Lakshya Sen: ಇತಿಹಾಸ ನಿರ್ಮಿಸಿದ ಲಕ್ಷ್ಯ ಸೇನ್ ಟ್ಯಾಟೂಗಳ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರನ ಪರಿಚಯ ಇಡಿ ವಿಶ್ವಕ್ಕೆ ಆಗಿದೆ. ಇಷ್ಟು ದಿನ ಬರಿ ಬ್ಯಾಡ್ಮಿಂಟನ್ ಲೋಕಕ್ಕೆ ತಿಳಿದಿದ್ದ ವಿಷಯ ಈಗ ವಿಶ್ವದಲ್ಲೆಡೆ ಪಸರಿಸಿದೆ. ಪ್ಯಾರಿಸ್ ಅಂಗಳದಲ್ಲಿ ಭಾರತದ 22 ವರ್ಷ ವಯಸ್ಸಿನ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ತಮ್ಮ ಪ್ರಭಾವಿ ಆಟದ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ.
ಒಲಿಂಪಿಕ್ಸ್ ಕ್ರೀಡಾ ಕೂಟದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಪಾತ್ರರರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಟೊಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ಅವರೊಂದಿಗೆ ಜಿದ್ದಾಜಿದ್ದಿನ ಫೈಟ್‌ನಲ್ಲಿ ಸೇನ್ ಸೋಲು ಕಂಡರು. ಈ ಪಂದ್ಯದಲ್ಲಿ ಲಕ್ಷ್ಯ ಆಡಿದ ಧಾಟಿಗೆ ಬ್ಯಾಡ್ಮಿಂಟನ್ ಜಗತ್ತು ಬೆರಗು ಗಣ್ಣಿನಿಂದ ನೋಡುತ್ತಿದೆ.

