‘ಈ ಸಲ ಕಪ್ ನಮ್ದೇ’ ಅಂತಿದ್ದಾರೆ ಭಾರತೀಯರು!
ಭಾರತ ಕ್ರಿಕೆಟ್ ತಂಡ ಇಂದು ಇತಿಹಾಸ ಬರೆಯಲು ಸಜ್ಜಾಗಿದೆ. ಟಿ20 ವಿಶ್ವಕಪ್ 2024 ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಆದರೆ ಮ್ಯಾಚ್ ಶುರುವಾಗುವ ಮೊದಲೇ ಭಾರತ ತಂಡಕ್ಕೆ ಕಪ್ ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು. ಆರ್‌ಸಿಬಿ ಅಭಿಮಾನಿಗಳ ಮೆಚ್ಚಿನ ಸಾಲು 'ಈ ಸಲ ಕಪ್ ನಮ್ದೇ' ಈಗ ಮತ್ತೆ ವೈರಲ್ ಆಗುತ್ತಿದೆ. ಹಾಗಾದರೆ, ಭಾರತ ತಂಡ ಇಂದು ಟಿ20 ವಿಶ್ವಕಪ್ ಗೆಲ್ಲುವುದು ಗ್ಯಾರಂಟಿನಾ? ಹೌದು ಅಂತಿದ್ದಾರೆ ತಜ್ಞರು, ಈ ಬಗ್ಗೆ ಅಂಕಿ & ಅಂಶ ತಿಳಿಯೋಣ ಬನ್ನಿ.
ಭಾರತ ತಂಡ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಾಜನಂತೆ ಮೆರೆಯುತ್ತಿದೆ. ಈ ಅಬ್ಬರಕ್ಕೆ ಕಾರಣ ಆಗಿರುವುದು ಭಾರತ ತಂಡದ ಒಗ್ಗಟ್ಟು. ಅದು ಹೇಗೆ ಅಂದ್ರೆ ಒಂದು ಕಡೆ ಬ್ಯಾಟಿಂಗ್ ಲೈನ್ ಪಂದ್ಯ ಗೆಲ್ಲಿಸಲು ವಿಫಲವಾದ ಸಮಯದಲ್ಲಿ ಬೌಲರ್ಸ್ ಸಹಾಯ ಮಾಡಿದ್ದಾರೆ. ಹಾಗೇ ಬೌಲರ್ಸ್ ವಿಫಲವಾದ ಸಮಯದಲ್ಲಿ ಭಾರತದ ದಾಂಡಿಗರು ಈ ವಿಚಾರದಲ್ಲಿ ಅತ್ಯುತ್ತಮ ಆಟ ಆಡಿ ಉತ್ತಮವಾಗಿ ರನ್ ಬಾರಿಸಿದ್ದಾರೆ. ಹೀಗಿದ್ದಾಗ ಇಂದು ಭಾರತ ಕಪ್ ಗೆಲ್ಲುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು, ಆ ಅಂಕಿ & ಅಂಶಗಳ ಬಗ್ಗೆ ಮಾಹಿತಿಗೆ ಮುಂದೆ ಓದಿ.

ದಕ್ಷಿಣ ಆಫ್ರಿಕಾಗೆ 'ಚೋಕರ್ಸ್' ಪಟ್ಟ!
ಪ್ರಮುಖ ಪಂದ್ಯಗಳಲ್ಲಿ ಸೋಲು ಕಾಣುವುದು ದಕ್ಷಿಣ ಆಫ್ರಿಕಾ ತಂಡಕ್ಕೆ ಮಾಮೂಲು. ಯಾಕಂದ್ರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಡಲು ಶುರು ಮಾಡಿ ಹಲವು ದಶಕಗಳೇ ಕಳೆದು ಹೋಗಿವೆ. ಹೀಗಿದ್ದರೂ ಪ್ರಮುಖ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಇಲ್ಲ. ಇನ್ನು ಸೆಮಿಫೈನಲ್ & ಫೈನಲ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಎಡವಟ್ಟು ಮಾಡಿಕೊಂಡು, ಹೊರಗೆ ಬೀಳುವುದು ಮಾಮೂಲು. 2015, 2019, 2023 ಹೀಗೆ ಹಲವು ವಿಶ್ವಕಪ್‌ನಲ್ಲಿ ಬಲಾಢ್ಯ ತಂಡ ಇದ್ದರೂ ದಕ್ಷಿಣ ಆಫ್ರಿಕಾ ಸೋತು ಸುಣ್ಣವಾಗಿದೆ.
ಬಲಿಷ್ಠ ಭಾರತಕ್ಕೆ ಸಖತ್ ಧೈರ್ಯ!
ಭಾರತ ತಂಡ ಬಲಿಷ್ಠವಾಗಿದೆ, ಭಾರತ ಕ್ರಿಕೆಟ್ ತಂಡ ಈಗ ಎಷ್ಟು ಬಲಿಷ್ಠವಾಗಿದೆ ಅಂದ್ರೆ ಆಸ್ಟ್ರೇಲಿಯಾ ಕೂಡ ಭಾರತದ ಎದುರು ಸುಲಭವಾಗಿ ಸೋತು ಹೋಗಿದೆ. ಇದೇ ರೀತಿ 2024ರ ಟಿ20 ವಿಶ್ವಕಪ್ ಅಖಾಡದಲ್ಲಿ ಭಾರತ ಪೂರ್ತಿ ಅಬ್ಬರಿಸಿ ಬೊಬ್ಬಿರಿದಿದೆ. ಈಗಲೂ ಅಷ್ಟೇ ಫೈನಲ್ ಪಂದ್ಯಕ್ಕೆ ಭಾರತ ತಂಡ ರೋಹಿತ್ ಶರ್ಮಾ ನೇತೃತ್ವದಲ್ಲಿ ಡಿಸೈನ್ & ಡಿಸೈನ್ ಪ್ಲಾನ್ ಮಾಡಿದೆ. ಹಾಗೇ ಗೆದ್ದು ಬೀಗುವ ವಿಶ್ವಾಸ ಕೂಡ ಹೊಂದಿದೆ.
ಆರ್‌ಸಿಬಿ ತಂಡದ ಟ್ಯಾಗ್‌ಲೈನ್ ವೈರಲ್!
2024 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯ ಕೂಡ ಸೋತಿಲ್ಲ. ಈ ಕಾರಣಕ್ಕೆ ಭಾರತದ ಗೆಲುವು ಫಿಕ್ಸ್ ಅಂತಿದ್ದಾರೆ ಫ್ಯಾನ್ಸ್. ಇನ್ನೂ ಮ್ಯಾಚ್ ಶುರುವಾಗುವ ಮೊದಲೇ ಭಾರತಕ್ಕೆ ಗೆಲುವು ಗ್ಯಾರಂಟಿ ಅಂತಾ ಅಭಿಮಾನಿಗಳು ಸಂಭ್ರಮಾಚರಣೆಗಾಗಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ಸದಾ ಹೇಳುವ ಮಾತು & ಆರ್‌ಸಿಬಿ ತಂಡದ ಅಘೋಷಿತ ಟ್ಯಾಗ್‌ಲೈನ್ 'ಈ ಸಲ ಕಪ್ ನಮ್ದೇ' ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications