IPL 2026: RCB ಫ್ಯಾನ್ಸ್‌ಗಾಗಿ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ, ಎಲ್ಲಿಂದ ಎಲ್ಲಿಗೆ? ಮಾರ್ಗ ಡಿಟೇಲ್ಸ್

ಬಹುನಿರೀಕ್ಷೆಯ ಐಪಿಎಲ್ 2026 ಟಿ 20 ಪಂದ್ಯಾವಳಿಗಳು ಇಂದಿನಿಂದ ಆರಂಭವಾಗಲಿವೆ. ಇಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಆವೃತ್ತಿಯ ಮೊದಲ ಮ್ಯಾಚನ್ನು ಸನ್‌ರೈಸಸ್‌ ಹೈದರಾಬಾದ್ (SRH) ಜೊತೆಗೆ ಆಡಲಿದೆ. ಈ ಪಂದ್ಯಾವಳಿ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಆರ್‍‌ಸಿಬಿ ಅಭಿಮಾನಿಗಳು ಆಗಮಿಸಲಿದ್ದಾರೆ. ಅವರಿಗೆಲ್ಲ ಸಂಚಾರಕ್ಕೆ ಅನುಕೂಲ ಆಗಲಿ ಎಂದು ನಮ್ಮ ಮೆಟ್ರೋ ಬೆನ್ನಲ್ಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿವಿಧ ಮಾರ್ಗಗಳಿಂದ ಬಸ್‌ಗಳ ಸಂಚಾರ ಆರಂಭಿಸಿದೆ. ಈ ಬಸ್‌ಗಳ ಮಾರ್ಗ, ನಿಲ್ದಾಣ, ಸಮಯ ಮಾಹಿತಿ ಇಲ್ಲಿದೆ.

ಇಂದು ಶನಿವಾರ ಮಾರ್ಚ್ 28 ಹಾಗೂ ಏಪ್ರಿಲ್ 05 ರಂದು IPL T20 ಕ್ರಿಕೆಟ್ ಪಂದ್ಯಾವಳಿಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಸದರಿ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು-ಹೋಗುವ ವೀಕ್ಷಕರಿಗೆ ದಟ್ಟಣೆಗನುಗುಣವಾಗಿ ಬಿಎಂಟಿಸಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಪ್ರದೇಶಗಳಿಗೆ ನಡುವೆ ಸಾರಿಗೆ ಬಸ್‌ಗಳನ್ನು ಬಿಟ್ಟಿದೆ.

IPL 2026

ಬಿಎಂಟಿಸಿ ಬಸ್ ಎಲ್ಲಿಂದ ಎಲ್ಲಿಗೆ?

1. ಎಸ್.ಬಿ. ಎಸ್-1ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕಾಡುಗೋಡಿ ಬಸ್‌ ನಿಲ್ದಾಣ ಹೆಚ್.ಎ.ಎಲ್‌ರಸ್ತೆ

2. ಜಿ-2 ಸರ್ಜಾಪುರ

3. ಜಿ-3 ಎಲೆಕ್ಟ್ರಾನಿಕ್‌ ಸಿಟಿ (ಹೊಸೂರುರಸ್ತೆ)

4. ಜಿ-4 ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್

5. ಜಿ-7 ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ)

6. ಜಿ-10 ಆರ್.ಕೆ. ಹೆಗಡೆ ನಗರ - ಯಲಹಂಕ (ನಾಗವಾರ, ಟ್ಯಾನರಿ ರಸ್ತೆ)

7. 317 ಜಿ ಹೊಸಕೋಟೆ

8. 13 ಬನಶಂಕರಿಗೆ ಸಂಚಾರ ಸೇವೆ ನೀಡಲಿವೆ. ಯಾರೆಲ್ಲ ಈ ಪ್ರದೇಶಗಳಿಂದ ಬಂದು ಕ್ರಿಕೆಟ್ ವೀಕ್ಷಿಸುತ್ತೀರೋ ಅವರೆಲ್ಲ ಮರಳಿ ಬಿಎಂಟಿಸಿ ಬಸ್‌ಗಳ ಮೂಲಕ ಮನೆ ಸೇರಬಹುದಾಗಿದೆ.

ನಮ್ಮ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರಲ್ಲಿ ಆರ್‍‌ಸಿಬಿ ಪಂದ್ಯ ನಡೆಯುವ ದಿನ ನಮ್ಮ ಮೆಟ್ರೋ ಸೇವೆ ರಾತ್ರಿ ನಿಗದಿತ ಸಮಯಕ್ಕೆ ಕೊನೆಗೊಳ್ಳುವ ಬದಲಾಗಿ ರಾತ್ರಿ 2 (ಬೆಳಗಿನ ಜಾವ) ಗಂಟವರೆಗೆ ಸೇವೆ ನೀಡಲಿದೆ. ಬೈಯಪ್ಪನಹಳ್ಳಿ, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ ರಾತ್ರಿ 12.45 ಗಂಟೆಗೆ, ವೈಟ್‌ಫಿಲ್ಡ್, ಚಲಘಟ್ಟ ಮೆಟ್ರೋ ನಿಲ್ದಾಣದಿಂದ 12.45 ಗಂಟೆಗೆ ಕೊನೆ ರೈಲು ಸಂಚಾರ ನಡೆಸಲಿದೆ. ಸುಮಾರು 44 ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಮೆಟ್ರೋ ಸ್ಮಾರ್ಟ್ ಕಾರ್ಡ್, ಕೂಪನ್, ಪೇಪರ್ ಟಿಕೆಟ್ ಸಹಿತ ಸಂಚಾರ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಕೆಟ್ ಪಂದ್ಯದ ಟಿಕೆಟ್ ಇದ್ದವರಿಗೆ ಉಚಿತ ಪ್ರಯಾಣ?

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿಯು ನಡುವೆ ಮಾತುಕತೆ ಆಗಿದೆ. ಆರ್‍‌ಸಿಬಿ ಪಂದ್ಯದ ಟಿಕೆಟ್ ಹೊಂದಿರುವವರಿಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮತ್ತು ಅಲ್ಲಿಂದ ತೆರಳುವವರಿಗೆ ಉಚಿತ ಮೆಟ್ರೋ ಪ್ರಯಾಣ ನಿಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಅಂದರೆ ಕ್ರೀಡಾಂಗಣಕ್ಕೆ ಹತ್ತಿರದ ನಿಲ್ದಾಣ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ರೌಂಡ್ ಅಪ್ ಮೆಟ್ರೋ ಪ್ರಯಾಣ ಒದಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ, ಅಭಿಮಾನಿಗಳು ನಮ್ಮ ಮೆಟ್ರೋದ ಸ್ವಯಂಚಾಲಿತ ದರ ಸಂಗ್ರಹ ವ್ಯವಸ್ಥೆ (ಎಎಫ್‌ಸಿ) ಗೇಟ್‌ಗಳಲ್ಲಿ ತಮ್ಮ ಪಂದ್ಯದ ಟಿಕೆಟ್‌ನಲ್ಲಿ ಡಿಜಿಟಲ್ ಮತ್ತು ಭೌತಿಕ ಎರಡೂ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+