ಟಿ20 ವಿಶ್ವಕಪ್ ಗೆದ್ದ ನಂತರ ಭಾರತಕ್ಕೆ ಕೋಟಿ ಕೋಟಿ ರೂಪಾಯಿ ಹಣ!

ಭಾರತ ತಂಡ ಮತ್ತೊಮ್ಮೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದೆ. ಈ ಕಾರಣಕ್ಕೆ ಭಾರತದ ಆಟಗಾರರು ಬೆವರು ಹರಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಆಟವನ್ನ ಆಡುತ್ತಿದ್ದಾರೆ. ಇನ್ನೇನು ಭಾರತ ಗೆಲುವಿಗೆ ಹತ್ತಿರವಿದೆ. ಹಾಗಾದ್ರೆ ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಯಾವ ತಂಡಕ್ಕೆ ಎಷ್ಟು ಕೋಟಿ ರೂಪಾಯಿ ಸಿಗಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕ್ರಿಕೆಟ್ ಈಗ ಜಾಗತಿಕ ಕ್ರೀಡೆಯಾಗಿ ಬೆಳೆದಿದ್ದು, ಭಾರಿ ದೊಡ್ಡ ಮೊತ್ತದ ಹಣ ಕ್ರಿಕೆಟ್ ಆಟದಿಂದ ಹರಿದು ಬರುತ್ತದೆ. ಆಟಗಾರರಿಗೆ ಇರಲಿ & ಆಟ ಆಡಿಸುವ ಸಂಸ್ಥೆಗೆ ಇರಲಿ ಭರ್ಜರಿ ಹಣ ಗ್ಯಾರಂಟಿ. ಹೀಗಿದ್ದಾಗ ಐಸಿಸಿ ನಡೆಸುವ ಟೂರ್ನಿಗಳಲ್ಲಿ ಹಣದ ಹೊಳೆ ಹರಿದು ಬರುತ್ತದೆ. ಹಾಗಾದ್ರೆ ಇದೀಗ ಐಸಿಸಿ ಟಿ20 ವಿಶ್ವಕಪ್ 2024 ರಲ್ಲಿ ಯಾವ ತಂಡ ಎಷ್ಟು ಹಣ ಪಡೆಯಲಿದೆ? ಲೀಗ್ ಹಂತದಲ್ಲೇ ಹೊರಗೆ ಹೋದವರಿಗೆ ಎಷ್ಟು ಕೋಟಿ ಕೊಡುತ್ತಾರೆ? ಭಾರತ ತಂಡಕ್ಕೆ ಎಷ್ಟು ಕೋಟಿ ರೂಪಾಯಿ ಸಿಗಲಿದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ, ಮುಂದೆ ಓದಿ.

Indian Cricket Team Will Get This Much Of Money After Winning The T20 World Cup 2024 Trophy

ಕಪ್ ಗೆದ್ದರೆ ಕೈತುಂಬಾ ಕಾಸು!

ಹೌದು, ಟಿ20 ವಿಶ್ವಕಪ್ 2024 ಗೆದ್ದು ಬೀಗುವ ತಂಡಕ್ಕೆ ಒಂದಲ್ಲ & ಎರಡಲ್ಲ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಹಣ ಸಿಗಲಿದೆ. ಹಾಗೇ ಫೈನಲ್‌ಗೆ ಬಂದು ಸೋಲುವ ತಂಡಕ್ಕೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಗಲಿದೆ. ಈ ಮೂಲಕ ಟಿ20 ವಿಶ್ವಕಪ್ 2024 ಗೆಲ್ಲುವ ತಂಡಕ್ಕೆ ಹತ್ತಾರು ಕೋಟಿ ರೂಪಾಯಿ ಹಣ ಸಿಗಲಿದೆ. ಇದು ಕೇವಲ ಆ ತಂಡಕ್ಕೆ ಸಿಗುವ ಹಣವಾಗಿದ್ದರೆ, ಮ್ಯಾನ್ ಆಫ್ ದಿ ಸೀರಿಸ್, ಅತಿಹೆಚ್ಚು ವಿಕೆಟ್ ತೆಗೆದ ಬಹುಮಾನ, ಅತಿಹೆಚ್ಚು ರನ್ ಗಳಿಸಿದ ಬಹುಮಾನ ಪ್ರತ್ಯೇಕವಾಗಿ ಸಿಗಲಿದೆ. ಹಾಗಾದ್ರೆ ಲೀಗ್ ಹಂತದಲ್ಲೇ ಹೊರಗೆ ಹೋದ ಪಾಕಿಸ್ತಾನ ರೀತಿಯ ತಂಡಕ್ಕೆ ಸಿಕ್ಕ ಹಣ ಎಷ್ಟು?

ಸೆಮಿಫೈನಲ್ ಸೋತವರಿಗೆ ಇಷ್ಟು ಕೋಟಿ!

ಟಿ20 ವಿಶ್ವಕಪ್ 2024ರ ಸೆಮಿಫೈನಲ್ ಹಂತಕ್ಕೆ ಬಂದು ಸೋತ ತಂಡಕ್ಕೆ 6 ಕೋಟಿ 58 ಲಕ್ಷ ರೂಪಾಯಿ ಸಿಕ್ಕಿದೆ. ಅಫ್ಘಾನಿಸ್ತಾನ & ಇಂಗ್ಲೆಂಡ್ ತಂಡಗಳಿಗೆ ತಲಾ 6 ಕೋಟಿ 58 ಲಕ್ಷ ರೂಪಾಯಿ ಬಹುಮಾನದ ಮೊತ್ತ ನೀಡಲಾಗಿದೆ. ಹಾಗೇ, ಸೂಪರ್ 8 ಹಂತದಲ್ಲಿ ಔಟ್ ಆಗಿ ಹೊರಗೆ ಹೋದ ತಂಡಕ್ಕೆ ತಲಾ 3 ಕೋಟಿ 19 ಲಕ್ಷದ 50 ಸಾವಿರ ರೂಪಾಯಿ ಬಹುಮಾನದ ಹಣ ಸಿಕ್ಕಿದೆ. ಮತ್ತೊಂದು ಕಡೆ 9 ರಿಂದ 12ನೇ ಸ್ಥಾನ ಪಡೆದ ತಂಡಕ್ಕೆ ಒಟ್ಟು 2 ಕೋಟಿ 6 ಲಕ್ಷ ರೂಪಾಯಿ ಸಿಕ್ಕಿದೆ. ಹಾಗೇ ಮಿಕ್ಕವರಿಗೆ ಸಮಾಧಾನಕರ ಎಂಬ ಬಹುಮಾನದ ಹಣ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+