India vs Pakistan: ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ; ವಿಶ್ವ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ 2024 ಕಪ್ ಗೆದ್ದ ಭಾರತ
ವಿಶ್ವ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ 2024ರ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಭಾರತ ತಂಡದ ಅಭಿಮಾನಿಗಳಿಗೆ, ಈಗ ಯುವರಾಜ್ ಸಿಂಗ್ ಪಡೆ ಮತ್ತೊಂದು ಪ್ರಶಸ್ತಿ ಗೆದ್ದುಕೊಟ್ಟಿದೆ.
ಟಾಸ್ ಗೆದ್ದ ಪಾಕಿಸ್ತಾನ ಚಾಂಪಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ಸ್ಫೋಟಕ ಬ್ಯಾಟಿಂಗ್ ಮಾಡಲು ಪರದಾಡಿದ ಪಾಕಿಸ್ತಾನದ ಆಟಗಾರರು ಅಂತಿಮವಾಗಿ 156 ರನ್ ಕಲೆಹಾಕಿದರು. 19.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಬೆನ್ನತ್ತಿದ ಭಾರತ ಪ್ರತಿಷ್ಠಿತ ಪ್ರಶಸ್ತಿಯನ್ನು ಎತ್ತಿಹಿಡಿಯಿತು.

ಕಮ್ರಾನ್ ಮಲಿಕ್ 24 ರನ್, ಶಾರ್ಜೀಲ್ ಖಾನ್ 12 ರನ್, ಮಕ್ಸೂದ್ 21 ರನ್, ಶೋಯಬ್ ಮಲಿಕ್ 41 ರನ್ ಗಳಿಸಿದರು. ನಾಯಕ ಯೂನಸ್ ಖಾನ್ ಕೇವಲ 7 ರನ್ ಗಳಿಸಿ ಔಟಾದರು. ಮಿಸ್ಬಾ ಉಲ್ ಹಕ್ 18 ರನ್ ಗಳಿಸಿದರೆ, ಸೋಹಲ್ ತನ್ವೀರ್ 9 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿ ತಂಡದ ಮೊತ್ತ 150 ರನ್ ದಾಟಿಸುವಲ್ಲಿ ಯಶಸ್ವಿಯಾದರು.
ಭಾರತದ ಪರವಾಗಿ ಅನುರೀತ್ ಸಿಂಗ್ 4 ಓವರ್ ಗಳಲ್ಲಿ 43 ರನ್ ನೀಡಿ 3 ವಿಕೆಟ್ ಪಡೆದರು. ವಿನಯ್ ಕುಮಾರ್, ಪವನ್ ನೇಗಿ ಮತ್ತು ಇರ್ಫಾನ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು.
ಅಂಬಾಟಿ ರಾಯುಡು ಅರ್ಧಶತಕ
ಈ ಮೊತ್ತವನ್ನು ಬೆನ್ನತ್ತಿದ ಭಾರತ ಸ್ಫೋಟಕ ಆರಂಭ ಪಡೆದರೂ ಮೊದಲ ವಿಕೆಟ್ ಬೇಗನೆ ಕಳೆದುಕೊಂಡಿತು. ರಾಬಿನ್ ಉತ್ತಪ್ಪ 10 ರನ್ ಗಳಿಸಿ ಔಟಾದರು. ಸುರೇಶ್ ರೈನಾ ಕೂಡ 4 ರನ್ ಗಳಿಸಿ ಔಟಾದರು. ಅಂಬಾಟಿ ರಾಯುಡು 30 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ 50 ರನ್ ಗಳಿಸಿ ಭಾರತ ತಂಡಕ್ಕೆ ಆಸರೆಯಾದರು.
ಗುರ್ಕೀರತ್ ಸಿಂಗ್ ಮನ್ ಕೂಡ 33 ಎಸೆತಗಳಲ್ಲಿ 34 ರನ್ ಗಳಿಸಿ ಅಂಬಾಟಿ ರಾಯುಡು ಅವರಿಗೆ ಬೆಂಬಲವಾದರು. ಯೂಸುಫ್ ಪಠಾಣ್ 16 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಭಾರತದ ಗೆಲುವನ್ನು ಸುಲಭವಾಗಿಸಿದರು.
ಅಂತಿಮವಾಗಿ ಯುವರಾಜ್ ಸಿಂಗ್ 22 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದರೆ, ಯೂಸುಫ್ ಪಠಾಣ್ 4 ಎಸೆತಗಳಲ್ಲಿ 5 ರನ್ ಗಳಿಸುವ ಮೂಲಕ ಭಾರತವನ್ನು ಗೆಲುವಿನ ದಡ ತಲುಪಿಸಿದರು.
ಎರಡು ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಅಂಬಟಿ ರಾಯುಡು, ಸುರೇಶ್ ರೈನಾ, ಯುವರಾಜ್ ಸಿಂಗ್ (ನಾಯಕ), ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪವನ್ ನೇಗಿ, ವಿನಯ್ ಕುಮಾರ್, ಹರ್ಭಜನ್ ಸಿಂಗ್, ರಾಹುಲ್ ಶುಕ್ಲಾ, ಅನುರೀತ್ ಸಿಂಗ್, ಗುರುಕೀರತ್ ಸಿಂಗ್ ಮಾನ್.
ಪಾಕಿಸ್ತಾನ: ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ಶರ್ಜೀಲ್ ಖಾನ್, ಸೊಹೈಬ್ ಮಕ್ಸೂದ್, ಶೋಯೆಬ್ ಮಲಿಕ್, ಯೂನಿಸ್ ಖಾನ್ (ನಾಯಕ), ಶಾಹಿದ್ ಅಫ್ರಿದಿ, ಮಿಸ್ಬಾ-ಉಲ್-ಹಕ್, ಅಮೀರ್ ಯಾಮಿನ್, ಸೊಹೈಲ್ ತನ್ವಿರ್, ವಹಾಬ್ ರಿಯಾಜ್, ಸೊಹೈಲ್ ಖಾನ್, ಸಯೀದ್ ಅಜ್ಮಲ್.












Click it and Unblock the Notifications