿದ್ದಾರೆ. ಈ ಪ್ರಯಾಣದ ವೇಳೆ ಅವರು ಹಲವು ತೊಂದರೆಗಳನ್ನು ಅನುಭವಿಸಿದ್ದಾರೆ. ಆದರೂ ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಈ ಪ್ರವಾಸದ ವೇಳೆ ಕ್ರಿಕೆಟ್ ತಾರೆಗಳಾದ ಕ್ರಿಸ್ ಗೇಲ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಭೇಟಿ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+