270 ರನ್ಗೆ ಹರಿಣಗಳು ಉಡೀಸ್, ಭಾರತದ ಬೌಲಿಂಗ್ ದಾಳಿ ಎದುರು ದಕ್ಷಿಣ ಆಫ್ರಿಕಾ ಧೂಳಿಪಟ... Virat Kohli
ಭಾರತ ಕ್ರಿಕೆಟ್ ತಂಡದ ಬೌಲರ್ಗಳ ಅಬ್ಬರದ ಎದುರು ಹರಿಣಗಳ ಬ್ಯಾಟಿಂಗ್ ಪಡೆ ಇಂದು ಶೇಕ್ ಆಗಿ ಹೋಗಿತ್ತು. ಮೊದಲ ಹಾಗೂ 2ನೇ ಏಕದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪಡೆ ಇವತ್ತು ಭಾರತೀಯ ಬೌಲರ್ಗಳ ಆರ್ಭಟದ ಎದುರು ಪೆವಿಲಿಯನ್ ಪರೇಡ್ಗೆ ಮೊರೆ ಹೋಗಿತ್ತು. ಮೊದಲ ಓವರ್ನಲ್ಲೇ ಒಂದು ವಿಕೆಟ್ ಕಳೆದುಕೊಂಡು, ಆ ನಂತರ ಒಂದಿಷ್ಟು ಚೇತರಿಕೆ ಕಂಡರೂ ಮತ್ತೆ ಸಾಲು ಸಾಲು ವಿಕೆಟ್ ಉರುಳಿದ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ತಂಡ ನಲುಗಿ ಹೋಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಸೋತು ಹೋದ ನಂತರ ಸೇಡು ತೀರಿಸಿಕೊಳ್ಳಲು ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಭರ್ಜರಿ ಗೆಲುವು ಗ್ಯಾರಂಟಿ ಅಂತಾ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದರು. ಆದರೆ ಮೊದಲ ಏಕದಿನ ಪಂದ್ಯ ಗೆದ್ದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ 359 ರನ್ ಬೃಹತ್ ಟಾರ್ಗೆಟ್ ಕೊಟ್ಟಿದ್ದರೂ ರೋಚಕ ಸೋಲೇ ಸಿಕ್ಕಿತ್ತು. ಹೀಗಿದ್ದಾಗ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ಗೆದ್ದು ಸರಣಿ ವಶಕ್ಕೆ ಪಡೆಯಲು ಭಾರತದ ಆಟಗಾರರು ಅಖಾಡ ಪ್ರವೇಶ ಮಾಡಿದ್ದರು. ಇಂತಹ ಸ್ಥಿತಿಯಲ್ಲಿ ಇದೀಗ ಸೌತ್ ಆಫ್ರಿಕಾ ಸೋತು ಹೋಗುವುದು ಬಹುತೇಕ ಗ್ಯಾರಂಟಿ ಆಗಿದೆ.

270 ರನ್ಗೆ ಹರಿಣಗಳು ಉಡೀಸ್!
ಹೌದು, ದೊಡ್ಡ ದೊಡ್ಡ ಸ್ಟಾರ್ ಬ್ಯಾಟರ್ಸ್ ಇದ್ದರೂ ಇವತ್ತು ದಕ್ಷಿಣ ಆಫ್ರಿಕಾ ತಂಡ ಪರದಾಡಿ ಹೋಗಿತ್ತು. ನಿಗದಿತ 50 ಓವರ್ಗಳ ಪೈಕಿ ಕೇವಲ 47.5 ಓವರ್ ಆಡಿದ ದಕ್ಷಿಣ ಆಫ್ರಿಕಾ ತಂಡ 270 ರನ್ಗೆ ಆಲೌಟ್ ಆಗಿ ಪೆವಿಲಿಯನ್ ಸೇರಿತು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಡಿಕಾಕ್ 106 ರನ್ ಹಾಗೂ ಟೆಂಬಾ ಬವುಮಾ 48 ರನ್ ಗಳಿಸಿದ್ದು ಬಿಟ್ಟರೆ ಇನ್ಯಾರೂ ಸರಿಯಾಗಿ ಆಡಲೇ ಇಲ್ಲ. ಈ ಮೂಲಕ ಭಾರತದ ಪರವಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಹಾಗೂ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು.
20 ಪಂದ್ಯ ಸೋಲಿನ ನಂತರ...
2023 ಏಕದಿನ ವಿಶ್ವಕಪ್ ನಂತರ ಭಾರತ ತಂಡ ಸತತ 20 ಪಂದ್ಯಗಳಲ್ಲಿ ಟಾಸ್ ಸೋತು ಹೋಗಿತ್ತು. ಅಲ್ಲದೆ ಭಾರತ ತಂಡಕ್ಕೆ ಟಾಸ್ ಸೋಲಿನ ವಿಚಾರ ದೊಡ್ಡ ತಲೆನೋವು ತರಿಸುವ ಜೊತೆಗೆ ಬೇಡದ ದಾಖಲೆ ಕೂಡ ಸೃಷ್ಟಿ ಆಗಿತ್ತು. ಹೀಗಿದ್ದಾಗ ಸತತ 20 ಪಂದ್ಯ ಸೋಲಿನ ನಂತರ ಟಾಸ್ ವಿಚಾರದಲ್ಲಿ ಭಾರತಕ್ಕೆ ಇಂದು ಭರ್ಜರಿ ಜಯ ಸಿಕ್ಕಿತ್ತು. ಹರಿಣಗಳು ಅಂದ್ರೆ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಮತ್ತು ಕೊನೆಯ ಒನ್ ಡೇ ಮ್ಯಾಚ್ ಅಖಾಡದಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ಕೈಗೊಂಡಿದ್ದ ಇದೇ ನಿರ್ಧಾರವು ಈಗ ಪ್ಲಸ್ ಪಾಯಿಂಟ್ ಆಗಿದೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ












Click it and Unblock the Notifications