ನ್ಯೂ ಪೋಸ್ಟರ್ ಬಾಯ್
ಭಾರತದ ನ್ಯೂ ಪೋಸ್ಟರ್ ಬಾಯ್ ಎಂದೇ ಬಿಂಬಿತವಾಗುತ್ತಿರುವ ಲಕ್ಷ್ಯ ಸೇನ್ ತಮ್ಮ ಭರ್ಜರಿ ಫಿಟ್ನೆಸ್ ಹಾಗೂ ತಮ್ಮ ಆಟದ ಧಾಟಿಯ ಮೂಲಕ ಗಮನ ಸೆಳೆದಿದ್ದಾರೆ. ನೂ ಲುಕ್ ಶಾಟ್ ಹಾಗೂ ಸ್ನ್ಯಾಷ್ ಶಾಟ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಾಹಾಗೆ ಲಕ್ಷ್ಯ ಸೇನ್ ಆಡುವಾಗ ಅವರ ಎಡ ಕುತ್ತಿಗೆಯ ಮೇಲೆ ಇರುವ ಅಕ್ಷರಗಳು ಎಲ್ಲರನ್ನು ಆಕರ್ಷಿಸುತ್ತದೆ. ಅದ್ರಲ್ಲೂ ಸ್ನ್ಯಾಷ್‌ಗಳನ್ನು ಬಾರಿಸುವಾಗಲಂತೂ ಅದು ಎದ್ದು ಕಾಣುತ್ತದೆ.
ಎದ್ದು ಕಾಣುವ ಟ್ಯಾಟೂ
ಲಕ್ಷ್ಯ ಸೇನ್ ಇಂಗ್ಲೀಷ್ ಭಾಷೆಯಲ್ಲಿ ಒಂದೊಂದೇ ಅಕ್ಷರವನ್ನು ಕೆಳಗೆ ಬರೆದು, ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟು ಅವರ ಆಟದ ಸ್ಟೈಲಿಗೆ ಹೇಳಿ ಮಾಡಿಸಿದ ರೀತಿ ಇದೆ. ಈ ಟ್ಯಾಟೂದಲ್ಲಿ Sky is The Limit ಎಂದು ಬರೆದು ಕೊಂಡಿದ್ದಾರೆ. ಇದರ ಅರ್ಥವನ್ನು ಇವರ ಆಟದ ಧಾಟಿಗೆ ಕಂಪೇರ್ ಮಾಡಿದರೆ, ನಿಮ್ಮ ಯಶಸ್ಸಿಗೆ ಯಾವುದೇ ಮಿತಿ ಇರಬಾರದು ಎಂಬ ಅರ್ಥದಲ್ಲಿದೆ. ಈ ಟ್ಯಾಗ್ ಲೈನ್ ಅವರ ಜೀವನ ಹಾಗೂ ಆಟದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ಈ ಟ್ಯಾಟೂಗಳ ಅರ್ಥವೇನು?
ಲಕ್ಷ್ಯ ಸೇನ್ ಆಟವನ್ನು ಒಮ್ಮೆ ನೋಡಿದಾಗ ತುಂಬ ಖುಷಿ ಆಗುತ್ತದೆ. ಇವರಲ್ಲಿ ನೆವರ್ ಗಿವ್ ಅಪ್ ಆಟಿಟ್ಯೂಡ್ ಎದ್ದು ಕಾಣುತ್ತದೆ. ಇದನ್ನು ಸುಲಭವಾಗಿ ಹೇಳುವುದಾದರೆ ಬಿಟ್ಟುಕೊಡದ ಮನಸ್ಥಿತಿ. ಇವರ ಆಟವನ್ನು ನೋಡಿದರೆ ಇದು ಎದ್ದು ಕಾಣುತ್ತದೆ. ನೆಟ್ ಮುಂಭಾಗದಲ್ಲಿ ಬಿದ್ದ ಷೆಟಲ್‌ನ್ನು ಡೈವ್ ಮಾಡಿ ರಿಟರ್ನ್ ಮಾಡುವ ಲಕ್ಷ್ಯ, ಕೆಲವೇ ಸೆಕೆಂಡುಗಳಲ್ಲಿ ಚೇತರಿಸಿಕೊಂಡು ಅಂಗಳದ ಇನ್ನೊಂದು ತುದಿಯನ್ನು ಮುಟ್ಟುತ್ತಾರೆ. ಅಬ್ಬಾ ಇವರ ಫಿಟ್ನೆಸ್ ಕಂಡು ಭಾರತೀಯರು ಫುಲ್ ಫಿದಾ ಆಗಿದ್ದಂತೂ ಸುಳ್ಳಲ್ಲ. ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಮಿನಿ ವಿರಾಟ್ ಕೊಹ್ಲಿಯ ರೀತಿ ಲಕ್ಷ್ಯ ಕಾಣಿಸಿಕೊಳ್ಳುತ್ತಾರೆ.

ಇನ್ನು ಲಕ್ಷ್ಯ ಎಡಗೈ ಮೇಲಗಡೆ Believe Never Give Up ಎಂಬ ಟ್ಯಾಟು ಎದ್ದು ಕಾಣುತ್ತದೆ. ಅಲ್ಲದೆ ಕೆಳ ಭಾಗದಲ್ಲಿ ಬೇಟೆಗೆ ಹೆಸರು ವಾಸಿಯಾದ ನರಿಯನ್ನು ಹೋಲುವ ಒಂದು ಪ್ರಾಣಿ ಹಾಗೂ ಹುಲಿಯ ಟ್ಯಾಟೂಗಳು ಕಾಣುತ್ತವೆ. ಲಕ್ಷ್ಯ ಸೇನ್ ಆಟದ ಧಾಟಿಗೆ ಇದು ಮೆರಗು ನೀಡುವಂತಿದೆ.
ಈ ಬಾರಿ ಲಕ್ಷ್ಯ ಸೇನ್ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಡುವಲ್ಲಿ ವಿಫಲರಾಗಿರಬಹುದು. ಆದರೆ ತಮ್ಮಲ್ಲಿ ಇನ್ನು ವಯಸ್ಸು ಹಾಗೂ ಕ್ಷಮತೆ ಸಾಕಷ್ಟು ಇದೆ ಎಂಬುದನ್ನು ಸಾರೀ ಹೇಳಿದ್ದಾರೆ.












Click it and Unblock the Notifications