ಭಾರತಕ್ಕೆ ಭರ್ಜರಿ ಗೆಲುವು ಗ್ಯಾರಂಟಿ, ಸೆಡೆ ಆಂಗ್ಲರಿಗೆ ವಡೆ ರೆಡಿ! India vs England
ಭಾರತ ತಂಡದ ಅಬ್ಬರದ ಎದುರು ಆಂಗ್ಲರ ಪಡೆ ಬೆಚ್ಚಿ ಬಿದ್ದಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ಕೊಡುತ್ತಿರುವ ಒಂದೊಂದು ಏಟಿಗೂ ನಲುಗಿ ಹೋಗಿರುವ ಇಂಗ್ಲೆಂಡ್ ತಂಡ, ಸೋಲಿಗೆ ಪ್ರತಿಕ್ಷಣ ಹತ್ತಿರ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಭೀಕರ ಸೋಲು ಕಂಡಿತ್ತು. ಆ ನಂತರ ಎಚ್ಚೆತ್ತುಕೊಂಡು ಭರ್ಜರಿಯಾಗಿ ಆಡಿದ ಭಾರತದ ಆಟಗಾರರು 2ನೇ ಟೆಸ್ಟ್ ಮ್ಯಾಚ್ ಗೆದ್ದರು, ಇದೀಗ 3ನೇ ಮ್ಯಾಚ್ ಕೂಡ ಭಾರತದ ಕೈಗೆ ಸುಲಭದ ತುತ್ತು ಆಗುತ್ತಿದೆ.
ಹೌದು, ಭಾರತ ಕ್ರಿಕೆಟ್ ತಂಡದ ಆಟಕ್ಕೆ ಬೆಚ್ಚಿಬಿದ್ದಿರುವ ಇಂಗ್ಲೆಂಡ್ ತಂಡ ಇದೀಗ ಧೂಳಿಪಟವಾಗಿದೆ. ಇದರ ಜೊತೆಗೆ ಭಾರತದ ಎದುರು ಕೆಲವೇ ರನ್‌ಗಳಿಗೆ ಕುಸಿತ ಕಂಡಿರುವ ಇಂಗ್ಲೆಂಡ್ ತಂಡ ಭಾರತೀಯ ಕ್ರಿಕೆಟ್ ತಂಡಕ್ಕೆ 3ನೇ ಟೆಸ್ಟ್ ಪಂದ್ಯದಲ್ಲಿ ತುಂಬಾ ಕಡಿಮೆ ರನ್‌ಗಳ ಟಾರ್ಗೆಟ್ ನೀಡಿದೆ. 387 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಮುಗಿಸಿದ್ದ ಇಂಗ್ಲೆಂಡ್ ತಂಡ, ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಇದೀಗ ಕೇವಲ 192 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ ಗೆದ್ದು ಬೀಗಲು ಇದೀಗ ಕೇವಲ 192 ರನ್ ಬೇಕು. ಭಾರತೀಯ ಆಟಗಾರರು ಅಬ್ಬರಿಸುತ್ತಿರುವ ರೀತಿ ನೋಡಿದರೆ ಭಾರತ ತಂಡ ಈ ಪಂದ್ಯ ಗೆಲ್ಲುವುದು ಪಕ್ಕಾ ಎನ್ನಲಾಗುತ್ತಿದೆ.

ಭಾರತ ತಂಡಕ್ಕೆ ಗೆಲುವು ಗ್ಯಾರಂಟಿ?
ಅಂದಹಾಗೆ ಭಾರತದ ಹೊಸ ತಂಡದಲ್ಲಿ ಯುವಕರೇ ಹೆಚ್ಚಾಗಿದ್ದು, ಭರ್ಜರಿಯಾಗಿ ತಂಡವನ್ನ ಕಟ್ಟಿದ್ದಾರೆ. ಈ ಲೆಕ್ಕಾಚಾರದಲ್ಲಿ ಭಾರತ ತಂಡ ಇದೀಗ ಗೆದ್ದು ಬೀಗುವುದು ಕೂಡ ಬಹುತೇಕ ಗ್ಯಾರಂಟಿ ಎನ್ನಬಹುದು. ಅದರಲ್ಲೂ ಭಾರತದ ಬ್ಯಾಟಿಂಗ್ ಪಡೆಯ ಎದುರು ಇಂಗ್ಲೆಂಡ್ ಬೌಲಿಂಗ್ ಪರದಾಡುತ್ತಿದೆ, ಮೊದಲನೇ ಇನ್ನಿಂಗ್ಸ್ ರೀತಿಯಲ್ಲೇ ಇಲ್ಲಿಯೂ ಇಂಗ್ಲೆಂಡ್ ಬೌಲರ್‌ಗಳು ಪರದಾಡಿದರೆ ಭಾರತಕ್ಕೆ ಸುಲಭದ ಗೆಲುವು ಕೂಡ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಎಲ್ಲರ ಕಣ್ಣು ಇದೀಗ ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದ ಮೇಲೆ ಇದೆ.












Click it and Unblock the Notifications